AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಗಾವತಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ, ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್‌

ಕೊಪ್ಪಳದ ಗಂಗಾವತಿ ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ ಸಲ್ಲಿಸಿದ ಆರೋಪದ ಮೇಲೆ ಸ್ಥಳದಲ್ಲೇ ಇದ್ದ ನಗರದ ಪೊಲೀಸ್ ರಾಣೆಯ ಪೊಲೀಸ್​ ಠಾಣೆ ಇನ್ಸ್​ಪೆಕ್ಟರ್​ ಸೇರಿದಂತೆ ಇವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಆಧಾರದ ಮೇಲೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

ಗಂಗಾವತಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಪೂಜೆ, ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್‌
ಗಣೇಶ ವಿಸರ್ಜನೆ ಮೆರವಣಿಗೆ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Oct 06, 2023 | 8:09 AM

Share

ಕೊಪ್ಪಳ, (ಅಕ್ಟೋಬರ್ 06): ಗಣೇಶ ವಿಸರ್ಜನೆ ವೇಳೆ ನಗರದ ಜಾಮೀಯ ಮಸೀದಿ ಮುಂದೆ ಪೂಜೆ ಸಲ್ಲಿಸುತ್ತಿರುವುದನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆಂಬ ಕಾರಣಕ್ಕೆ ಗಂಗಾವತಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಮುಖ್ಯ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ. ಗಂಗಾವತಿ ನಗರ ಠಾಣೆ ಇನ್ಸ್​ಪೆಕ್ಟರ್ ಅಡಿವೇಶ ಗುದಿಗೊಪ್ಪ, ಪಿಎಸ್​ಐ ಕಾಮಣ್ಣ ಹಾಗೂ ಹೆಡ್ ಕಾನ್ಸಟೇಬಲ್ ಮರಿಯಪ್ಪ ಹೊಸಮನಿ ಅವರನ್ನು ಸಸ್ಪೆಂಡ್ ಮಾಡಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅದೇಶ‌ ಹೊರಡಿಸಿದ್ದಾರೆ. ಅಕ್ಟೋಬರ್.3 ರಂದು ಗಂಗಾವತಿಯಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ‌ ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಕಾರಣ ನೀಡಿದ್ದಾರೆ.

ಕಳೆದ 3 ದಿನಗಳ ಹಿಂದೆ  ಗಣೇಶ ವಿಸರ್ಜನೆ ಸಂದರ್ಭದಲ್ಲಿ ಜಾಮೀಯ ಮಸೀದಿ ಮಂದೆ ಗಣೇಶ ವಾಹನ ನಲ್ಲಿಸಿ ಕುಂಬಳಿಕಾಯಿ ಒಡೆದು ಪೂಜೆ ಸಲ್ಲಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪಿಎಸ್ಐ ಕಾಮಣ್ಣ ಮತ್ತು ಮುಖ್ಯ ಪೇದೆ ಮರಿಯಪ್ಪ ಅವರು ಇದನ್ನು ತಡೆದಿಲ್ಲ. ಸೂಕ್ಷ್ಮ ಪ್ರದೇಶವಿದ್ದರೂ ಮಸೀದಿ ಮುಂದೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಆ ಕಾರಣಕ್ಕಾಗಿ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗಿತ್ತು. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಇರುವುದಕ್ಕೆ ಕರ್ತವ್ಯದಲ್ಲಿದ್ದ ಮೂವರ ಪೊಲೀಸ್ ಸಿಬ್ಬಂದಿ ವಿರುದ್ಧ ಎಸ್ಪಿ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಮಸೀದಿ ಮುಂದೆ ಮತ್ತೆ ಪೂಜೆ: ಗಂಗಾವತಿಯಲ್ಲಿ ಉದ್ವಿಗ್ನ ಪರಿಸ್ಥಿತಿ 

ಸೆಪ್ಟೆಂಬರ್ 28 ರಂದು ಕೊಪ್ಪಳದ ಗಂಗಾವತಿಯ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿದ್ದ ಗಣೇಶ ವಿಸರ್ಜನೆ ವೇಳೆಯಲ್ಲಿ ಯುವಕರು ಮಸೀದಿ ಎದುರು ಮಂಗಳಾರತಿ ಮಾಡಿ, ‘ಗವಿ ಗಂಗಾಧರೇಶ್ವರ ಮಹಾ ರಾಜಕೀ ಜೈ’ ಎಂದು ಘೋಷಣೆ ಕೂಗಿದ ವೀಡಿಯೋ ವೈರಲ್ ಆಗಿತ್ತು. ಇದು ಕೋಮು ಗಲಭೆಗೆ ಪ್ರಚೋದನೆ ನೀಡುತ್ತದೆ ಎನ್ನುವ ಕಾರಣಕ್ಕೆ ಸೆ.30 ರಂದು ಮಂಗಳಾರತಿ ಮಾಡಿದ 4 ಜನರ ಮೇಲೆ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಾಗಿತ್ತು. ಈ ಪ್ರರಕಣ ಇನ್ನೂ ಹಸಿ ಇರುವಾಗಲೇ ಅಕ್ಟೋಬರ್ 03ರಂದು ರಾತ್ರಿ ವೇಳೆ ಕೂಡ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮತ್ತೆ ಅದೇ ಮಸೀದಿಯ ಮುಂದೆ ಹೋಮಕುಂಡ ಹಾಕಿ ಅಗ್ನಿ ಹಾಕಿ ಪೂಜೆ ಸಲ್ಲಿಸಲಾಗಿತ್ತು. ಇದಕ್ಕೆ ಮುಸ್ಲಿಂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ