ನಾನು ಜುಲೈ ಮೂರರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ: ಮಾಜಿ ಎಂಎಲ್ಸಿ ಹೆಚ್.ಆರ್ ಶ್ರೀನಾಥ್
ಅಯೋಧ್ಯೆ ಬಳಿಕ ಬಿಜೆಪಿಯವರು ಅಂಜನಾದ್ರಿ ಟಾರ್ಗೆಟ್ ಮಾಡಿದರು. ನಾವು ಅದನ್ನ ಎದುರಿಸುತ್ತೇನೆ, ನಾವು ಹಿಂದೂಗಳು ಎಂದರು. ದೇಶದಲ್ಲಿ ಹಿಂದೂ ಮುಸ್ಲಿಂ ಬೇರೆ ಮಾಡೋ ಕುತಂತ್ರ ನಡೆಯುತ್ತಿದೆ.
ಕೊಪ್ಪಳ: ಕಳೆದ ಕೆಲ ದಿನಗಳ ಹಿಂದೆ ಜೆ.ಡಿ.ಎಸ್ಗೆ ರಾಜೀನಾಮೆ (Resignation) ನೀಡಿದ್ದ ಮಾಜಿ ಎಂಎಲ್ಸಿ (MLC) ಹೆಚ್.ಆರ್ ಶ್ರೀನಾಥ್, ನಾನು ಜುಲೈ ಮೂರರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದು ಜಿಲ್ಲೆಯ ಗಂಗಾವತಿಯಲ್ಲಿ ಹೇಳಿಕೆ ನೀಡಿದರು. ನಾನು ಕೂಡಾ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಂಬರೋ ಚುನಾಚಣೆಗೆ ನಾನು ಆಕಾಂಕ್ಷಿ. ಕಾಂಗ್ರೆಸ್ ಸೇರೋ ವಿಚಾರವಾಗಿ ಇದುವರೆಗೂ ನಾನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಜೊತೆ ಮಾತನಾಡಿಲ್ಲ. ನಮ್ಮ ಹಿರಿಯರು ಇಬ್ಬರನ್ನು ಸರಿ ಮಾಡುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿ ವಿರುದ್ದ ಬಂಡಾಯವೆದ್ದು ಶ್ರೀನಾಥ್ ಕಾಂಗ್ರೆಸ್ನಿಂದ ಜೆಡಿಎಸ್ ಸೇರಿದ್ದರು. ಇದೀಗ ಮತ್ತೆ ಕೈ ಪಾಳಯಕ್ಕೆ ಶ್ರೀನಾಥ್ ಸೇರಲಿದ್ದಾರೆ. ಆದರು ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ಶ್ರೀನಾಥ್ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ನಾನು ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಶ್ರೀನಾಥ್ ಬಹಿರಂಗವಾಗಿ ಹೇಳಿದ್ದಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡಬಾರದು ಅಂತೇನಿಲ್ಲ. ಕೆಲವು ಸಲ ವ್ಯಕ್ತಿ ಮೇಲೆ ಚುನಾವಣೆ ಎಂದು ಶ್ರೀನಾಥ್ ಹೇಳಿದರು.
ಅಯೋಧ್ಯೆ ಬಳಿಕ ಬಿಜೆಪಿಯವರು ಅಂಜನಾದ್ರಿ ಟಾರ್ಗೆಟ್ ಮಾಡಿದರು. ನಾವು ಅದನ್ನ ಎದುರಿಸುತ್ತೇನೆ, ನಾವು ಹಿಂದೂಗಳು ಎಂದರು. ದೇಶದಲ್ಲಿ ಹಿಂದೂ ಮುಸ್ಲಿಂ ಬೇರೆ ಮಾಡೋ ಕುತಂತ್ರ ನಡೆಯುತ್ತಿದೆ. ಗಂಗಾವತಿಯಲ್ಲೂ ಕೋಮು ಗಲಭೆ ನಡೆಯುತ್ತೆ. ಈ ಬಾರಿ ಅದಕ್ಕೆ ಅವಕಾಶ ಕೊಡಲ್ಲ ಎಂದು ಮಾಜಿ ಎಂಎಲ್ಸಿ ಹೆಚ್.ಆರ್ ಶ್ರೀನಾಥ್ ಹೇಳಿದರು.
ಜೆಡಿಎಸ್ಗೆ ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ್ ಗುಡ್ ಬೈ
ಜೂನ್ 14ರಂದು ಜೆಡಿಎಸ್ಗೆ ಮಾಜಿ ಎಂಎಲ್ಸಿ ಹೆಚ್.ಆರ್.ಶ್ರೀನಾಥ್ ಗುಡ್ಬೈ ಹೇಳಿದ್ದಾರೆ. ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕೊಪ್ಪಳ ಜಿಲ್ಲಾ ಜೆಡಿಎಸ್ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಹೆಚ್.ಆರ್.ಶ್ರೀನಾಥ್ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಪತ್ರದ ಮೂಲಕ ನಾನು JDSಗೆ ಮನಃಪೂರ್ವಕವಾಗಿ ರಾಜೀನಾಮೆ ನೀಡ್ತಿದ್ದೆನೆ. ನನ್ನ ರಾಜೀನಾಮೆ ಪತ್ರ ಸ್ವೀಕರಿಸಲು ಕೋರುತ್ತೇನೆ ಎಂದು ಶ್ರೀನಾಥ್ ಪತ್ರ ಬರೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಾನು ಈಗಾಗಲೇ ಜೆಡಿಎಸ್ಗೆ ರಾಜೀನಾಮೆ ಕೊಟ್ಟಿದ್ದೇನೆ, ನಿನ್ನೆ ಮತ್ತು ಇಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಇನ್ನಿತರ ನಾಯಕರನ್ನು ಭೇಟಿ ಮಾಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾನು ಕಾಂಗ್ರೆಸ್ ಸೇರ್ತೀನಿ, ನಮ್ದು ಮೂಲ ಕಾಂಗ್ರೆಸ್ ಕುಟುಂಬ, ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೊಂದಿಗೆ ನಮ್ಮ ತಂದೆಯ ಒಡನಾಟ ಇತ್ತು. ಕಾಂಗ್ರೆಸ್ ನಲ್ಲಿ ನಮ್ಮ ತಂದೆ ಮುತ್ಸದ್ದಿ ರಾಜಕಾರಣಿ, ಹೀಗಾಗಿ ನಾನು ಮತ್ತೆ ಮರಳಿ ಗೂಡಿಗೆ ಬರೋದು ಸಂತೋಷವಾಗಿದೆ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:59 am, Thu, 23 June 22