AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡರಾತ್ರಿ ಜನಿಸಿದ ಮಗುವಿನ ಕರುಳೆಲ್ಲಾ ಹೊರಕ್ಕೆ: ಝೀರೋ ಟ್ರಾಫಿಕ್‌ನಲ್ಲಿ ಹುಬ್ಬಳ್ಳಿಗೆ ರವಾನೆ

ಕೊಪ್ಪಳದಲ್ಲಿ ಜನಿಸಿದ ನವಜಾತ ಶಿಶುವೊಂದಕ್ಕೆ ಕರುಳುಗಳು ಹೊರಗೆ ಬಂದಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಮಗುವಿನ ಜೀವ ಉಳಿಸಲು, ಝೀರೋ ಟ್ರಾಫಿಕ್ ಮೂಲಕ ಕೊಪ್ಪಳದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆಂಬುಲೆನ್ಸ್ ಸಿಬ್ಬಂದಿಯ ಸಹಕಾರದಿಂದ ಮಗುವನ್ನು ಸಕಾಲದಲ್ಲಿ ತಲುಪಿಸುವ ಪ್ರಯತ್ನ ಮಾಡಲಾಗಿದೆ.

ತಡರಾತ್ರಿ ಜನಿಸಿದ ಮಗುವಿನ ಕರುಳೆಲ್ಲಾ ಹೊರಕ್ಕೆ: ಝೀರೋ ಟ್ರಾಫಿಕ್‌ನಲ್ಲಿ ಹುಬ್ಬಳ್ಳಿಗೆ ರವಾನೆ
ಝೀರೋ ಟ್ರಾಫಿಕ್‌ನಲ್ಲಿ ರವಾನೆ
ಶಿವಕುಮಾರ್ ಪತ್ತಾರ್
| Edited By: |

Updated on: Dec 28, 2025 | 4:06 PM

Share

ಕೊಪ್ಪಳ, ಡಿಸೆಂಬರ್​​ 28: ಕೇವಲ 10 ಗಂಟೆ ಹಿಂದೆ ಜನಿಸಿದ ಮಗು (Newborn baby). ಆ ಮಗುವಿನ ಕರಳುಗಳು ಹೊರಗೆ ಬಂದಿದ್ದವು. ಹೀಗಾಗಿ ತುರ್ತು ಚಿಕಿತ್ಸೆ ಅನಿವಾರ್ಯವಾಗಿತ್ತು. ನಿನ್ನೆ ರಾತ್ರಿ ಜನಿಸಿದ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿತ್ತು. ಮಗುವನ್ನು ಉಳಿಸಲು ಕೆಲವರು ಪ್ರಾಣ ಒತ್ತೆ ಇಟ್ಟಿದ್ದರು. ಮಗುವನ್ನು ಝೀರೋ ಟ್ರಾಫಿಕ್​ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದುಕೊಂಡು ಹೋಗಲಾಗಿದ್ದು, ಪೊಲೀಸ್ ಇಲಾಖೆ ಕೂಡ ಸಾಥ್ ನೀಡಿತ್ತು.

ಕೊಪ್ಪಳದಲ್ಲಿ ಶನಿವಾರ ರಾತ್ರಿ 10 ಗಂಟೆ ಹಿಂದೆ ಜನಿಸಿದ ಮಗುವೊಂದನ್ನ ಝೀರೋ ಟ್ರಾಫಿಕ್​ನಲ್ಲಿ ಸುಮಾರು 110 ಕಿ.ಮೀ ದೂರದ ಹುಬ್ಬಳ್ಳಿ ಕಿಮ್ಸ್​ಗೆ ಕರೆದುಕೊಂಡು ಹೋಗಲಾಗಿದೆ. ಕುಕನೂರ ತಾಲೂಕಿನ ಗುತ್ತೂರ ನಿವಾಸಿಗಳಾದ ಮಲ್ಲಪ್ಪ, ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. 10 ಗಂಟೆಗಳ ಹಿಂದೆ ಜನಿಸಿದ ಮಗುವಿನ ಕರಳುಗಳೆಲ್ಲಾ ಹೊರಗಡೆ ಬಂದಿದ್ದ ಕಾರಣ ಮಗುವಿಗೆ ತುರ್ತು ಆಪರೇಷನ್​​ ಮಾಡಬೇಕಾದ ಹಿನ್ನಲೆ ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ತಾಯಿ ಮತ್ತು ಮಗುವನ್ನು 5 ಆಂಬ್ಯುಲೆನ್ಸ್​ಗಳ ಮೂಲಕ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್​​ನಲ್ಲಿ ರವಾನಿಸಲಾಗಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳ ಅಜ್ಜನ ಜಾತ್ರೆಗೆ ಸಿದ್ಧತೆ: ಈ ಬಾರಿ ಭಕ್ತರಿಗೆ ಏನು ಸ್ಪೆಷಲ್ ಗೊತ್ತಾ?

ಮಗುವಿಗೆ ಕರಳು ಸಮಸ್ಯೆ ಇರುವ ಹಿನ್ನಲೆ ವೈದ್ಯರು ತುರ್ತಾಗಿ ಆಪರೇಷನ್ ಮಾಡಬೇಕು ಎಂದು ಕಿಮ್ಸ್​ಗೆ ರೆಫರ್ ಮಾಡಿದ್ದರು. ಅಲ್ಲದೆ ನವಜಾತ ಶಿಶುವಿಗೆ ಕಿಡ್ನಿ ಸಮಸ್ಯೆ ಕೂಡ ಇದೆ. ಈ ಕಾರಣಕ್ಕೆ ಮಗುವಿನ ಪ್ರಾಣ ಉಳಿಸಲು ಕೊಪ್ಪಳ ವೈದ್ಯರು ಸಾಕಷ್ಟು ಹರಸಾಹಸ ಪಟ್ಟರು. ಹತ್ತು ಗಂಟೆ ಹಿಂದೆ ಜನಿಸಿದ ಮಗುವನ್ನ ಆಂಬ್ಯುಲೆನ್ಸ್ ಚಾಲಕ ಪ್ರಕಾಶ್ ಝೀರೋ ಟ್ರಾಫಿಕ್​ನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ನವಜಾತ ಶಿಶು ಪ್ರಾಣ ಉಳಿಸಲು ಪೊಲೀಸರು ಕೂಡ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ಹನುಮಂತನಿಗೆ ಪೂಜೆ ಮಾಡಲು ಕಿತ್ತಾಟ: 3 ಕೇಸ್​ ಬುಕ್, ವಿವಾದದ ಕೇಂದ್ರ ಬಿಂದುವಾದ ಅಂಜನಾದ್ರಿ

ಒಟ್ಟಾರೆ ಹತ್ತು ಗಂಟೆಯ ಹಿಂದೆ ಜನಿಸಿದ ಮಗು ಇದೀಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದೆಸಾಕಷ್ಟು ಅಪಾಯ ತಗೆದುಕೊಂಡು ಕೊಪ್ಪಳದಿಂದ ಝೀರೋ ಟ್ರಾಫಿಕ್​ನಲ್ಲಿ ಮಗುವನ್ನ ಕರೆದುಕೊಂಡು ಬರಲಾಗಿದೆ. ದೇವರ ದಯೆಯಿಂದ ಮಗು ಬದುಕಿದರೆ ಸಾಕು ಅನ್ನೋದು ನಮ್ಮ ಆಶಯ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.