ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಪಾಲಕರು ಮತ್ತು ಶಿಕ್ಷಕರು: ಖುಷಿ ಖಷಿಯಿಂದ ಶಾಲೆಗೆ ಬಂದ ಮಕ್ಕಳು

ಕೊಪ್ಪಳದ ಕುವೆಂಪು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನ ಪಾಲಕರು ಮತ್ತು ಶಿಕ್ಷಕರ ಸಹಕಾರದಿಂದ ಅಭಿವೃದ್ಧಿ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಾಲೆಗೆ ಬಣ್ಣ ಹಚ್ಚಲಾಗಿದೆ. ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ.

ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಪಾಲಕರು ಮತ್ತು ಶಿಕ್ಷಕರು: ಖುಷಿ ಖಷಿಯಿಂದ ಶಾಲೆಗೆ ಬಂದ ಮಕ್ಕಳು
ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಪಾಲಕರು ಮತ್ತು ಶಿಕ್ಷಕರು: ಖುಷಿ ಖಷಿಯಿಂದ ಶಾಲೆಗೆ ಬಂದ ಮಕ್ಕಳು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 03, 2025 | 10:52 PM

ಕೊಪ್ಪಳ, ಫೆಬ್ರವರಿ 03: ಅದು ಸರ್ಕಾರಿ ಶಾಲೆ (government school). ಆದರೆ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಕಾಣುತ್ತಿದೆ. ಅನೇಕ ಕಡೆ ಸರ್ಕಾರಿ ಶಾಲೆಗೆ ಮಕ್ಕಳ ಕೊರತೆ ಇದ್ದರೆ, ಆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಪಾಲಕರು ಮತ್ತು ಶಿಕ್ಷಕರ ಶ್ರಮ. ಇದೀಗ ಪಾಲಕರು ಮತ್ತು ಶಿಕ್ಷಕರೇ ಸೇರಿ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ, ಶಾಲೆಗೆ ಬಣ್ಣ ಹಚ್ಚಿಸಿದ್ದಾರೆ.

ಕೊರೋನಾ ನಂತರ ಸರ್ಕಾರಿ ಶಾಲೆಗೆ ಹೋಗೋ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಖಾಸಗಿ ಶಾಲೆಗಳಿಗೆ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇನ್ನೊಂದಡೆ ಅನೇಕ ಕಡೆ ಈಗಲು ಆಗಲು ಬೀಳುವಂತಿರುವ ಕಟ್ಟಡ, ಮಾಸಿ ಹೋಗಿರುವ ಗೋಡೆಗಳನ್ನು ನೋಡಿ, ಪಾಲಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕ್ತಿದ್ದಾರೆ. ಆದರೆ ನಗರ ಪ್ರದೇಶದಲ್ಲಿದ್ದರು ಕೂಡ ಈ ಸರ್ಕಾರಿ ಶಾಲೆಗೆ ಮಕ್ಕಳ ಪ್ರವೇಶ ಸಂಖ್ಯೆ ಹೆಚ್ಚಾಗುತ್ತಿದೆ.

Esr

ಹೌದು ಕೊಪ್ಪಳ ನಗರದ ಕುವೆಂಪು ನಗರದ ಆಶ್ರಯ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಇದೀಗ ಶಿಕ್ಷಕರ ಶ್ರಮ, ಪಾಲಕರ ಸಹಕಾರದಿಂದ ಅಂದಚೆಂದವಾಗುವದರ ಜೊತೆಗೆ ಗುಣಮಟ್ಟದ ಶಿಕ್ಷಣದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಒಂದರಿಂದ ಏಳನೇ ತರಗತಿವರಗೆ ಈ ಶಾಲೆಯಲ್ಲಿ ನೂರಾ ಐವತ್ತಕ್ಕೂ ಅಧಿಕ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಆರಂಭದಲ್ಲಿ ಈ ಸರ್ಕಾರಿ ಶಾಲೆಗೆ ಬರಲು ಹಿಂದೇಟು ಹಾಕ್ತಿದ್ದ ಮಕ್ಕಳು ಇದೀಗ ಖುಷಿ ಖುಷಿಯಿಂದ ಶಾಲೆಗೆ ಬರ್ತಿದ್ದಾರೆ. ಇದಕ್ಕೆ ಕಾರಣ, ಪಾಲಕರು ಮತ್ತು ಶಿಕ್ಷಕರು.

Ftr

ತಮ್ಮ ಮಕ್ಕಳು ಕಲಿಯೋ ಶಾಲೆ ಚೆನ್ನಾಗಿ ಇರಬೇಕು ಅಂತ ಪಾಲಕರು, ತಾವು ಕಲಿಸುತ್ತಿರುವ ಶಾಲೆ ಚೆನ್ನಾಗಿರಬೇಕು ಅಂತ ಶಿಕ್ಷಕರು ಮುತುವರ್ಜಿವಹಿಸಿದ್ದರಿಂದ, ಈ ಸರ್ಕಾರಿ ಶಾಲೆ ಇದೀಗ ಅಂದಚಂದವಾಗಿ ಕಾಣುತ್ತಿದೆ. ಈ ಮೊದಲು ಬಣ್ಣವಿಲ್ಲದ ಕಳೆಗುಂದಿದ್ದ ಸರ್ಕಾರಿ ಶಾಲೆಗೆ, ಪಾಲಕರು ಮತ್ತು ಶಿಕ್ಷಕರೇ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಹಾಕಿ, ಬಣ್ಣ ಹಚ್ಚಿಸಿದ್ದಾರೆ.

ಇದನ್ನೂ ಓದಿ: ಕನ್ನಡ ಬರೆಯಲು ಪರದಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವರು! ವಿಡಿಯೋ ವೈರಲ್

ಇಡೀ ಶಾಲೆಗೆ ತಾವೇ ಬಣ್ಣವನ್ನು ಹಚ್ಚಿಸಿ, ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ. ಇನ್ನು ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೂಡ ನೀಡ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಹಣ ಹೊಂದಿಸಿ, ಬಣ್ಣ ತಂದು, ಕಾರ್ಮಿಕರಿಂದ ಬಣ್ಣ ಹಚ್ಚಿಸಿದ್ದು, ಶಾಲೆ ಇದೀಗ ಲಕ ಲಕನೇ ಹೊಳೆಯುತ್ತಿದೆ.

Rw

ಸದ್ಯ ಶಾಲೆಗೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಐದು ಕೊಠಡಿಗಳು ಮಾತ್ರವಿದ್ದು, ಅಲ್ಲಿಯೇ ಜಾಗವನ್ನು ಹೊಂದಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನು ಸರ್ಕಾರ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ನೀಡಿದರೆ, ಸರ್ಕಾರಿ ಶಾಲೆ ಕೂಡ ಖಾಸಗಿ ಶಾಲೆಯನ್ನು ಮೀರಿಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತು ಅವರ ಬೆನ್ನಿಗೆ ನಿಂತಿರುವ ಪಾಲಕರಿಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:49 pm, Mon, 3 February 25

ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ಫ್ರಾನ್ಸ್​ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಪ್ರಧಾನಿ ಮೋದಿ ನಮನ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ
ದುಷ್ಕೃತ್ಯ ನಿಲ್ಲಿಸಿ ಮುಖ್ಯವಾಹಿನಿಗೆ ಬರುವ ಪ್ರಯತ್ನದಲ್ಲಿದ್ದ ಬಾಗಪ್ಪ
ದೇವರ ಗುಡಿ ಕಟ್ಟಿ ಪಾಪ ತೊಳೆದುಕೊಳ್ಳಲು ಮುಂದಾಗಿದ್ದ ಬಾಗಪ್ಪ ಹರಿಜನ!
ದೇವರ ಗುಡಿ ಕಟ್ಟಿ ಪಾಪ ತೊಳೆದುಕೊಳ್ಳಲು ಮುಂದಾಗಿದ್ದ ಬಾಗಪ್ಪ ಹರಿಜನ!