ಕಳ್ಳನನ್ನ ಹಿಡಿದಿದ್ದೇವೆ ಬನ್ನಿ ಅಂದರೂ ಬಾರದ ಪೊಲೀಸರು! ಪೊಲೀಸರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ
ಒಂದು ಠಾಣೆ ಪೊಲೀಸರು ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲ್ಲ ಅಂದರೆ, ಮತ್ತೊಂದು ಠಾಣೆ ಪೊಲೀಸರು ನೀವೇ ಕರೆತನ್ನಿ ಎಂದು ಬೇಜವಾಬ್ದಾರಿ ಉತ್ತರಗಳನ್ನ ನೀಡಿದ್ದಾರೆ
ದೇವನಹಳ್ಳಿ: ಮಧ್ಯರಾತ್ರಿ ಗ್ರಾಮಸ್ಥರು (Villagers) ಕರೆ ಮಾಡಿ ಕಳ್ಳನನ್ನು ಹಿಡಿದಿದ್ದೇವೆ ಬನ್ನಿ ಅಂದರೂ ಪೊಲೀಸರು (Police) ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಮತ್ತು ವಿಶ್ವನಾಥಪುರ ಪೊಲೀಸರ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಒಂದು ಠಾಣೆ ಪೊಲೀಸರು ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲ್ಲ ಅಂದರೆ, ಮತ್ತೊಂದು ಠಾಣೆ ಪೊಲೀಸರು ನೀವೇ ಕರೆತನ್ನಿ ಎಂದು ಬೇಜವಾಬ್ದಾರಿ ಉತ್ತರಗಳನ್ನ ನೀಡಿದ್ದಾರೆ ಎಂದು ಗ್ರಾಮಸ್ಥರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳ್ಳನೊಬ್ಬ ಮಧ್ಯರಾತ್ರಿ ತೋಟಗಳಿಗೆ ನುಗ್ಗಿ ಕೇಬಲ್ ಕದ್ದಿದ್ದ. ಗ್ರಾಮಸ್ಥರು ದೇವನಹಳ್ಳಿ ತಾಲೂಕಿನ ಎಂಬ್ರಹಳ್ಳಿ ಬಳಿ ಕಳ್ಳನನ್ನ ಹಿಡಿದಿದ್ರು. ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕರೆ ಮಾಡಿ 2 ಗಂಟೆ ಕಾದರೂ ಪೊಲೀಸರು ಬಂದಿಲ್ಲ. ಸ್ಥಳಕ್ಕಾಗಮಿಸಿದ 112 ಸಿಬ್ಬಂದಿ ಕರೆದೊಯ್ಯಲ್ಲ ಎಂದು ವಾಪಸ್ ಹೋಗಿದ್ದಾರೆ. ಕೊನೆಗೆ ಬೈಕ್ನಲ್ಲಿ ಕಳ್ಳನನ್ನ ಕರೆದೊಯ್ಯಲಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಪೊಲೀಸರ ನಿರ್ಲಕ್ಷ್ಯಕ್ಕೆ ಸೂಕ್ತ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Children Health: ಹುಷಾರಿಲ್ಲದ ಮಕ್ಕಳನ್ನು ಶಾಲೆಗೆ ಕಳಿಸುತ್ತಿರುವ ಪೋಷಕರು: ಆರೋಗ್ಯ ನಿಯಮಗಳ ಉಲ್ಲಂಘನೆ, ಸೋಂಕು ಹರಡುವ ಆತಂಕ
ಕಾಂಕ್ರಿಟ್ ಹಾಕದೇ ವಸತಿ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು: ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ತಿಪ್ಪರಸನಾಳ ಗ್ರಾಮದಲ್ಲಿ ಗುತ್ತಿಗೆದಾರರು ಕಾಂಕ್ರಿಟ್ ಹಾಕದೇ ವಸತಿ ಕಟ್ಟಡ ನಿರ್ಮಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ತಿಪ್ಪರಸನಾಳದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ವಸತಿ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ ಕಟ್ಟಡಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನ ಬಳಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Thu, 23 June 22