ಸೇನೆಗೆ ಸೇರಲು ದಾಖಲೆ ತಿದ್ದುಪಡಿ ಮಾಡಿದ ಆರೋಪ; ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 9 ಜನರ ಬಂಧನ
ವಿಜಯನಗರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 9 ಜನರನ್ನು ಬಂಧಿಸಿದ್ದಾರೆ. ಸೇನೆಯಲ್ಲಿ ಕೆಲಸ ಕೊಡಿಸಲು ದಾಖಲಾತಿಗಳ ತಿದ್ದುಪಡಿ, ನಕಲಿ ದಾಖಲೆ ಕೊಟ್ಟ ಆರೋಪ ಆರೋಪಿಗಳ ಮೇಲೆ ಕೇಳಿ ಬಂದಿದೆ.
ಕೊಪ್ಪಳ: ಸೇನೆಗೆ ಸೇರಲು ದಾಖಲೆ ತಿದ್ದುಪಡಿ ಮಾಡಿದ ಆರೋಪ ಹಿನ್ನೆಲೆ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 9 ಜನರನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಅಂಕಲೇಶ್, ರಾಮಾಂಜನಿ ಹಾಗೂ ವೈಭವ್, ನೇತಾಜಿ ರಾಮ್ ಸಾವಂತ್, ಜಂಬಣ್ಣ, ಮನೋಜ್, ಅಜಿತ್ ಕೊಂಡೆ, ವೆಂಕಟೇಶ್, ಪರಶುರಾಮ್ ಬಂಧಿತ ಆರೋಪಿಗಳು.
ವಿಜಯನಗರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 9 ಜನರನ್ನು ಬಂಧಿಸಿದ್ದಾರೆ. ಸೇನೆಯಲ್ಲಿ ಕೆಲಸ ಕೊಡಿಸಲು ದಾಖಲಾತಿಗಳ ತಿದ್ದುಪಡಿ, ನಕಲಿ ದಾಖಲೆ ಕೊಟ್ಟ ಆರೋಪ ಆರೋಪಿಗಳ ಮೇಲೆ ಕೇಳಿ ಬಂದಿದೆ. ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸೇರಿದಂತೆ ಹಲವು ನಕಲಿ ದಾಖಲೆಗಳನ್ನು ಆರೋಪಿಗಳು ಸೃಷ್ಟಿ ಮಾಡಿ ಇತರರ ಬಳಿ ಹಣ ಪಡೆದು ಸೇನೆಗೆ ಸೇರಲು ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಆರೋಪಿಗಳು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯದ ಜನರನ್ನು ಸ್ಥಳೀಯರು ಎನ್ನುವಂತೆ ದಾಖಲೆಗಳ ಫೋರ್ಜರಿ ಮಾಡಿದ್ದಾರೆ. ಐದಾರು ಲಕ್ಷ ಹಣಕ್ಕೆ ಫೋರ್ಜರಿ ಮಾಡಿ ದಾಖಲೆ ತಿದ್ದುಪಡಿ ಮಾಡಿದ್ದಾರೆ. ಸೇನೆಯಿಂದ ದಾಖಲಾತಿ ಪರಿಶೀಲಿಸುವಂತೆ ಮಾಹಿತಿ ಬಂದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿದೆ. ಸೇನೆಯಲ್ಲಿ ಇನ್ನೂ ಹಲವಾರು ಜನ ಇದೇ ರೀತಿ ಕೆಲಸಕ್ಕೆ ಸೇರಿರುವ ಅನುಮಾನ ವ್ಯಕ್ತವಾಗಿದ್ದು ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ವಿಜಯನಗರ ಜಿಲ್ಲೆ ಎಸ್ಪಿ ಡಾ. ಅರುಣ್ ಕೆ ಮಾಹಿತಿ ನೀಡಿದ್ದಾರೆ.