AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ ಜಿಲ್ಲೆಯಲ್ಲಿ ನವಶೋತ ಉರಿ ಉಯ್ಯಾಲೆ ಶಿಲ್ಪಗಳು ಪತ್ತೆ

ಕೊಪ್ಪಳ ಜಿಲ್ಲೆಯ ಬೀಳಗಿ ಗ್ರಾಮದಲ್ಲಿ ಅಪರೂಪದ ಉರಿ ಉಯ್ಯಾಲೆ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪಗಳು ಬಲಿದಾನ ಸ್ಮಾರಕಗಳಿಗೆ ಸೇರಿದ್ದು, ಮೂರು ಹಂತಗಳನ್ನು ಒಳಗೊಂಡಿವೆ. ಅವು 9ನೇ ಶತಮಾನದ್ದೆಂದು ನಂಬಲಾಗಿದೆ. ಈ ಶಿಲ್ಪಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಈ ಶಿಲ್ಪಗಳು ಕರ್ನಾಟಕದಲ್ಲಿ ಅಪರೂಪವಾಗಿ ದೊರೆಯುವ ಪ್ರಮುಖ ಐತಿಹಾಸಿಕ ಸಾಕ್ಷ್ಯಗಳಾಗಿವೆ.

ಕೊಪ್ಪಳ ಜಿಲ್ಲೆಯಲ್ಲಿ ನವಶೋತ ಉರಿ ಉಯ್ಯಾಲೆ ಶಿಲ್ಪಗಳು ಪತ್ತೆ
ಉರಿ ಉಯ್ಯಾಲೆ ಶಿಲ್ಪಗಳು
ಸಂಜಯ್ಯಾ ಚಿಕ್ಕಮಠ
| Updated By: ವಿವೇಕ ಬಿರಾದಾರ|

Updated on: Nov 25, 2024 | 1:33 PM

Share

ಕೊಪ್ಪಳ, ನವೆಂಬರ್​ 25: ಕೊಪ್ಪಳ (Koppal) ಜಿಲ್ಲೆ ರಾಮಾಯಣ (Ramayana) ಕಾಲದಿಂದಲೂ ಅನೇಕ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಅನೇಕ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿದ್ದರಿಂದ ಜಿಲ್ಲೆಯ ಅನೇಕ ಕಡೆ ಪ್ರಾಚಿನ ಶಿಲಾಶಾಸನಗಳು ಅನೇಕ ಕಡೆ ಸಿಕ್ಕಿರುವುದು ಗಮನಾರ್ಹ. ಇದೀಗ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೀಳಗಿ (Bilagi) ಗ್ರಾಮದ ಕೆರೆಯ ಹತ್ತಿರ ಉರಿ ಉಯ್ಯಾಲಿನ ಶಾಸನ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪ ಶಾಸನಗಳನ್ನು ಬಲಿದಾನ ಸ್ಮಾರಕ ಶಿಲ್ಪಗಳ ಗುಂಪಿಗೆ ಸೇರಿಸಲಾಗುತ್ತದೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಉರಿ ಉಯ್ಯಾಲೆ ಎಂದರೇನು?

ಉರಿ ಉಯ್ಯಾಲೆ ಅಂದರೆ ಬೆಂಕಿಯ ಮೇಲೆ ತೂಗಾಡುವುದು ಎಂದರ್ಥ. ಆತ್ಮ ಬಲಿದಾನಗಳಲ್ಲಿ ಒಂದಾದ ಈ ಹರಕೆಯು ಬಹಳ ವಿರಳ ಮತ್ತು ವಿಶೇಷವಾಗಿದೆ. ರಾಜ್ಯದಲ್ಲಿ ಮಂಡ್ಯ ಜಿಲ್ಲೆಯ ತೊಣಚಿ ಗ್ರಾಮದ ಶಾಸನದಲ್ಲಿ ಉರಿ ಉಯ್ಯಾಲೆಯ ಉಲ್ಲೇಖವಿದೆ. ಈ ರೀತಿಯ ಶಿಲ್ಪಗಳು ಕರ್ನಾಟಕದಲ್ಲಿ ಬೆರಳೆಣಕಿಯಷ್ಟು ದೊರೆತಿವೆ. ಅವುಗಳಲ್ಲಿ ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಎರಡು, ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ಒಂದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕಿನ ಕೆಲಸೂರು ಗ್ರಾಮದಲ್ಲಿ ಒಂದು ಪತ್ತೆಯಾಗಿವೆ. ಇದೀಗ ಕುಷ್ಟಗಿ ತಾಲುಕಿನ ಬೀಳಗಿ ಗ್ರಾಮದಲ್ಲಿ ಒಂದೇ ಸ್ಥಳದಲ್ಲಿ ಎರಡು ಅಪರೂಪದ ಶಾಸನ ಶಿಲ್ಪಗಳು ಪತ್ತೆಯಾಗಿವೆ.

ಇದನ್ನೂ ಓದಿ: ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ, ಅನೇಕ ವಿಚಾರಗಳು ಉಲ್ಲೇಖ

ಬೀಳಗಿಯಲ್ಲಿವೆ ಶಾಸನ

ಬೀಳಗಿ ಗ್ರಾಮದ ಎರಡೂ ಶಾಸನ ಶಿಲ್ಪಗಳು ಮೂರು ಹಂತಗಳನ್ನು ಒಳಗೊಂಡಿವೆ. ಮೊದಲನೆಯ ಹಂತದಲ್ಲಿ ದೊಡ್ಡಾದದ ಕಲ್ಲಿನ ಚೌಕಟ್ಟಿನ ಮಧ್ಯಭಾಗದಲ್ಲಿ ವ್ಯಕ್ತಿಯೊರ್ವನು ತೂಗಾಡುವ ಜೊಕಾಲಿಯ ಮೇಲೆ ನಿಂತಿದ್ದಾನೆ. ಅವನ ಕೆಳಭಾಗದಲ್ಲಿ ದೊಡ್ಡದಾದ ಅಗ್ನಿ ಕುಂಡಲವಿದ್ದು, ಅದು ಉರಿಯುವಂತಿದೆ. ಇವನ ಎರಡು ಕಡೆಗೆ ವಾದ್ಯಗಾರರು ಮೃದಂಗ, ಝುಲ್ಲರಿಯನ್ನು ಹಿಡಿದು ಬಾರಿಸುತ್ತಿದ್ದಾರೆ. ಇಲ್ಲಿ ಉರಿ ಉಯ್ಯಾಲೆಗೆ ಒಳಪಡುವ ವೀರನು ಮುಡಿಯನ್ನು ನೆತ್ತಿಯ ಮೇಲೆ ಕಟ್ಟಿದ್ದು, ಎರಡು ಕೈಗಳನ್ನು ಉರಿ ಉಯ್ಯಾಲೆಯಾಡುವ ಹಗ್ಗವನ್ನು ಹಿಡಿದು ನಿಂತಿರುವ ಚಿತ್ರಣ ಕ್ರಿಯಾ ಸೂಚನೆಯಾಗಿದೆ.

ಎರಡನೇ ಹಂತದಲ್ಲಿ ಸ್ವರ್ಗದ ಕಲ್ಪನೆಯನ್ನು ನೀಡುವುದಾಗಿದೆ. ಉರಿ ಉಯ್ಯಾಲೆಯಲ್ಲಿ ಮರಣ ಹೊಂದಿರುವ ವೀರನನ್ನು ಅಪ್ಸರೆಯರು ಎರಡು ಕೈಗಳನ್ನು ಹಿಡಿದುಕೊಂಡು ಸ್ವರ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಇನ್ನೊಂದು ಕೈಯಲ್ಲಿ ಚಾಮರವನ್ನು ಹಿಡಿದಿದ್ದಾರೆ. ಮೂರನೆಯ ಹಂತದಲ್ಲಿ ವೀರನು ಮಧ್ಯಭಾಗದ ಪೀಠದ ಮೇಲೆ ಕುಳಿತಿದ್ದು, ಇವನ ಎರಡು ಬದಿಯಲ್ಲಿ ಅಪ್ಸರೆಯರು ಚಾಮರವನ್ನು ಹಿಡಿದು ನಿಂತಿದ್ದಾರೆ.

ಇದೇ ಸ್ಥಳದಲ್ಲಿ ಇನ್ನೊಂದು ಸ್ಮಾರಕಶಿಲ್ಪವಿದೆ. ಅದು ಬಹುತೇಕ ಇದೆ ಲಕ್ಷಣವನ್ನು ಹೊಂದಿದೆ. ಆದರೆ ಮೊದಲನೆಯ ಹಂತದಲ್ಲಿ ಉರಿ ಉಯ್ಯಾಲೆಯಾಗುವ ವ್ಯಕ್ತಿಯ ಪ್ರಾಣವನ್ನು ತಡೆಯುವಂತೆ ವಾದ್ಯಗಾರನ ಕಾಲುನ್ನು ಹಿಡಿದು ಬೇಡುತ್ತಿದ್ದಂತೆ ಒಬ್ಬನು ಕಾಲಬಳಿ ಕುಳಿತಿದ್ದಾನೆ. ಇವು ಎರಡು ಸ್ಮಾರಕಶಿಲ್ಪಗಳ ಶಿಲೆ ಮತ್ತು ಶಿಲ್ಪದ ಲಕ್ಷಣದ ಆಧಾರದ ಮೇಲೆ ಇವುಗಳನ್ನು 9ನೇ ಶತಮಾನದ ಸ್ಮಾರಕಶಿಲ್ಪಗಳೆಂದು ಗುರುತಿಸಲಾಗಿದೆ.

ಕೆರೆ ದಡದಲ್ಲಿ ನೂರಾರು ವರ್ಷಗಳಿಂದ ಈ ಶಿಲ್ಪಗಳು ಇದ್ದರು ಅವುಗಳನ್ನು ಯಾರು ಗುರುತಿಸಿರಲ್ಲಿಲ್ಲ. ಅವು ಅಲ್ಲಿಯೇ ಬಿದ್ದು ಹಾಳಾಗಿ ಹೋಗುತ್ತಿವೆ. ಆದರೆ, ಸಂಶೋಧನಾ ವಿದ್ಯಾರ್ಥಿಯಾಗಿರುವ ಕರಿಯಪ್ಪ ಎಂಬುವರು ಇವುಗಳನ್ನು ಗುರುತಿಸಿ, ಅವುಗಳ ಮೌಲ್ಯವನ್ನು ತಿಳಿಸಿದಾಗಲೇ ಗ್ರಾಮದ ಜನರಿಗೆ ಗೊತ್ತಾಗಿದೆ. ಇದೀಗ ಈ ಶಿಲ್ಪ ಶಾಸನಗಳನ್ನು ಸಂರಕ್ಷಣೆ ಮಾಡುವ ಕೆಲಸವಾಗಬೇಕಿದೆ.

“ಉರಿ ಉಯ್ಯಾಲೆಯ ಹರಕೆಯನ್ನು ಅರ್ಥೈಸುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ. ಡಾ.ಎಂ.ಎಂ. ಕಲಬುರ್ಗಿ ಅವರು ತಮ್ಮ ಲೇಖನಗಳಲ್ಲಿ ಉರಿ ಉಯ್ಯಾಲೆಯ ಪದ್ಧತಿ ಬೆಂಕಿಯಲ್ಲಿ ಬಿದ್ದು ಸಾಯುವ ಕ್ರಿಯೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ಡಾ.ಡಿ.ಬಿ.ಪರಮಶಿವಮೂರ್ತಿ ಅವರು ಆಕಸ್ಮಿಕವಾಗಿ ಕಾಲು ಜಾರಿ ಬೆಂಕಿಗೆ ಬಿದ್ದು ಸತ್ತವರಿಗೆ ಈ ಸ್ಮಾರಕ ಶಿಲ್ಪವನ್ನು ಹಾಕಿಸುತ್ತಿದ್ದರೆಂದು ಊಹಿಸಿದ್ದಾರೆ” ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಸಂಶೋಧನ ವಿದ್ಯಾರ್ಥಿ ಕರಿಯಪ್ಪ ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು