ಚಹಾ ಕುಡಿಯುವವರೇ ಎಚ್ಚರ..ಎಚ್ಚರ: ಕಳಪೆ ಗುಣಮಟ್ಟದ ಟೀ ಪೌಡರ್ ಮಾರಾಟ ದಂಧೆ ಬಯಲಿಗೆ

ಗಂಗಾವತಿಯಲ್ಲಿ ಕಳಪೆ ಗುಣಮಟ್ಟದ ಮತ್ತು ಕಲಬೆರಕೆ ಟೀ ಪುಡಿ ಮಾರಾಟದ ದೊಡ್ಡ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 6 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ನಕಲಿ ಟೀ ಪುಡಿ ಮತ್ತು ಅಪಾಯಕಾರಿ ಬಣ್ಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರವಾನಗಿ ಇಲ್ಲದೆ ನಕಲಿ ಬ್ರಾಂಡ್ ಹೆಸರಿನಲ್ಲಿ ಟೀ ಪುಡಿಯನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿಷ್ಣುರಾಮ್ ಚೌದರಿ ಎಂಬಾತನ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಚಹಾ ಕುಡಿಯುವವರೇ ಎಚ್ಚರ..ಎಚ್ಚರ: ಕಳಪೆ ಗುಣಮಟ್ಟದ ಟೀ ಪೌಡರ್ ಮಾರಾಟ ದಂಧೆ ಬಯಲಿಗೆ
ಚಹಾ ಕುಡಿಯುವವರೇ ಎಚ್ಚರ..ಎಚ್ಚರ: ಕಳಪೆ ಗುಣಮಟ್ಟದ ಟೀ ಪೌಡರ್ ಮಾರಾಟ ದಂಧೆ ಬಯಲಿಗೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 25, 2024 | 9:51 PM

ಕೊಪ್ಪಳ, ನವೆಂಬರ್​ 25: ಪ್ರತಿ ದಿನ ಎದ್ದ ಕೂಡಲೇ ಬಹುತೇಕರ ದಿನ ಶುರುವಾಗುವುದು ಟೀ ಕುಡಿಯುವುದರಿಂದ. ಆದರೆ ಟೀ ಕುಡಿಯುವ ಮುನ್ನ, ನಾವು ಕುಡಿಯುವ ಟೀ ಸುರಕ್ಷಿತವಾಗಿದೆಯಾ ಅನ್ನೋದನ್ನು ಸ್ವಲ್ಪ ಯೋಚಿಸಬೇಕಿದೆ. ಯಾಕಂದರೆ ಅಪಾಯಕಾರಿ ಬಣ್ಣ ಸೇರಿಸಿ, ಯಾವುದೇ ಪರವಾನಗಿ ಇಲ್ಲದೇ, ನಕಲಿ ಬ್ರ್ಯಾಂಡ್​ಗಳ ಹೆಸರಲ್ಲಿ ಕಳಪೆ ಮತ್ತು ಕಲಬೆರಿಕೆ ಟೀ ಪುಡಿ (Tea Powder) ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.

ಜಿಲ್ಲೆಯ ಗಂಗಾವತಿ ನಗರದ ಕಾರಟಗಿ ರಸ್ತೆಯಲ್ಲಿ ವಿಷ್ಣುರಾಮ್ ಚೌದರಿ ಎನ್ನುವವರ ಗೋಡೌನ್​ ಸೇರಿದಂತೆ ದಿಢೀರ್​ನೆ ಕೆಲ ಕಂಪನಿಯ ಸಿಬ್ಬಂದಿ ಮತ್ತು ಪೊಲೀಸರು ಟೀ ಪೌಡರ್ ಸಂಗ್ರಹಿಸಿದ್ದ ಗೋಡೌನ್​ಗೆ ಎಂಟ್ರಿ ಕೊಟ್ಟಾಗ ಮಾಲೀಕ ಶಾಕ್ ಆಗಿದ್ದಾರೆ. ಯಾಕಂದರೆ ಇಲ್ಲಿ ಸಂಗ್ರಹಿಸಿರುವುದು ಯಾವುದೋ ಗುಣಮಟ್ಟದ ಟೀ ಪೌಡರ್ ಆಗಿರಲಿಲ್ಲ. ಜೊತೆಗೆ ಪರವಾನಗಿಯಿರುವ ಕಲರ್ ಕೂಡ ಇರಲಿಲ್ಲ.

ಕಳಪೆ ಗುಣಮಟ್ಟದ ಟೀ ಪೌಡರ್ ಮಾರಾಟ ಜಾಲ ಪತ್ತೆ

ಜಿಲ್ಲೆಯ ಗಂಗಾವತಿ ಸೇರಿದಂತೆ ಅನೇಕ ಕಡೆ ಹೆಚ್ಚಿನ ವ್ಯಾಪರಸ್ಥರು ಟೀ ಪೌಡರ್ ಅನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕರು ಗುಣಮಟ್ಟದ ಟೀ ಪೌಡರ್ ಮಾರಾಟ ಮಾಡುತ್ತಿದ್ದರೆ, ಇನ್ನು ಕೆಲವರು ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಗುಣಮಟ್ಟವಲ್ಲದ ಟೀ ಪೌಡರ್​ನ್ನು ತಂದು, ಅದಕ್ಕೆ ಕೆಲ ಅಪಾಯಕಾರಿ ಕಲರ್​ನ್ನು ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಸಕ್ರಿಯಾವಾಗಿರುವ ಈ ಜಾಲ, ಟೀ ಪೌಡರ್​ನ್ನು ಮಾರಾಟ ಮಾಡುತ್ತಿದೆ.

ಸ್ವಲ್ಪ ಬೆಲೆ ಕಡಿಮೆ ಇರುವುದರಿಂದ ಜನರು ಇಂತಹ ಟೀ ಪೌಡರ್​ನ್ನು ಖರೀದಿಸುತ್ತಿದ್ದಾರೆ. ಇನ್ನು ಇವರು ಟೀ ಪೌಡರ್ ಮಾರಾಟ ಮಾಡುವುದಕ್ಕೆಂದು ಅನೇಕ ನಕಲಿ ಬ್ರ್ಯಾಂಡ್​ಗಳನ್ನು ಕೂಡ ಮಾಡಿಕೊಂಡಿದ್ದಾರೆ. ಅನೇಕ ಬ್ರ್ಯಾಂಡ್​ಗಳ ಹೆಸರಲ್ಲಿ ಚೀಲ್​ಗಳನ್ನು ತಯಾರಿಸಿದ್ದಾರೆ. ಆದರೆ ಅವುಗಳಿಗೆ ಯಾವುದೇ ಪರವಾನಗಿಯೇ ಇಲ್ಲಾ. ಟೀ ಪೌಡರ್ ಚೀಲಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕ, ವಿಳಾಸ ಸೇರಿದಂತೆ ಯಾವುದೇ ಮಾಹಿತಿಯನ್ನು ಹಾಕದೇ, ಕೇವಲ ಕೆಲ ಬ್ರ್ಯಾಂಡ್ ಹೆಸರು ಹಾಕಿ, ಅದರಲ್ಲಿ ಟೀ ಪೌಡರ್ ಹಾಕಿ ಮಾರಾಟ ಮಾಡುತ್ತಿದ್ದಾರೆ. ಇಂತಹದೊಂದು ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಕೆಲ ಟೀ ಕಂಪನಿಗಳ ಮಾಲೀಕರು, ಗಂಗಾವತಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯಲ್ಲಿ ನವಶೋತ ಉರಿ ಉಯ್ಯಾಲೆ ಶಿಲ್ಪಗಳು ಪತ್ತೆ

ಸದ್ಯ ಈ ಕಳಪೆ ಟೀ ಪುಡಿಯನ್ನ ಮಾರಾಟ ಮಾಡಲಾಗ್ತಿದ್ದ ಗೋಡೌನ್ ಮೇಲೆ ದೂರು ಕೇಳಿ ಬಂದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರ ದಾಳಿ ವೇಳೆ ನಕಲಿ ಟೀ ಪುಡಿ ಹಾಗೂ ಅದಕ್ಕೆ ಬಳಸಲಾಗ್ತಿದ್ದ ಕಲರ್​ಗಳು ಇರೋದು ಪತ್ತೆಯಾಗಿವೆ. ವಿಳಾಸ ಇಲ್ಲದೇ ವಿವಿಧ ಬ್ರಾಂಡ್​ಗಳ ಹೆಸರಲ್ಲಿ 5 ರಿದ 10 ಕೆಜಿ ಪ್ಯಾಕೇಟ್​ಗಳನ್ನ ಮಾಡಿ ಮಾರಾಟ ಮಾಡಲಾಗ್ತಿತ್ತು. ಖಾಸಗಿ ಟೀ ಪುಡಿ ಕಂಪನಿ ದೂರು ನೀಡಿದ ಹಿನ್ನೆಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಷ್ಟೆ ಅಲ್ಲದೇ ಪೆಟೆಂಟ್ ಪಡೆದಿದ್ದ ಕಂಪನಿಯೊಂದರ ಪಾರ್ಮೂಲಾ ಕೂಡ ಬಳಸಿ ಟೀ ಪುಡಿ ತಯಾರು ಮಾಡಲಾಗ್ತಿತ್ತು ಎಂದು ಖಾಸಗಿ ಟೀ ಪುಡಿ ಕಂಪನಿ ಸಿಬ್ಬಂದಿ ಆರೋಪಿಸಿದ್ದಾರೆ.

ಗಂಗಾವತಿ ನಗರದಲ್ಲಿ ವಿಷ್ಣುರಾಮ್ ಚೌದರಿ ಸೇರಿದಂತೆ ಕೆಲವರು ಅನೇಕ ವರ್ಷಗಳಿಂದ ಇಂತಹದೊಂದು ದಂಧೆಯನ್ನು ನಡೆಸಿಕೊಂಡು ಬಂದಿದ್ದಾರಂತೆ. ಕಳಪೆ ಟೀ ಪುಡಿ ಮಾರಾಟ ಮಾಡ್ತಿದ್ದ ವ್ಯಕ್ತಿಗಳು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಟೀ ಪುಡಿಯನ್ನ ಮಾರಾಟ ಮಾಡ್ತಿದ್ದರಂತೆ. ಸದ್ಯ ವಿಷ್ಣುರಾಮ್ ಚೌದರಿಯ ಗೋಡೌನ್​ನಲ್ಲಿದ್ದ ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ಟೀ ಪುಡಿ ಚೀಲಗಳನ್ನ ವಶಕ್ಕೆ ಪಡೆದಿದ್ದು, ವಿಷ್ಣುರಾಮ್ ಚೌದರಿ ಮೇಲೆ ಪ್ರಕರಣ ದಾಖಲಿಸಿಲು ಮುಂದಾಗಿದ್ದಾರೆ.

ಇನ್ನೂ ಕಳಪೆ ಮತ್ತು ಕಲಬೆಲೆಕೆ ಟೀ ಪುಡಿ ಮಾರಾಟಗಾರ ವಿಷ್ಣುರಾಮನ ಬಳಿ ಯಾವುದೇ ದಾಖಲೆಯಿಲ್ಲ. ಈ ಬಗ್ಗೆ ಕೇಳಿದ್ರೆ ಯಾವುದೇ ಕಲರ್​ಗಳನ್ನ ಬಳಸಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಗೋಡೌನ್​ನಲ್ಲಿ ಕಲರ್ ಪತ್ತೆಯಾಗಿದ್ದರ ಬಗ್ಗೆ ಕೇಳಿದ್ರೆ ಕಲರ್ ಕಲರ್ ಕಾಗೆ ಹಾರಿಸ್ತಿದ್ದಾರೆ.

ಇದನ್ನೂ ಓದಿ: ರಾತೋರಾತ್ರಿ ಬೆಳೆ ನಾಶ: ಸ್ಟೀಲ್ ಫ್ಯಾಕ್ಟರಿ ನಂಬಿ ಮೋಸ ಹೋದ ಕೊಪ್ಪಳದ ರೈತರು

ಕಳಪೆ ಮತ್ತು ಕಲಬೆರಕೆ ಟೀ ಪುಡಿ ಮಾರಾಟ ಜಾಲ ಪತ್ತೆಯಾದ ಹಿನ್ನೆಲೆ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೇವಲ ಟೀ ಪುಡಿ ಅಷ್ಟೇ ಅಲ್ಲದೆ ದಿನನಿತ್ಯ ಬಳಸುವ ಹಲವು ಆಹಾರ ಪದಾರ್ಥಗಳು ನಕಲಿ ಮಾರಾಟ ನಡೆದಿದೆ ಎನ್ನುವ ಚರ್ಚೆ ಜೋರಾಗಿದೆ. ಕೂಡಲೇ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಇಂತಹ ದಂಧೆಗೆ ಕಡಿವಾಣ ಹಾಕಿ ಜನರ ಆರೋಗ್ಯ ಕಾಪಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ