ಕರ್ನಾಟಕ ನಾಮಕರಣಕ್ಕೆ ಗೋಲ್ಡನ್ ಜುಬಿಲಿ: ಪಿಯುಸಿ ವಿದ್ಯಾರ್ಥಿಗಳಿಗೆ ಚಿನ್ನದಂತಹ ಅವಕಾಶ ಕಲ್ಪಿಸಿದ ಶಿಕ್ಷಣ ಸಂಸ್ಥೆ
ಕರ್ನಾಟಕ ನಾಮಕರಣವಾಗಿ ಐವತ್ತನೇ ವರ್ಷದ ಸಂಭ್ರಮದಲ್ಲಿ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿರುವ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ವಿನೂತನ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ನೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಇಚ್ಚೆಯನುಸಾರ ಪಿಯುಸಿ ವಿಜ್ಞಾನ ಅಥವಾ ಕಾಮರ್ಸ್ ಕೋರ್ಸ್ ಗೆ ಉಚಿತ ಪ್ರವೇಶ ನೀಡಲು ಮುಂದಾಗಿದೆ.
ಕರ್ನಾಟಕ ನಾಮಕರಣವಾಗಿ ಐವತ್ತನೇ ವರ್ಷದ ಸಂಭ್ರಮದಲ್ಲಿ (ಚಿನ್ನದ ಮಹೋತ್ಸವ -Golden jubilee to Karnataka naming) ರಾಜ್ಯವಿದೆ. ಈ ಸವಿನೆನಪಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ (Gangavathi taluk) ಶ್ರೀರಾಮನಗರದಲ್ಲಿರುವ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ವಿನೂತನ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ನೂರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಇಚ್ಚೆಯನುಸಾರ ಪಿಯುಸಿ ವಿಜ್ಞಾನ ಅಥವಾ ಕಾಮರ್ಸ್ ಕೋರ್ಸ್ ಗೆ ಉಚಿತ ಪ್ರವೇಶ ( free education) ನೀಡಲು ಮುಂದಾಗಿದೆ. ಅವರಿಗೆ ಎರಡು ವರ್ಷದ ಶುಲ್ಕ, ವಸತಿ ವ್ಯವಸ್ಥೆ, ಪುಸ್ತಕಗಳು, ಸಮವಸ್ತ್ರವನ್ನು ಉಚಿತವಾಗಿ ನೀಡಲು ಮುಂದಾಗಿದೆ.
ಹೌದು ಈ 2023-24 ನೇ ಸಾಲಿನಲ್ಲಿ, ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಬಂದ ಮೊದಲ ವಿದ್ಯಾರ್ಥಿ, ಆಂಗ್ಲಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಬಂದ ವಿದ್ಯಾರ್ಥಿ, ನವೋದಯ ಶಾಲೆಯಲ್ಲಿ ಜಿಲ್ಲೆಗೆ ಮೊದಲ ಬಂದ ವಿದ್ಯಾರ್ಥಿ… ಹೀಗೆ ಪ್ರತಿಯೊಂದು ಜಿಲ್ಲೆಗೆ ಮೂರು ವಿದ್ಯಾರ್ಥಿಗಳಂತೆ, ರಾಜ್ಯದ ಒಟ್ಟು ನೂರು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲು ನಿರ್ಧಾರ ಮಾಡಲಾಗಿದೆ.
Also Read: ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಮಹಾ ಯಡವಟ್ಟು: ಇಂದು ನಡೆಯಬೇಕಿದ್ದ ಪರೀಕ್ಷೆಯೇ ರದ್ದಾಯ್ತು
ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳು ಬಡವರಾಗಿರುತ್ತಾರೆ. ಅಂತವರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಅವರಿಗೆ ಉಚಿತವಾಗಿ ಶಿಕ್ಷಣ ನೀಡಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್ ಕಾರ್ಡ್ ಹಾಗೂ ಸ್ಥಳೀಯ ಡಿಡಿಪಿಐ ಅವರಿಂದ ಒಂದು ಪ್ರಮಾಣ ಪತ್ರ ತಂದರೆ ಅವರಿಗೆ ಉಚಿತವಾಗಿ ವಸತಿ ಸಹಿತ ಪ್ರವೇಶಾತಿ ನೀಡುತ್ತೇವೆ. ಜೂನ್ 1 ರೊಳಗಾಗಿ ಬಂದು ಪ್ರವೇಶ ಪಡೆಯಬಹುದು ಅಂತ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ