AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐತಿಹಾಸಿಕ ಅಂಜನಾದ್ರಿ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ; 22 ದಿನಗಳಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?

ಜಿಲ್ಲೆಯ ಗಂಗಾವತಿ(Gangavati) ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ(Anjanadri) ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ದಿನಕ್ಕೆ ಒಂದು ಲಕ್ಷದಂತೆ ಸರಾಸರಿ ಕಾಣಿಕೆ ಸಂಗ್ರಹವಾಗಿದೆ. ನಗದು ಜೊತೆಗೆ 2 ವಿದೇಶಿ ನೋಟು, 3 ವಿದೇಶಿ ನಾಣ್ಯ ಸಿಕ್ಕಿವೆ.

ಐತಿಹಾಸಿಕ ಅಂಜನಾದ್ರಿ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ; 22 ದಿನಗಳಲ್ಲಿ ಸಂಗ್ರಹವಾದ ಹಣವೆಷ್ಟು ಗೊತ್ತಾ?
ಅಂಜನಾದ್ರಿ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ
ಸಂಜಯ್ಯಾ ಚಿಕ್ಕಮಠ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jan 05, 2024 | 7:02 PM

Share

ಕೊಪ್ಪಳ, ಜ.05: ಜಿಲ್ಲೆಯ ಗಂಗಾವತಿ(Gangavathi) ತಾಲೂಕಿನಲ್ಲಿರುವ ಐತಿಹಾಸಿಕ ಅಂಜನಾದ್ರಿ(Anjanadri) ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಕೇವಲ 22 ದಿನಗಳಲ್ಲಿ ಬರೊಬ್ಬರಿ 27 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಹನುಮಮಾಲಾ ವಿಸರ್ಜನೆ ಹಿನ್ನೆಲೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಅದರಂತೆ ದೇವಸ್ಥಾನದಲ್ಲಿ ದಿನಕ್ಕೆ ಒಂದು ಲಕ್ಷದಂತೆ ಸರಾಸರಿ ಕಾಣಿಕೆ ಸಂಗ್ರಹವಾಗಿದೆ. ನಗದು ಜೊತೆಗೆ 2 ವಿದೇಶಿ ನೋಟು, 3 ವಿದೇಶಿ ನಾಣ್ಯ ಸಿಕ್ಕಿವೆ. ಇನ್ನು ತಹಶೀಲ್ದಾರ್​​​ ವಿಶ್ವನಾಥ್​​​ ಮುರಡಿ ನೇತೃತ್ವದಲ್ಲಿ ಪೊಲೀಸ್​​ ಬಂದೋಬಸ್ತ್​​​ ಸೇರಿದಂತೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ನಡೆಸಲಾಗಿತ್ತು.

ಅಂಜನಾದ್ರಿ ಬಗ್ಗೆ ಮಾಹಿತಿ

ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಬೆಟ್ಟವನ್ನು ಹತ್ತಿ, ಆಂಜನೇಯನ ದರ್ಶನ ಪಡೆಯಲು ಬರೊಬ್ಬರಿ 550 ಮೆಟ್ಟಿಲುಗಳನ್ನು ಏರಬೇಕು. ಜೊತೆಗೆ ಬೆಟ್ಟದ ಮೇಲಿನ ದೇವಾಲಯವು ನೋಡಲು ಆಕರ್ಷಕವಾಗಿದ್ದು, ಭಕ್ತ ಸಮೂಹವನ್ನು ಸ್ವಾಗತಿಸುತ್ತದೆ. ಈ ದೇವಾಲಯದ ಒಳಗಡೆ ಹನುಮನ ಇಷ್ಟದೇವತೆಗಳಾದ ರಾಮ-ಸೀತೆಯರನ್ನು ಪೂಜಿಸಲಾಗುತ್ತದೆ. ಇನ್ನು ವಿಶೇಷವೆಂದರೆ ಈ ದೇವಾಲಯದ ಒಳಗಡೆ ಇರುವ ಅರ್ಚಕರೊಬ್ಬರು ಹೋದಂತಹ ಪ್ರವಾಸಿಗರಿಗೆ ಕನ್ನಡ ಮತ್ತು ಹಿಂದಿ ಎರಡು ಭಾಷೆಗಳಲ್ಲಿಯೂ ಈ ಸ್ಥಳದ ಮಹಿಮೆಯನ್ನು ಚೆನ್ನಾಗಿ ತಿಳಿಸಿ ಕೊಡುತ್ತಾರೆ.

ಇದನ್ನೂ ಓದಿ:Anjanadri Hanuman Temple: ಹನುಮ‌ ಜನ್ಮ ಸ್ಥಳ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ನಾಣ್ಯಗಳು, ಒಟ್ಟು ಸಂಗ್ರಹವಾದ ಹಣ ಎಷ್ಟು ಗೊತ್ತಾ?

ಇನ್ನು ಈ ಅಂಜನಾದ್ರಿ ಬೆಟ್ಟದ ವಿಹಂಗಮ ದೃಶ್ಯಗಳು, ಬೆರಗುಗೊಳಿಸುವ ಸೂರ್ಯಾಸ್ತದ ನೋಟಗಳು ಮತ್ತು ಪರ್ವತಗಳು ಹಾಗೂ ಬಂಡೆಗಳ ನಡುವೆ ಹರಿಯುವ ತುಂಗಭದ್ರಾ ನದಿಯ ರಮಣೀಯ ನೋಟಗಳು ಬೆಟ್ಟ ಹತ್ತಿ ಬಂದ ಭಕ್ತರ ಎಲ್ಲಾ ಆಯಾಸವನ್ನು ಮರೆಸುತ್ತದೆ. ಜೊತೆಗೆ ಇಲ್ಲಿಂದ ಹಂಪಿಯ ಅವಶೇಷಗಳು ಮತ್ತು ನೆರೆಹೊರೆಯಲ್ಲಿರುವ ಇತರ ಭವ್ಯವಾದ ಬೆಟ್ಟಗಳನ್ನು ಸಹ ವೀಕ್ಷಿಸಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Fri, 5 January 24