AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಜಲಾಶಯಗಳ ಇಂದಿನ ಸ್ಥಿತಿಗತಿ: ಕೃಷ್ಣಾ ನದಿಗೆ ಹರಿದುಬಂತು 88 ಸಾವಿರ ಕ್ಯೂಸೆಕ್ ನೀರು

ರಾಜ್ಯದ ಪ್ರಮುಖ ಕಾವೇರಿ ಮತ್ತು ಕೃಷ್ಣಾ ಕಣಿವೆ ಜಲಾಶಯಗಳ ನೀರಿನ ಸಂಗ್ರಹಣೆ ಮತ್ತು ಒಳಹರಿವಿನಲ್ಲಿ ಏರಿಳಿತ ಕಂಡುಬರುತ್ತಿದೆ. ಜುಲೈ 25 ರಂದು ಕಬಿನಿ, ಕೆಆರ್‌ಎಸ್, ಆಲಮಟ್ಟಿ ಮತ್ತು ಹೇಮಾವತಿ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. ಕಬಿನಿ ಮತ್ತು ಕೆಆರ್‌ಎಸ್‌ನಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರಿದ್ದರೆ, ಆಲಮಟ್ಟಿ ಭರ್ತಿಯ ಹಂತದಲ್ಲಿದೆ.

ರಾಜ್ಯದ ಜಲಾಶಯಗಳ ಇಂದಿನ ಸ್ಥಿತಿಗತಿ: ಕೃಷ್ಣಾ ನದಿಗೆ ಹರಿದುಬಂತು 88 ಸಾವಿರ ಕ್ಯೂಸೆಕ್ ನೀರು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jul 27, 2026 | 11:46 AM

Share

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಹಾಗೂ ಒಳಹರಿವಿನ ಪ್ರಮಾಣದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಡ್ಯಾಂಗಳಲ್ಲಿ ಇಂದಿನ (ಜುಲೈ ೨೫) ನೀರಿನ ಮಟ್ಟದ ವಿವರ ಇಲ್ಲಿದೆ.

ಕಬಿನಿ ಜಲಾಶಯ (ಮೈಸೂರು)

ಕಳೆದ ವರ್ಷಕ್ಕೆ ಹೋಲಿಸಿದರೆ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೊಂಚ ಕಡಿಮೆಯಾಗಿದೆ. ಇಂದಿನ ನೀರಿನ ಮಟ್ಟ 72.77 ಅಡಿ (ಕಳೆದ ವರ್ಷ ಇದೇ ದಿನ: 82.86 ಅಡಿ). ಇನ್ನು ನೀರಿನ ಸಂಗ್ರಹ 13.61 ಟಿಎಂಸಿ (ಕಳೆದ ವರ್ಷ: 19.16 ಟಿಎಂಸಿ). ಇನ್ನು ಒಳಹರಿವು, 4,494 ಕ್ಯೂಸೆಕ್ (ಕಳೆದ ವರ್ಷ: 15,718 ಕ್ಯೂಸೆಕ್), ಹೊರಹರಿವು, ನದಿಗೆ 500 ಕ್ಯೂಸೆಕ್ ನೀರು ಬಿಡುಗಡೆ (ಕಳೆದ ವರ್ಷ: 16,875 ಕ್ಯೂಸೆಕ್) ಆಗಿದೆ. ಕಳೆದ 24 ಗಂಟೆಗಳಲ್ಲಿ 10 ಮಿ.ಮೀ. ಮಳೆ ದಾಖಲಾಗಿದೆ.

ಕೃಷ್ಣರಾಜಸಾಗರ / ಕೆಆರ್‌ಎಸ್ ಡ್ಯಾಂ (ಮಂಡ್ಯ)

ನೀರಿನ ಗರಿಷ್ಠ ಮಟ್ಟ 124.80 ಅಡಿ (ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ) ಆದರೆ ಇಂದಿನ ನೀರಿನ ಮಟ್ಟ: 91.82 ಅಡಿ ಇದೆ. ಇಂದಿನ ಸಂಗ್ರಹ ಆಗಿರುವ ನೀರಿನ ಮಟ್ಟ 17.051 ಟಿಎಂಸಿ, ನೀರಿನ ಒಳಹರಿವು 726 ಕ್ಯೂಸೆಕ್, ಹೊರಹರಿವು 1,576 ಕ್ಯೂಸೆಕ್ ಇದೆ.

ಆಲಮಟ್ಟಿ ಜಲಾಶಯ (ವಿಜಯಪುರ)

ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ ಡ್ಯಾಂ) ಭರ್ತಿಯಾಗುವ ಹಂತ ತಲುಪಿದ್ದು, ಭಾರಿ ಪ್ರಮಾಣದ ಒಳಹರಿವು ದಾಖಲಾಗಿದೆ. ಗರಿಷ್ಠ ಮಟ್ಟದಲ್ಲಿ 519.60 ಮೀಟರ್ ಇಂದಿನ ನೀರಿನ ಮಟ್ಟದಲ್ಲಿ 518. 69 ಮೀಟರ್ (ಗರಿಷ್ಠ ಮಟ್ಟಕ್ಕೆ ಹತ್ತಿರ) ಇದೆ. ಒಳಹರಿವು 88,228 ಕ್ಯೂಸೆಕ್ ಹಾಗೂ ಹೊರಹರಿವು 68,425 ಕ್ಯೂಸೆಕ್ ಇದೆ.

ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರಿಗೆ ಗುಡ್​​ ನ್ಯೂಸ್ : ಒಸಿ ಸಿಕ್ಕ ಮೇಲೆ ಬಿಲ್ಡರ್‌ಗಳ ಇಷ್ಟದಂತೆ ನಕ್ಷೆ ಬದಲಾಯಿಸುವಂತಿಲ್ಲ

ಹೇಮಾವತಿ ಜಲಾಶಯ (ಹಾಸನ – ಗೊರೂರು)

ಗರಿಷ್ಠ ಮಟ್ಟ 2,922 ಅಡಿ (37 ಟಿಎಂಸಿ) ಆದರೆ ಇಂದಿನ ನೀರಿನ ಮಟ್ಟ 2,904.97ಅಡಿ (23.045 ಟಿಎಂಸಿ) ಹಾಗೂ ಒಳಹರಿವು 3,068 ಕ್ಯೂಸೆಕ್ ಮತ್ತು ಹೊರಹರಿವು 450 ಕ್ಯೂಸೆಕ್(ಗಮನಿಸಿ: ಕಳೆದ ವರ್ಷ ಇದೇ ದಿನ 2,921.03 ಅಡಿ [36.165 ಟಿಎಂಸಿ] ನೀರಿತ್ತು ಹಾಗೂ 8,347 ಕ್ಯೂಸೆಕ್ ಒಳಹರಿವಿತ್ತು).

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 am, Sat, 25 July 26

Follow Us
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಬಿಗ್​​ಬಾಸ್ ಮನೆಗೆ ಹೋಗಲು ಅಪ್ಪ-ಮಗನ ನಡುವೆಯೇ ಪೈಪೋಟಿ: ವಿಡಿಯೋ
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಹೆಬ್ಬಾಳ್ಕರ್​​ ಪರ ನಿಂತ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ?
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸೋಮಾವತಿ ನದಿಗೆ ಬಿದ್ದ ಕಾರು: ಬಂಡೆಯಿಂದಾಗಿ ಉಳಿದ ದಂಪತಿ ಜೀವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ
ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶನ; ಓರ್ವನ ಬಂಧನ