ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್ ರ‍್ಯಾಲಿ: ಎಷ್ಟು ದಿನ, ಆಯ್ಕೆ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ

ಸೇನೆಗೆ ಸೇರಬೇಕು, ದೇಶದ ರಕ್ಷಣೆ ಮಾಡಬೇಕು. ಆ ಮೂಲಕ ತಮ್ಮ ಬದುಕನ್ನು ಕೂಡ ಕಟ್ಟಿಕೊಳ್ಳಬೇಕು ಅನ್ನೋದು ಲಕ್ಷಾಂತರ ಯುವಕರ ಆಶಯವಾಗಿದೆ. ಅದಕ್ಕಾಗಿ ಅಭ್ಯರ್ಥಿಗಳು ಅನೇಕ ವರ್ಷಗಳಿಂದ ತಯಾರಿ ಕೂಡ ಮಾಡಿಕೊಂಡಿರುತ್ತಾರೆ. ಇಂತಹ ಕನಸನ್ನು ಕಂಡವರ ನನಸು ಮಾಡಲು ಭಾರತೀಯ ಸೇನೆ ಮುಂದಾಗಿದ್ದು, ಕೊಪ್ಪಳದಲ್ಲಿ ಸೇನೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಕೊಪ್ಪಳದಲ್ಲಿ ಉತ್ತರ ಕರ್ನಾಟಕ ಭಾಗದ ಅಗ್ನಿವೀರ್ ರ‍್ಯಾಲಿ: ಎಷ್ಟು ದಿನ, ಆಯ್ಕೆ ಪ್ರಕ್ರಿಯೆ ಹೇಗೆ? ಇಲ್ಲಿದೆ ಮಾಹಿತಿ
ಅಗ್ನಿವೀರ್ ರ‍್ಯಾಲಿ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on:Nov 26, 2024 | 12:07 PM

ಕೊಪ್ಪಳ, ನವೆಂಬರ್​ 26: ಜಿಲ್ಲಾ ಕ್ರೀಂಡಾಗಣದಲ್ಲಿ ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಾಗಿ ಇಂದಿನಿಂದ ಡಿಸೆಂಬರ್ 8ರವರಗೆ ಅಗ್ನಿವೀರ್​ ಸೇನಾ ನೇಮಕಾತಿ ರ‍್ಯಾಲಿ (Agniveer Rally) ನಡೆಯಲಿದೆ. ಇಂದು (ನ.26) ಮುಂಜಾನೆ 6 ಗಂಟೆಗೆ ನೇಮಕಾತಿ ರ‍್ಯಾಲಿಗೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಭಾರತೀಯ ಸೇನೆಯ ಡೆಪ್ಯೂಟಿ ಡೈರಕ್ಟರ್ ಜನರಲ್ ಆಪ್ ರಿಕ್ರೂಟಿಂಗ್ ಮತ್ತು ಬೆಂಗಳೂರು ವಿಭಾಗದ ಬ್ರಿಗೇಡಿಯರ್ ಎಸ್​ಕೆ ಸಿಂಗ್ ಚಾಲನೆ ನೀಡಿದರು. ವಿಶೇಷವಾಗಿ ಉತ್ತರ ಕರ್ನಾಟಕ ಬಾಗದ ಕೊಪ್ಪಳ (Koppal), ಬೆಳಗಾವಿ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಯ ಅಭ್ಯರ್ಥಿಗಳು ಈ ನೇಮಕಾತಿ ರ‍್ಯಾಲಿಯಲ್ಲಿ ಬಾಗಿಯಾಗುತ್ತಿದ್ದಾರೆ.

ಅಗ್ನಿವೀರರಾಗಲು ಮೂವತ್ತು ಸಾವಿರಕ್ಕೂ ಹೆಚ್ಚು ಯುವಕರು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಕೆಲ ತಿಂಗಳ ಹಿಂದೆಯೇ ಲಿಖಿತ ಪರೀಕ್ಷೆ ನಡೆದಿದ್ದು, ಅದರಲ್ಲಿ ಒಟ್ಟು ಒಂಬತ್ತು 9130 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ಇಂದಿನಿಂದ ದೈಹಿಕ, ಮತ್ತು ಮೆಡಿಕಲ್ ಪರೀಕ್ಷೆ ಆರಂಭವಾಗಿದೆ.

ಮುಂಜಾನೆ ಐದು ಗಂಟೆಗೆ ಜಿಲ್ಲಾ ಕ್ರೀಂಡಾಗಣಕ್ಕೆ ಬಂದಿದ್ದ ಅಭ್ಯರ್ಥಿಗಳಿಗೆ ಮೊದಲು ಡಾಕ್ಯೂಮೆಂಟ್ ವೆರಿಪಿಕೇಷನ್ ಆಯ್ತು. ನಂತರ ಕ್ರೀಂಡಾಗದಲ್ಲಿ ಒಂದೊಂದು ತಂಡದಲ್ಲಿ ನೂರು ಅಭ್ಯರ್ಥಿಗಳನ್ನು 1600 ಮೀಟರ್ ಓಡಿಸಲಾಯಿತು. ಅದರಲ್ಲಿ 5.30 ನಿಮಿಷದಲ್ಲಿ ಗುರಿ ಮುಟ್ಟಿದವರನ್ನು ಎ ಗ್ರೂಪ್​ನಲ್ಲಿ. 5.45 ನಿಮಿಷದಲ್ಲಿ ಗುರಿ ಮುಟ್ಟಿದವರನ್ನು ಬಿ ಗ್ರೂಪ್​ನಲ್ಲಿ ಸೇರಿಸಲಾಯಿತು. ನಿಗದಿತ ಸಮಯದಲ್ಲಿ ಗುರಿ ಮುಟ್ಟದೇ ಇರುವವರು, ಮುಂದಿನ ಪರೀಕ್ಷೆಗೆ ಅನರ್ಹರಾದರು.

ಆಯ್ಕೆಯಾಗಿರುವ ಎ ಮತ್ತು ಬಿ ಗ್ರೂಪ್​ನಲ್ಲಿರುವ ಅಭ್ಯರ್ಥಿಗಳಿಗೆ ಜಿಗ್ ಜ್ಯಾಗ್ ಲೈನ್ ಸೇರಿದಂತೆ ಇನ್ನು ಕೆಲ ಪಿಟ್ ನೆಸ್ ಪರೀಕ್ಷೆಗಳನ್ನು ಮಾಡಲಾಯಿತು. ನಂತರ ಮೆಡಿಕಲ್ ಪರೀಕ್ಷೆ ಕೂಡ ಮಾಡಲಾಯಿತು. ಪ್ರತಿನಿತ್ಯ ಹೀಗೆ 800-900 ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಮಾಜಿ ಅಗ್ನಿವೀರ್‌ಗಳಿಗೆ ಸಿಐಎಸ್ಎಫ್, ಬಿಎಸ್ಎಫ್, ಆರ್​​ಪಿಎಫ್​​ನಲ್ಲಿ ಶೇ10 ಮೀಸಲಾತಿ, ವಯೋಮಿತಿ ಸಡಿಲಿಕೆ 

ಪ್ರತಿದಿನ ಒಂದೊಂದು ಜಿಲ್ಲೆಯವರಿಗೆ ಪರೀಕ್ಷೆಗೆ ಅವಕಾಶ ನೀಡಲಾಗಿದ್ದು, ಮಂಗಳವಾರ ಬೆಳಗಾವಿಯಿಂದ ಬಂದಿದ್ದ 700 ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಿತು. ಹೀಗೆ ಡಿಸೆಂಬರ್ 8 ರವರಗೆ ಈ ಪರೀಕ್ಷೆ ನಡೆಯಲಿದೆ.

ಓಟದಲ್ಲಿ ಎ ಗ್ರೂಪ್​ನಲ್ಲಿ ಆಯ್ಕೆಯಾದವರ ಸಂತಸ ಇಮ್ಮಡಿಯಾಗಿತ್ತು. ಕೆಲವೇ ಕೆಲವರು ಮಾತ್ರ ಪ್ರತಿ ಹಂತದಲ್ಲಿ ಗ್ರೂಪ್ ಎನಲ್ಲಿ ಆಯ್ಕೆಯಾದರು. ಇನ್ನು ಜಸ್ಟ್ ಸೆಕೆಂಡ್​ನಲ್ಲಿ ಚಾನ್ಸ್ ಮಿಸ್ ಮಾಡಿಕೊಂಡವರು, ಕ್ರೀಂಡಾಗಣದಲ್ಲಿಯೇ ಕಣ್ಣೀರು ಹಾಕಿದರು. ಕೆಲವರಂತೂ ಸಿಬ್ಬಂದಿ ಕಾಲಿಗೆ ಬಿದ್ದು ತಮಗೆ ಅವಕಾಶ ನೀಡುವಂತೆ ಗೋಳಾಡಿದರು. ಆದರೆ, ಅರ್ಹತೆಯೊಂದೇ ಮಾನದಂಡ ಅಂತ ಹೇಳಿರುವ ಸೇನಾ ಸಿಬ್ಬಂದಿ, ಕಣ್ಣೀರಿಗೆ ಕರಗಲಿಲ್ಲ. ಇನ್ನು ಕೆಲವರು ಓಡುತ್ತಿರುವಾಗಲೆ ಕುಸಿದು ಬಿದ್ದರು. ಅಂತವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತು. ಕೊಪ್ಪಳದಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ‍್ಯಾಲಿಗೆ ಕೊಪ್ಪಳ ಜಿಲ್ಲಾಡಳಿತ ಕಳೆದ ಆರು ತಿಂಗಳಿಂದ ಸಿದ್ದತೆ ಮಾಡಿಕೊಂಡಿತ್ತು. ನೇಮಕಾತಿ ಪರೀಕ್ಷೆಗೆ ಬರುವವರಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹತ್ತಾರು ಕ್ರಮಗಳನ್ನು ಕೈಗೊಂಡಿದೆ.

ದೈಹಿಕ ಮತ್ತು ಮೆಡಿಕಲ್ ಪರೀಕ್ಷೆಯನ್ನು ಮಾಡಲಾಗುತ್ತದೆ. ನಂತರ ಎರಡು ತಿಂಗಳೊಳಗಾಗಿ ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಆಯ್ಕೆಯಾದವರಿಗೆ ಬೆಳಗಾವಿ ಮಿಲಿಟರಿ ಕ್ಯಾಂಪ್​ನಲ್ಲಿ ತರಬೇತಿ ಆರಂಭವಾಗಲಿದೆ ಎಂದು ಸೇನಾ ನೇಮಕಾತಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಸೇಮೆಗೆ ಸೇರಬೇಕು, ಅಗ್ನಿವೀರರೆನಿಸಿಕೊಳ್ಳಬೇಕು ಅಂತ ಬಂದಿದ್ದ ಅನೇಕರು ಆಯ್ಕೆಯಾಗಿ ಸಂತಸ ಪಟ್ಟರೆ, ಕೆಲವರು ನಿರಾಸೆಯಿಂದ ತೆರಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:07 pm, Tue, 26 November 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ