ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ!

ಅಂಜನಾದ್ರಿ ದೇವಸ್ಥಾನಕ್ಕೆ ಉದ್ಯಮಿ ಮಹೇಶ್ ರೆಡ್ಡಿ ನೀಡಿದ 2.50 ಕೋಟಿ ರೂ. ಮೌಲ್ಯದ ಬಂಗಾರದ ಕವಚಗಳ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ದಾನಿಗಳು ನೀಡಿದ 1280 ಗ್ರಾಂ ಬಂಗಾರದ ತೂಕದ ಹೇಳಿಕೆ ಮತ್ತು ಮೌಲ್ಯಮಾಪಕರ ಅಂದಾಜಿನ ನಡುವೆ ಗೊಂದಲ ಉಂಟಾಗಿದ್ದು, ಜಿಲ್ಲಾಧಿಕಾರಿಗಳು ದಾಖಲೆಗಳ ಪುನರ್ ಪರಿಶೀಲನೆಗೆ ಆದೇಶಿಸಿದ್ದಾರೆ.

ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ!
ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ!
Edited By:

Updated on: May 12, 2026 | 12:04 PM

ಕೊಪ್ಪಳ, ಮೇ 12: ಹನುಮ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ನೀಡಿದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ವಿಚಾರದಲ್ಲಿ ಈಗ ಗೊಂದಲ ಮೂಡಿದ್ದು, ಜಿಲ್ಲಾಡಳಿತವು ದಾಖಲೆಗಳ ಮರುಪರಿಶೀಲನೆಗೆ ಮುಂದಾಗಿದೆ. ಪಂಚನಾಮ ಪ್ರಕ್ರಿಯೆಯ ನಂತರ ಎಲ್ಲಾ ಆಭರಣಗಳನ್ನು ದೇವಸ್ಥಾನದ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು

  • ಉದ್ಯಮಿ ನೀಡಿದ ಬಂಗಾರದ ತೂಕದ ಬಗ್ಗೆ ಮೌಲ್ಯಮಾಪಕರಿಂದ ಭಿನ್ನ ವರದಿ ಸಲ್ಲಿಕೆ.
  •  ದಾನಿಗಳು ನೀಡಿದ ದಾಖಲೆಗಳನ್ನು ಮರುಪರಿಶೀಲಿಸಲು ಕೊಪ್ಪಳ ಜಿಲ್ಲಾಡಳಿತದ ಮಹತ್ವದ ನಿರ್ಧಾರ.
  •  ಬಿಲ್ ಹಾಗೂ ದಾಖಲೆಗಳ ಆಧರಿಸಿ ಆಭರಣಗಳನ್ನು ದೇವಸ್ಥಾನದ ಸುಪರ್ದಿಗೆ ಪಡೆಯುವ ಪ್ರಕ್ರಿಯೆ.

ಪ್ರಕರಣದ ಹಿನ್ನೆಲೆ

ಜನಾರ್ದನ ರೆಡ್ಡಿ ಅವರ ಆಪ್ತರೆನ್ನಲಾದ ಎಎಂಆರ್ ಪ್ರೈವೇಟ್ ಲಿಮಿಟೆಡ್‌ನ ಉದ್ಯಮಿ ಮಹೇಶ್ ರೆಡ್ಡಿ ಅವರು ಕಳೆದ ಮೇ 8ರಂದು ದೇವಸ್ಥಾನಕ್ಕೆ ವಿವಿಧ ಆಭರಣ ಹಾಗೂ ಕವಚಗಳನ್ನು ದೇಣಿಗೆಯಾಗಿ ನೀಡಿದ್ದರು. ಈ ಕವಚಗಳನ್ನು ತಾಮ್ರದಿಂದ ತಯಾರಿಸಲಾಗಿದ್ದು, ಇವುಗಳಿಗೆ ಬಂಗಾರದ ಲೇಪನಕ್ಕಾಗಿ 60 ಗೇಜ್ ಉಳ್ಳ ಬಂಗಾರದ ಹಾಳೆಗಳನ್ನು ಬಳಸಲಾಗಿದೆ ಎಂದು ದಾನಿಗಳ ಪರವಾಗಿ ಹಾಜರಿದ್ದ ವಾಸ್ತುಶಿಲ್ಪಿ ಗುಂಡಾಚಾರಿ ಸ್ಥಪತಿ ತಿಳಿಸಿದ್ದರು. ಅವರ ಪ್ರಕಾರ ಈ ಬಂಗಾರದ ಅಂದಾಜು ತೂಕ 1280 ಗ್ರಾಂ ಆಗಿತ್ತು.

ಟ್ವಿಸ್ಟ್ ನೀಡಿದ ಮೌಲ್ಯಮಾಪನ

ಆದರೆ ಸರ್ಕಾರದ ಪರವಾಗಿ ಆಭರಣಗಳನ್ನು ಪರಿಶೀಲಿಸಿದ ಅಕ್ಕಸಾಲಿಗರು ಮತ್ತು ಬ್ಯಾಂಕ್ ಮೌಲ್ಯಮಾಪಕರು ಭಿನ್ನವಾದ ವರದಿ ನೀಡಿದ್ದಾರೆ. ತಾಮ್ರದ ಕವಚಗಳಿಗೆ ಲೇಪನ ಮಾಡಲಾದ ಬಂಗಾರದ ತೂಕವು ಅಂದಾಜು 250 ಗ್ರಾಂನಿಂದ 300 ಗ್ರಾಂ ಮಾತ್ರ ಇರಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಾನಿಗಳು ಹೇಳಿದ ತೂಕಕ್ಕೂ ಮತ್ತು ತಜ್ಞರ ಅಂದಾಜಿಗೂ ಭಾರಿ ವ್ಯತ್ಯಾಸ ಕಂಡುಬಂದಿರುವುದರಿಂದ ಗೊಂದಲ ಉಂಟಾಗಿದೆ.

ಇದನ್ನೂ ಓದಿ ಅಂಜನಾದ್ರಿಗೆ 2 ಕೋಟಿ ರೂ. ಚಿನ್ನಾಭರಣ ಕಾಣಿಕೆ: ಹಲವು ಅನುಮಾನಗಳಿಗೆ ಕಾರಣವಾಯ್ತು ಉದ್ಯಮಿಯ ಬಿಲ್

ಜಿಲ್ಲಾಧಿಕಾರಿಗಳ ಕ್ರಮ

ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಭರಣಗಳಿಗೆ ಸಂಬಂಧಿಸಿದ ಬಿಲ್, ಇನ್‌ವಾಯ್ಸ್ ಮತ್ತು ಪ್ರಮಾಣಪತ್ರಗಳನ್ನು ಸಲ್ಲಿಸಲು ಮೇ 12ರ ಗಡುವು ನೀಡಿದ್ದರು. ಅದರಂತೆ ಉದ್ಯಮಿಯ ಪರವಾಗಿ ಗುಂಡಾಚಾರಿ ಸ್ಥಪತಿ ಅವರು ಮೇ 11ರಂದು ಅಗತ್ಯ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಈಗ ದಾನಿಗಳು ನೀಡಿದ ಬಿಲ್‌ಗಳು ಮತ್ತು ಮಜೂರಿ ವಿವರಗಳನ್ನು ಆಧರಿಸಿ, ಜಿಲ್ಲಾಡಳಿತವು ಎಲ್ಲಾ ದಾಖಲೆಗಳನ್ನು ಪುನಃ ಪರಿಶೀಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us