ಬಾಳೆ ಹೂ ಪಲ್ಯ.. ಕುಸಬಿ ಅನ್ನ ಸೂಪರ್: ಸ್ಪರ್ಧೆಯಲ್ಲಿ ಮಹಿಳೆಯರ ಕೈ ರುಚಿ ಇನ್ನೂ ಸೂಪರ್!
ಕೊಪ್ಪಳ: ಪ್ರತಿಯೊಂದು ಆಹಾರದ ಹಿಂದೆಯೂ ಒಂದೊಂದು ಗುಟ್ಟು ಇರುತ್ತೆ. ಅದಕ್ಕೊಂದು ಕಥೆ ಇರುತ್ತೆ. ಅದ್ರಲ್ಲೂ, ವಿಜಯನಗರ ಸಾಮ್ರಾಜ್ಯದ ಆಹಾರ ಪದ್ಧತಿಯ ಗತ್ತೇ ಗತ್ತು. ಐತಿಹಾಸಿಕ ಆಹಾರದ ಪದ್ಧತಿಯ ಸಿರಿ ತಿಳಿಸೋದಕ್ಕಾಗಿಯೇ ಇಲ್ಲೊಂದು ಸ್ಪರ್ಧೆ ನಡೀತು. ಬಾಳೆ ಹೂ ಪಲ್ಯ, ಕುಸಬಿ ಅನ್ನ, ಹುಸ್ತಿ ಕಾಯಿ, ಕಿಚಡಿ, ಜೊಳದ ಸಂಕಟಿ, ಮೆಂತೆ ಕಡಬು, ಎಳ್ಳು ಹುಂಡಿ, ನವಣೆ ಅನ್ನ ಇತ್ಯಾದಿ ವೆರೈಟಿ ವೆರೈಟಿ ಐಟಂಗಳನ್ನು ತಯಾರಿಸಲಾಗಿದೆ. ಅಪ್ಪಟ ದೇಸಿತನ.. ಖಡಕ್ ರುಚಿ.. ಕೊಪ್ಪಳ ಜಿಲ್ಲಾಡಳಿತ ನಡೆಸಿದ ಅಡುಗೆ ರಾಣಿ […]
ಕೊಪ್ಪಳ: ಪ್ರತಿಯೊಂದು ಆಹಾರದ ಹಿಂದೆಯೂ ಒಂದೊಂದು ಗುಟ್ಟು ಇರುತ್ತೆ. ಅದಕ್ಕೊಂದು ಕಥೆ ಇರುತ್ತೆ. ಅದ್ರಲ್ಲೂ, ವಿಜಯನಗರ ಸಾಮ್ರಾಜ್ಯದ ಆಹಾರ ಪದ್ಧತಿಯ ಗತ್ತೇ ಗತ್ತು. ಐತಿಹಾಸಿಕ ಆಹಾರದ ಪದ್ಧತಿಯ ಸಿರಿ ತಿಳಿಸೋದಕ್ಕಾಗಿಯೇ ಇಲ್ಲೊಂದು ಸ್ಪರ್ಧೆ ನಡೀತು.
ಬಾಳೆ ಹೂ ಪಲ್ಯ, ಕುಸಬಿ ಅನ್ನ, ಹುಸ್ತಿ ಕಾಯಿ, ಕಿಚಡಿ, ಜೊಳದ ಸಂಕಟಿ, ಮೆಂತೆ ಕಡಬು, ಎಳ್ಳು ಹುಂಡಿ, ನವಣೆ ಅನ್ನ ಇತ್ಯಾದಿ ವೆರೈಟಿ ವೆರೈಟಿ ಐಟಂಗಳನ್ನು ತಯಾರಿಸಲಾಗಿದೆ. ಅಪ್ಪಟ ದೇಸಿತನ.. ಖಡಕ್ ರುಚಿ.. ಕೊಪ್ಪಳ ಜಿಲ್ಲಾಡಳಿತ ನಡೆಸಿದ ಅಡುಗೆ ರಾಣಿ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಬ್ಬದ ಊಟ ತಯಾರಾಯಿತು. ವಿಷ್ಯ ಏನಂದ್ರೆ, ಇದೇ ತಿಂಗಳ 9 ಮತ್ತು 10ರಂದು ಆನೆಗುಂದಿ ಉತ್ಸವ ನಡೆಯಲಿದೆ. ವಿಜಯನಗರ ಸಾಮ್ರಾಜ್ಯದ ಐತಿಹಾಸಿಕತೆಯನ್ನ ಸಾರುವ ಈ ಉತ್ಸವದ ಪ್ರಯುಕ್ತ, ನಿನ್ನೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ನಡೆಯಿತು. ಪಾರಂಪರಿಕ ಅಡುಗೆಗಳು ಮತ್ತು ಸ್ಥಳೀಯ ಪದಾರ್ಥಗಳನ್ನ ಅನೇಕ ಮಹಿಳಾ ಸ್ಪರ್ಧಿಗಳು ತಯಾರಿಸಿದ್ರು.
ರೊಟ್ಟಿ, ಅನ್ನ, ಹುಂಡಿ ಯಿಂದ ಹಿಡಿದು ವಿವಿಧ ರೀತಿ ಜ್ಯೂಸ್ ಅನ್ನೂ ಸಹ ಸ್ಪರ್ಧೆಯಲ್ಲಿ ತಯಾರು ಮಾಡಿದ್ರು. ಸ್ಪರ್ಧೆಯಲ್ಲಿ ಗೆದ್ದವ್ರಿಗೆ ನಗದು ಬಹುಮಾನದ ಜೊತೆಗೆ ಅಡುಗೆ ರಾಣಿ ಬಿರುದನ್ನೂ ನೀಡಲಾಯ್ತು. ಆನೆಗುಂದಿ ಉತ್ಸವ ಹತ್ತಿರ ಆಗ್ತಿದ್ದಂತೆ ವಿಜಯನಗರ ಸಾಮ್ರಜ್ಯ ನೆನಪಿಸುವ ಕಾರ್ಯಕ್ರಮ ಜೋರಾಗ್ತಿದೆ. ಇದು ಜನರಿಗೂ ಖುಷಿ ತರುತ್ತಿದೆ.
Published On - 12:40 pm, Mon, 6 January 20