AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಾರ್ದನ ರೆಡ್ಡಿಗೆ ಬಿಗ್ ಶಾಕ್: ಉಲ್ಟಾ ಹೊಡೆದ ಬಿಜೆಪಿ ಸದಸ್ಯೆ, ಆಪರೇಷನ್ ಪುಟ್ಬಾಲ್ ಫೇಲ್

ಹೊಸ ಪಕ್ಷ ಕಟ್ಟಿ ಗಂಗಾವತಿಯಿಂದ ಸ್ಪರ್ಧಿಸಿ ಗೆದ್ದಿರುವ ಜನಾರ್ದನ ರೆಡ್ಡಿ, ಸ್ಥಳಿಯ ರಾಜಕಾರಣದಲ್ಲೂ ರೆಡ್ಡಿ ಹಿಡಿತ ಸಾಧಿಸಲು ಹೊರಟಿದ್ದಾರೆ.‌ ಈ ವೇಳೆ ಗಣಿಧಣಿಗೆ ಆರಂಭಿಕ ಆಘಾತವಾಗಿದೆ.

ಜನಾರ್ದನ ರೆಡ್ಡಿಗೆ ಬಿಗ್ ಶಾಕ್: ಉಲ್ಟಾ ಹೊಡೆದ ಬಿಜೆಪಿ ಸದಸ್ಯೆ, ಆಪರೇಷನ್ ಪುಟ್ಬಾಲ್ ಫೇಲ್
ಜನಾರ್ದನ ರೆಡ್ಡಿ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ|

Updated on: Jun 27, 2023 | 3:12 PM

Share

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gali Janardhan Reddy) ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್ ಪಿಪಿ) ಕಟ್ಟಿ ರಾಜ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಹೊಸ ಪಕ್ಷದೊಂದಿಗೆ ಮೊದಲ ಚುನಾವಣೆ ಎದುರಿಸಿರುವ ಜನಾರ್ದನ ರೆಡ್ಡಿ, ತಾವು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಪಕ್ಷ ಕಟ್ಟಿ ಗಂಗಾವತಿಯಿಂದ ಸ್ಪರ್ಧಿಸಿ ಗೆದ್ದಿರುವ ಜನಾರ್ದನ ರೆಡ್ಡಿ, ಸ್ಥಳಿಯ ರಾಜಕಾರಣದಲ್ಲೂ ರೆಡ್ಡಿ ಹಿಡಿತ ಸಾಧಿಸಲು ಹೊರಟಿದ್ದಾರೆ.‌ ಈ ವೇಳೆ ಗಣಿಧಣಿಗೆ ಆರಂಭಿಕ ಆಘಾತವಾಗಿದೆ. ಹೌದು..ಮಾಜಿ ಸಚಿವ ಹಾಗೂ ಕೆಆರ್ ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಆಪರೇಷನ್ ಪುಟ್ಬಾಲ್ ಉಲ್ಟಾ ಹೊಡೆದಿದೆ. ಬೆಳಿಗ್ಗೆಯಷ್ಟೆ ರೆಡ್ಡಿ ಸಮುಮ್ಮದಲ್ಲೇ ಕಮಲ ತೊರೆದು ಕೆಆರ್ ಪಿಪಿ ಸದಸ್ಯೆಯೊಬ್ಬರು ಮತ್ತೆ ಸಂಜೆಯಾಗುತ್ತಲೇ ಕಮಲ ಮುಡಿದಿದ್ದಾರೆ. ಗಂಗಾವತಿ ನಗರಸಭೆ ವಾರ್ಡ್​ ನಂಬರ್ 30ರ ಬಿಜೆಪಿ ಸದಸ್ಯೆ ಸುಚೇತಾ ಶಿರಿಗೇರಿ ಯೂಟರ್ನ್ ಹೊಡೆದಿದ್ದಾರೆ.

ಇದನ್ನೂ ಓದಿ: ವಿಜಯಪುರ: ಬಿಜೆಪಿ ಸಭೆಯಲ್ಲಿ ಯತ್ನಾಳ್ – ನಿರಾಣಿ ಪರೋಕ್ಷ ವಾಗ್ದಾಳಿ, ಕಾರ್ಯಕರ್ತರ ಜಟಾಪಟಿ

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನಗರಸಭೆ ಸದಸ್ಯೆ ಪಕ್ಷ ಸೇರ್ಪಡೆಗೊಂಡಿದ್ದು, ಖುದ್ದು ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದರು. ಆದ್ರೆ ಸಂಜೆಯಾಗುತ್ತಲೇ ಇದೇ ಬಿಜೆಪಿ ಸದಸ್ಯೆ ನಾನು ಕೆಆರ್ ಪಿಪಿ ಪಕ್ಷಕ್ಕೆ ಸೇರ್ಪಡೆ ಆಗೇ ಇಲ್ಲ. ಎಂದು ಯೂಟನ್೯ ಹೊಡೆದಿದ್ದಾರೆ. ಬಿಜೆಪಿ ಮುಖಂಡರುಗಳು, ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ನಗರಸಭೆ ಸದಸ್ಯರು ಸುಚೇತಾ ಶಿರಿಗೇರಿ ಭೇಟಿ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ನಾನು ಕೆಆರ್​ಪಿಪಿಗೆ ಸೇರ್ಪಡೆಯಾಗಿಲ್ಲ ಎಂದು ಸುಚೇತಾ ಶಿರಿಗೇರಿ ಸ್ಪಷ್ಟಪಡಿಸಿದರು.

ಶಾಸಕರು ನಮ್ಮ ತಮ್ಮ ಬೆಂಬಲಿಗರೊಂದಿಗೆ ವಾರ್ಡಿನ ಕೆಲ ಸಮಸ್ಯೆಗಳನ್ನು ಆಲಿಸಲು, ಹಾಗೇ ಅಭಿವೃದ್ಧಿ ವಿಷಯವಾಗಿ ನಮ್ಮ ಮನೆಗೆ ಮಾತನಾಡಲು ಬಂದಿದ್ದರು. ಆ ಸಂದರ್ಭದಲ್ಲಿ ಅಚಾತುರ್ಯದಿಂದ ಹಾಗೂ ಅವಸರವಸರವಾಗಿ ನನಗೆ ಅವರ ಪಕ್ಷದ ಶಾಲು ಹಾಕಿ ಫೋಟೋ ತೆಗೆದಿದ್ದಾರೆ ಹೊರತು ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಿಲ್ಲ. ಮುಂದೆಯೂ ಹೋಗುವದಿಲ್ಲ ಎಂದು ಸುಚೇತಾ ಶಿರಿಗೇರಿ ಹೇಳಿದರು.

ಒಂದೊಂದಾಗೆ ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆಗಳನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ರೆಡ್ಡಿ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಇದರ ಭಾಗವಾಗಿ ಹಲವು ಗ್ರಾಮ‌ ಪಂಚಾಯತಿಗಳು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತೆಕ್ಕೆಗೆ ಜಾರಿವೆ. ಇಷ್ಟೆಲ್ಲಾ ಆಗೋಕೆ ಕಾರಣ ಇದೇ ಆಪರೇಷನ್ ಪುಟ್ಬಾಲ್. ಚುನಾವಣೆ ಮುಂಚೆಯಿಂದಲೂ ಆಪರೇಷನ್ ಪುಟ್ಬಾಲ್ ಮೂಲಕ ಸ್ಥಳಿಯ ಸಂಸ್ಥೆಯ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಿದ್ದ ರೆಡ್ಡಿ, ನಿನ್ನೆಯೂ ಗಂಗಾವತಿ ನಗರಸಭೆಗೆ ಕೈ ಹಾಕಿದ್ದರು. 30ನೇ ವಾಡ್೯ನ ಬಿಜೆಪಿಯ ಸದಸ್ಯೆ ಸುಚೇತ ಕಾಶೀನಾಥ್ ಸಿರಿಗೆರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರ್ಪಡೆಯಾಗಿದ್ದರು.

ಇದೀಗ ಯೂಟರ್ನ್ ಹಪಡೆದಿದ್ದು, ಅಲ್ಲಿಗೆ ಬೆಳಿಗ್ಗೆಯಿಂದ ನಡೆದ ಆಪರೇಷನ್ ಪುಟ್ಬಾಲ್ ಕಥೆ ದಿ ಎಂಡ್ ಆಗಿದೆ.‌ ಗೋಲ್ ಹೊಡೆದಿದ್ದ ಗಣಿ ಧಣಿಗೆ ಸರಿಯಾದ ಸಪೋರ್ಟ್ ಸಿಗದೇ ಆಪರೇಷನ್ ಪುಟ್ಬಾಲ್ ಫೇಲ್ ಆಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ