TV9 Kannada News Live: ನಕಲಿ ಔಷಧ ದಂಧೆಯ ಕಿಂಗ್ಪಿನ್ ಪ್ರಶಾಂತ್ ರಂಜನ್ ಬಾಬು ಬಂಧನ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
Karnataka News Today Live Updates: ದೊಡ್ಡೇರಿ ನಕಲಿ ಔಷಧ ಪ್ರಕರಣದ ಎಸ್‌ಐಟಿ ತನಿಖೆ, ಇಂದಿನಿಂದ ನಡೆಯಬೇಕಿದ್ದ 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿಕೆ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ ಬರೆದ ಭರ್ಜರಿ 10 ದಾಖಲೆಗಳು ಸೇರಿದಂತೆ ಇಂದಿನ ಎಲ್ಲಾ ಲೈವ್ ಸುದ್ದಿ ಅಪ್‌ಡೇಟ್‌ಗಳು ಇಲ್ಲಿದೆ.

LIVE NEWS & UPDATES
-
ಸಿಎಂ ಡಿಕೆಶಿ ಭೇಟಿಯಾದ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಗಣೇಶ್!
ಬೆಳಗಿನ ಜಾವ ದೆಹಲಿಗೆ ಪ್ರಯಾಣಿಸುವ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್. ಗಣೇಶ್ ಅವರು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು.
-
ಕೇದಾರನಾಥ ಯಾತ್ರಾ ಮಾರ್ಗದಲ್ಲಿ ಬೆಟ್ಟ ಕುಸಿತ: ಬಾಲಕ ಸಾವು!
ಕೇದಾರನಾಥದ ಚಿರ್ಬಾಸಾ ಬಳಿ ಬೆಟ್ಟದಿಂದ ಬಂಡೆಗಳು ಕುಸಿದು ಉತ್ತರ ಪ್ರದೇಶದ 5 ವರ್ಷದ ಬಾಲಕ ಯಶ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಹಾನಿಗೊಳಗಾದ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ರಾತ್ರಿಯಿಡೀ ಶ್ರಮಿಸಿ ಸುಮಾರು 1,500 ಯಾತ್ರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿವೆ.
-
-
ವಿಶ್ವ ದಾಖಲೆ ಬರೆದ 10ನೇ ತರಗತಿಯ ವಿಷ್ಣುಪ್ರಿಯಾ!
ಪರೀಕ್ಷಾ ಭಯ ಹಾಗೂ ಒತ್ತಡ ನಿವಾರಣೆಗೆ ಮೂಡುಬಿದಿರೆಯ ಆಳ್ವಾಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ವಿಶೇಷ ಅಭಿಯಾನ ನಡೆಸಿ ಗಮನಸೆಳೆದಿದ್ದಾಳೆ. ಸಹ-ವಿದ್ಯಾರ್ಥಿಗಳಿಗೆ ಮಾಸ್ಟರ್ ಕ್ಲಾಸ್ ಮೂಲಕ ಕೌನ್ಸೆಲಿಂಗ್ ಹಾಗೂ ಸಮಯ ನಿರ್ವಹಣೆ ಮಾರ್ಗದರ್ಶನ ನೀಡಿ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಪಾತ್ರಳಾಗಿದ್ದಾಳೆ. ಮತ್ತಷ್ಟು ಓದಿ
-
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನಕ್ಕೆ ಟೇಲ್ ಸ್ಟ್ರೈಕ್!
ಬಲವಾದ ಗಾಳಿಯಿಂದಾಗಿ ಗುವಾಹಟಿಯಿಂದ ಬಂದ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಹಿಂಭಾಗ ರನ್‌ವೇಗೆ ತಾಗಿದ್ದು (ಟೇಲ್ ಸ್ಟ್ರೈಕ್), ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನವನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದ್ದು, ಡಿಜಿಸಿಎ (DGCA) ತನಿಖೆ ನಡೆಸುವ ಸಾಧ್ಯತೆಯಿದೆ. ಮತ್ತಷ್ಟು ಓದಿ
-
ಸಿರಿಗೆರೆ ಶ್ರೀಗಳ ಅಭಯ: ಹೆದ್ದಾರಿ ಬಂದ್ ಪ್ರತಿಭಟನೆಯಿಂದ ಹಿಂದೆ ಸರಿದ ರೈತರು!
ದಾವಣಗೆರೆ ತಾಲೂಕಿನ ಹೆಬ್ಬಾಳ್ ಟೋಲ್ ಗೇಟ್ ಬಳಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ನಾಳೆ (ಸೆಪ್ಟೆಂಬರ್ 29) ನಡೆಸಲು ಉದ್ದೇಶಿಸಿದ್ದ ಹೆದ್ದಾರಿ ಬಂದ್ ಹೋರಾಟವನ್ನು ರೈತರು ಕೈಬಿಟ್ಟಿದ್ದಾರೆ.ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಅಭಿನವ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮುಂಬರುವ ದಿನಗಳಲ್ಲಿ ಕೆರೆಗಳಿಗೆ ನೀರು ಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಗಳು ಅಭಯ ನೀಡಿದ್ದಾರೆ. ಸ್ವಾಮೀಜಿಯವರ ಭರವಸೆಗೆ ಗೌರವ ನೀಡಿದ ರೈತ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
-
-
ಬೋರ್‌ವೆಲ್‌ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವು!
ಹರಿಯಾಣದ ಫರಿದಾಬಾದ್ ಜಿಲ್ಲೆಯ ಸೀಹಿ ಗ್ರಾಮದಲ್ಲಿ ಆಟವಾಡುತ್ತಾ ಬೋರ್‌ವೆಲ್‌ಗೆ ಬಿದ್ದಿದ್ದ ನೇಹಾ (2.5 ವರ್ಷ) ಎಂಬ ಬಾಲಕಿಯನ್ನು 10 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮಗು ಕೊನೆಯುಸಿರೆಳೆದಿದೆ ಎಂದು ವೈದ್ಯರು ಘೋಷಿಸಿದ್ದಾರೆ.
Breaking News Today Live Updates in Kannada: ದೊಡ್ಡೇರಿ ಫಾರ್ಮ್‌ಹೌಸ್‌ನ ನಕಲಿ ಔಷಧ ತಯಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಶಾಂತ್‌ನನ್ನು ಎಸ್‌ಐಟಿ ಇಂದು ಬೆಳಿಗ್ಗೆ 10 ಗಂಟೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದೆ. ನಕಲಿ ಜಾಲ ಎಲ್ಲೆಲ್ಲಿ ವ್ಯಾಪಿಸಿದೆ ಹಾಗೂ ಎಷ್ಟು ದಿನಗಳಿಂದ ನಡೆಯುತ್ತಿತ್ತು ಎಂಬ ಸತ್ಯಾಸತ್ಯತೆ ಹೊರಬರಬೇಕಿದೆ. ಮತ್ತೊಂದೆಡೆ, ವಾರದಲ್ಲಿ 5 ದಿನಗಳ ಬ್ಯಾಂಕಿಂಗ್ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಐಬಿಎ ಭರವಸೆ ನೀಡಿದ ಹಿನ್ನೆಲೆಯಲ್ಲಿ ಇಂದಿನಿಂದ ನಡೆಯಬೇಕಿದ್ದ 3 ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದ್ದು, ಬ್ಯಾಂಕ್ ಗ್ರಾಹಕರು ನಿರಾಳರಾಗಿದ್ದಾರೆ. ಇನ್ನು ಕ್ರೀಡಾ ರಂಗದಲ್ಲಿ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರಿಗೆ ಮತ್ತೊಮ್ಮೆ 10 ಪ್ರಮುಖ ದಾಖಲೆಗಳನ್ನು ಸೇರ್ಪಡೆಗೊಳಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
Published On - Sep 28,2026 8:30 AM




