ರಾತೋರಾತ್ರಿ ಬೆಳೆ ನಾಶ: ಸ್ಟೀಲ್ ಫ್ಯಾಕ್ಟರಿ ನಂಬಿ ಮೋಸ ಹೋದ ಕೊಪ್ಪಳದ ರೈತರು

ಕೊಪ್ಪಳದ ರೈತರು ಭೂಮಿ ಮಾರಾಟ ಮಾಡಿದ ಬಳಿಕ ಫ್ಯಾಕ್ಟರಿ ನಿರ್ಮಾಣವಾಗದೆ, ಉದ್ಯೋಗ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಅವ ಬೆಳೆಗಳನ್ನು ದುಷ್ಕರ್ಮಿಗಳು ನಾಶಪಡಿಸಿದ್ದಾರೆ. ರೈತರು ಭೂಮಿ ನೀಡಿದ್ದರೂ ಫ್ಯಾಕ್ಟರಿ ಆರಂಭವಾಗದಿರುವುದು ಮತ್ತು ಉದ್ಯೋಗ ಭರವಸೆ ಫಲಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ರೈತರ ಪರವಾಗಿ ಹಸ್ತಕ್ಷೇಪ ಮಾಡುವಂತೆ ಒತ್ತಾಯಿಸಿದೆ.

ರಾತೋರಾತ್ರಿ ಬೆಳೆ ನಾಶ: ಸ್ಟೀಲ್ ಫ್ಯಾಕ್ಟರಿ ನಂಬಿ ಮೋಸ ಹೋದ ಕೊಪ್ಪಳದ ರೈತರು
ರಾತೋರಾತ್ರಿ ಬೆಳೆ ನಾಶ: ಸ್ಟೀಲ್ ಫ್ಯಾಕ್ಟರಿ ನಂಬಿ ಮೋಸ ಹೋದ ರೈತರು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 17, 2024 | 4:55 PM

ಕೊಪ್ಪಳ, ನವೆಂಬರ್​ 17: ಆ ರೈತರಿಗೆಲ್ಲಾ (Farmers) ನಿಮ್ಮೂರಲ್ಲಿ ಫ್ಯಾಕ್ಟರಿಯಾಗುತ್ತದೆ. ನಿಮಗೆ ನೌಕರಿ ಸಿಗುತ್ತದೆ ಅಂತ ದಲ್ಲಾಳಿಗಳು ಆಸೆ ಹುಟ್ಟಿಸಿದ್ದರು. ದಲ್ಲಾಳಿಗಳ ಮಾತನ್ನು ನಂಬಿದ್ದ ರೈತರು ಕಡಿಮೆ ಬೆಲೆಗೆ ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದರು. ಆದರೆ ದಲ್ಲಾಳಿಗಳು ಫ್ಯಾಕ್ಟರಿಯ ಹೆಸರಲ್ಲಿ ಭೂಮಿ ಖರೀದಿಸದೆ, ಕಂಪನಿ ಮಾಲೀಕರಿಗೆ ಬೇಕಾದ ವ್ಯಕ್ತಿಗಳ ಹೆಸರಲ್ಲಿ ಭೂಮಿ ಖರೀದಿಸಿದ್ದಾರೆ. ಆದರೆ ಭೂಮಿ ಖರೀದಿಸಿ ದಶಕವಾದರೂ ಕೂಡ ಫ್ಯಾಕ್ಟರಿಯನ್ನು ಆರಂಭ ಮಾಡಿಲ್ಲ. ಕೆಲಸವನ್ನು ಕೂಡ ನೀಡ್ತಿಲ್ಲಾ. ಇಷ್ಟು ದಿನ ಉಳುಮೆ ಮಾಡ್ತಿದ್ದ ರೈತರಿಗೆ ಇದೀಗ ಉಳುಮೆಗೆ ಕೂಡ ಅವಕಾಶವನ್ನು ನೀಡುತ್ತಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಬೆಳದಿದ್ದ ಬೆಳೆಯನ್ನು ರಾತೋರಾತ್ರಿ ಹಾಳು ಮಾಡಿರುವಂತಹ ಘಟನೆ ನಡೆದಿದೆ.

ರಾತೋರಾತ್ರಿ ಬೆಳೆ ಹಾಳು ಮಾಡಿದ ದುರುಳರು

ಹೌದು. ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ, ಕುಣಿಕೇರಿ ಗ್ರಾಮದ ಮಂಜುನಾಥ ಸೇರಿದಂತೆ ಹತ್ತಕ್ಕೂ ಹೆಚ್ಚು ರೈತರು ಬೆಳದಿದ್ದ ಬೆಳೆಯನ್ನು ಕಳೆದ ರಾತ್ರಿ ದುರುಳರು ಹಾಳು ಮಾಡಿ ಹೋಗಿದ್ದಾರೆ. ಕೆಲವೇ ದಿನಗಳಲ್ಲಿ ಈರುಳ್ಳಿ ಕಟಾವಿಗೆ ಬರ್ತಿತ್ತು. ಜೊತೆಗೆ ಶೇಂಗಾ ಸೇರಿದಂತೆ ಅನೇಕ ಬೆಳೆಗಳು ಕೂಡ ಚೆನ್ನಾಗಿ ಬಂದಿದ್ದವು. ಹೀಗಾಗಿ ಈ ಬಾರಿ ಉತ್ತಮ ಆದಾಯಗಳಿಸುವ ಆಸೆಯಲ್ಲಿ ರೈತರಿದ್ದರು. ಆದರೆ ರಾತ್ರಿ ಕಳೆದು ಬೆಳೆಗಾಗೋದರಲ್ಲಿ ಆ ರೈತರ ಕನಸೆಲ್ಲ ನುಚ್ಚುನೂರಾಗಿದೆ.

ಇದನ್ನೂ ಓದಿ: ಕಾರ್ಖಾನೆಗಳು ಉಗುಳುತ್ತಿರುವ ಹೊಗೆ, ದೂಳಿನಿಂದ ಬೆಳೆಗಳಿಗೆ ಹಾನಿ: ಕಂಗಾಲಾದ ಹಣ್ಣು, ತರಕಾರಿ ಬೆಳೆಗಾರರು

ಯಾಕಂದರೆ ಕಳೆದ ರಾತ್ರಿ ಜಮೀನಿಗೆ ಬಂದಿದ್ದ ಕೆಲವರು ಟ್ರ್ಯಾಕ್ಟರ್​ನಿಂದ ರೂಟರ್ ಹೊಡೆದು ಬೆಳೆಯನ್ನು ಹಾಳು ಮಾಡಿ ಹೋಗಿದ್ದಾರೆ. ಇಂದು ಮುಂಜಾನೆ ಜಮೀನಿಗೆ ಸಹಜವಾಗಿ ಕೃಷಿ ಕೆಲಸಕ್ಕೆ ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಇದರಿಂದ ಸಾವಿರಾರು ರೂಪಾಯಿ ಆದಾಯ ತಂದು ಕೊಡುತ್ತಿದ್ದ ಬೆಳೆಗಳು ರೈತರ ಕೈ ಸೇರದೆ ಹಾಳಾಗಿ ಹೋಗಿವೆ. ಬೆಳೆ ಬೆಳೆಯಲಿಕ್ಕೆ ಸಾವಿರಾರು ರೂ ಖರ್ಚು ಮಾಡಿದ್ದೇವೆ. ಇದೀಗ ರಾತೋರಾತ್ರಿ ದುರುಳರ ಕೃತ್ಯದಿಂದ ತಮ್ಮ ಬದುಕು ಬೀದಿಗೆ ಬಂದಿದೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಳುಮೆ ಮಾಡಿದ್ರು, ಭೂಮಿ ರೈತರದಲ್ಲಾ

ಸದ್ಯ ಬೆಳೆ ಹಾಳು ಮಾಡಿ ಹೋಗಿರುವ ಈ ಭೂಮಿ ಸದ್ಯ ಈ ರೈತರ ಹೆಸರಲ್ಲಿ ಇಲ್ಲಾ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರ ಹೆಸರಲ್ಲಿದೆ. ಯಾಕಂದ್ರೆ ದಶಕದ ಹಿಂದೆಯೇ ಈ ರೈತರು ಮೋಸಕ್ಕೀಡಾಗಿ ಈ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಆದರೆ ಯಾವ ಉದ್ದೇಶಕ್ಕಾಗಿ ಭೂಮಿಯನ್ನು ಕೊಟ್ಟಿದ್ದರೋ, ಆ ಉದ್ದೇಶಕ್ಕಾಗಿ ಬಳಕೆಯಾಗದೇ ಇದ್ದಿದ್ದರಿಂದ ರೈತರೇ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ ಇದೀಗ ಭೂಮಿ ಖರೀದಿ ಮಾಡಿದವರು ಅದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ.

ಕುಣಿಕೇರಿ, ಕುಣಿಕೇರಿ ತಾಂಡಾ, ಹಿರೆಬಗನಾಳ, ಚಿಕ್ಕಬಗನಾಳ ಗ್ರಾಮಸ್ಥರು ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಎಕ್ಸ್ ಇಂಡಿಯಾ ಸ್ಟೀಲ್ ಕಂಪನಿ ಆರಂಭ ಆಗುತ್ತದೆ ಅಂತ ಕಂಪನಿಯವರು ಮತ್ತು ಕೆಲ ಮಧ್ಯವರ್ತಿಗಳು ಕುಣಿಕೇರಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬಣ್ಣಬಣ್ಣದ ಭರವಸೆ ನೀಡಿದ್ದರು. ಹೀಗಾಗಿ 2008 ರಿಂದ 2011 ರವರಗೆ ನೂರಾರು ರೈತರು ತಮ್ಮ ಫಲವತ್ತಾದ ಆರುನೂರು ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ನೀಡಿದ್ದಾರೆ. ಆದರೆ ಭೂಮಿ ಖರೀದಿಸುವಾಗ ಸ್ಟೀಲ್ ಕಂಪನಿ ಹೆಸರಲ್ಲಿ ಭೂಮಿಯನ್ನು ಖರೀದಿಸದ ಮಾಲೀಕರು, ಕೆಲ ವ್ಯಕ್ತಿಗಳ ಹೆಸರಲ್ಲಿ ಭೂಮಿಯನ್ನು ಖರೀದಿಸಿದ್ದರು. ಜೊತೆಗೆ ಭೂಮಿ ನೀಡಿದ ಪ್ರತಿಯೊಬ್ಬ ರೈತರಿಗೆ ಕೂಡಾ ಎಕ್ಸ್ ಇಂಡಿಯಾ ಕಂಪನಿ ಹೆಸರಲ್ಲಿ ಉದ್ಯೋಗ ನೀಡೋ ಪ್ರಮಾಣ ಪತ್ರವನ್ನು ಕೂಡಾ ನೀಡಿದ್ದರು. ಆದರೆ ಭೂಮಿಯನ್ನು ನೀಡಿ ದಶಕವಾದರೂ ಕೂಡ ಇಲ್ಲಿವರಗೆ ಯಾವುದೇ ಫ್ಯಾಕ್ಟರಿಯನ್ನು ಆರಂಭ ಮಾಡಿಲ್ಲ.

ಇದನ್ನೂ ಓದಿ: ಕೊಪ್ಪಳದಲ್ಲಿ ಹಿಂಗಾರು ಮಳೆ ಆರ್ಭಟ: ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ರೈತರು

ಪಾಳು ಬಿದ್ದ ಭೂಮಿಯನ್ನು ರೈತರೇ ಉಳುಮೆ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಫ್ಯಾಕ್ಟರಿ ಹೆಸರಲ್ಲಿ ಭೂಮಿ ಖರೀದಿಸಿದವರು, ಇತ್ತೀಚೆಗೆ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡಿಲ್ಲ. ಆದರೂ ಕೆಲ ರೈತರು ಜಿದ್ದಿಗೆ ಬಿದ್ದು ಬೆಳೆ ಬೆಳದಿದ್ದರು. ಆದರೆ ಇದೀಗ ಬೆಳೆದ ಬೆಳೆಯನ್ನು ಕಟಾವು ಮಾಡಲು ಬಿಡದೇ ಹಾಳು ಮಾಡುತ್ತಿದ್ದಾರೆ. ತಮಗೆ ಇಲ್ಲವೇ ತಮ್ಮ ಮಕ್ಕಳಿಗೆ ಫ್ಯಾಕ್ಟರಿಯಲ್ಲಿ ಕೆಲಸ ಸಿಗುತ್ತೆ ಅನ್ನೋ ಉದ್ದೇಶದಿಂದ ನಾವು ಭೂಮಿ ಕೊಟ್ಟಿದ್ದೆವು. ಆದರೆ ಇಲ್ಲಿವರಗೆ ಫ್ಯಾಕ್ಟರಿ ಆರಂಭ ಮಾಡಿಲ್ಲ. ಇದೀಗ ಉದ್ಯೋಗವನ್ನು ನೀಡದೆ, ಕೊಟ್ಟ ಭೂಮಿಯನ್ನು ಕೂಡ ಕಸಿದುಕೊಂಡರೆ ನಾವು ಹೊಟ್ಟೆ ತುಂಬಿಸಿಕೊಳ್ಳುವುದು ಹೇಗೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಮಗೆ ಸಂಬಂಧವಿಲ್ಲ ಎನ್ನುತ್ತಿರುವ ಫ್ಯಾಕ್ಟರಿ ಕಂಪನಿ

ಇನ್ನು ಎಕ್ಸ್ ಇಂಡಿಯಾ ಸ್ಟೀಲ್ ಕಂಪನಿಯವರು, ತಾವು ಯಾವುದೇ ಬೆಳೆ ಹಾಳು ಮಾಡಿಲ್ಲ. ಹಾಳು ಮಾಡಿದ್ದು ಯಾರು ಅಂತ ಗೊತ್ತಿಲ್ಲಾ ಅಂತ ಹೇಳ್ತಿದ್ದಾರೆ. ನಾವು ಸ್ಟೀಲ್ ಕಂಪನಿಯ ಮತ್ತೊಂದು ಘಟಕ ಆರಂಭಕ್ಕೆ ಮುಂದಾಗಿದ್ದು ನಿಜ. ಆದರೆ ಖಾಸಗಿ ವ್ಯಕ್ತಿಗೆ ಹಣ ಕೂಡ ನೀಡಿದ್ದೆವು. ಆದರೆ ಹಣ ಪಡೆದ ವ್ಯಕ್ತಿ, ನಮಗೆ ಭೂಮಿಯನ್ನು ಇನ್ನು ನೀಡಿಲ್ಲ. ಇದರಿಂದ ತಮಗೂ ರೈತರಿಗೂ ಸಂಬಂಧವಿಲ್ಲಾ ಅಂತ ಹೇಳ್ತಿದ್ದಾರೆ. ಆದರೆ ಭೂಮಿ ಹೋದ್ರು ಉದ್ಯೋಗವು, ಇಲ್ಲದೇ ಭೂಮಿ ಖಾಲಿಯಿದ್ರು ಬೆಳೆಯನ್ನು ಬೆಳೆಯಲಿಕ್ಕಾಗದೇ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತ ರೈತರ ನೆರವಿಗೆ ಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:54 pm, Sun, 17 November 24

ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ