50 ದಾಟಿದ್ರೂ ತೀರದ ಕಾಮ ದಾಹ, ಅಶ್ಲೀಲ ವಿಡಿಯೋ ತೋರಿಸಿ ಹಾಗೆ ಮಾಡೆನ್ನುತ್ತಿದ್ದ ಗಂಡನ ಕೊಂದೇ ಬಿಟ್ಟ ಹೆಂಡತಿ
ಮದುವೆಯಾಗಿ 25 ವರ್ಷಗಳು ಕಳೆದಿದ್ದರೂ ಕಾಮದಾಹ ತೀರದ ಆ ವ್ಯಕ್ತಿ, ಅಶ್ಲೀಲ ವಿಡಿಯೋಗಳನ್ನು ಪತ್ನಿಗೆ ತೋರಿಸಿ ಹಾಗೆ ಮಾಡು, ಹೀಗೆ ಮಾಡೆಂದು ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸಲಾರದ ಪತ್ನಿ, ಒನಕೆಯಿಂದ ಪತಿಯನ್ನು ಹೊಡೆದು ಕೊಂದ ಭೀಕರ ಘಟನೆಗೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಸಾಕ್ಷಿಯಾಗಿದೆ. ಅಷ್ಟಕ್ಕೂ, ಅಲ್ಲಿ ನಡೆದಿದ್ದೇನು? ಗಂಡ-ಹೆಂಡತಿ ನಡುವಣ ಜಗಳ ಕೊಲೆ ಮಾಡುವ ಮಟ್ಟಕ್ಕೆ ಹೋಗಿದ್ದೇಗೆ? ಇಲ್ಲಿದೆ ವಿವರ.

ಕೊಪ್ಪಳ, ಸೆಪ್ಟೆಂಬರ್ 27: ಒಂದು ಕಡೆ ಅರೆನಗ್ನ ಸ್ಥಿತಿಯಲ್ಲಿ ಬಿದ್ದ ಮೃತದೇಹ, ಇನ್ನೊಂದು ಕಡೆ ಪಲ್ಲಂಗದ ಮೇಲೆ ಬಿದ್ದಿರುವ ಒನಕೆ. ಮತ್ತೊಂದೆಡೆ, ಮನೆಮುಂದೆ ಪೊಲೀಸರ ತಪಾಸಣೆ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಕೊಪ್ಪಳದಲ್ಲಿ. ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್ನ ಪಂಪಾವನ ಮುಂಭಾಗದ ಸರ್ಕಾರಿ ಕ್ವಾಟರ್ಸ್ನಲ್ಲಿ ಘೋರ ಘಟನೆಯೊಂದು ನಡೆದಿದೆ. ಸ್ವಂತ ಗಂಡನನ್ನೇ ಹೆಂಡತಿ ಕೊಲೆ ಮಾಡಿದ್ದಾಳೆ. 51 ವರ್ಷದ ರಮೇಶ್ ಎಂಬವರನ್ನು ಹೆಂಡತಿ ಮಾಹದೇವಿ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೆಪಿಸಿಎಲ್ ನೌಕರ ರಮೇಶ್ ಹಾಗೂ ಮಹಾದೇವಿ ಮದುವೆಯಾಗಿ ಹೆಚ್ಚು ಕಡಿಮೆ 25 ವರ್ಷವಾಗಿದೆ. ಮಗ ದುಬೈನಲ್ಲಿದ್ದರೆ, ಮಗಳು ಇನ್ನೂ ಓದುತ್ತಿದ್ದಾರೆ. ಮನೆ ನಡೆಸಲು ಕಷ್ಟವಂತೂ ಇರಲಿಲ್ಲ. ಕೈತುಂಬಾ ಸಂಬಳವೂ ಇತ್ತು. ಆದರೆ, ರಮೇಶ್ ಮನೆಯಲ್ಲಿ ಮಾತ್ರ ನೆಮ್ಮದಿ ಇರಲಿಲ್ಲ.
ಮದುವೆಯಾಗಿ 25 ವರ್ಷ ಕಳೆದರೂ ಹೆಂಡತಿಗೆ ಕಿರುಕುಳ ಕೊಡುವುದನ್ನು ರಮೇಶ್ ಬಿಟ್ಟಿರಲಿಲ್ಲ. ಮನೆಯಲ್ಲಿ ಅಡುಗೆಯಿಂದ ಹಿಡಿದು ಎಲ್ಲ ವಿಚಾರಕ್ಕೂ ಕಿರಿಕ್ ಮಾಡತಿದ್ದರು ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಕುಡಿಯುವುದನ್ನು ಬಿಟ್ಟಿದ್ದರಾದರೂ ಮನೆಯಲ್ಲಿ ನಿತ್ಯ ಜಗಳ ಆಡುತ್ತಿದ್ದರು. ಅದೇ ರೀತಿ ಶುಕ್ರವಾರ ಕೂಡಾ ಹೆಂಡತಿ ಮಹಾದೇವಿ ಜೊತೆ ಜಗಳ ಮಾಡಿದ್ದರು. ಜಗಳ ವಿಕೋಪಕ್ಕೆ ಹೋದಾಗ ಮಹಾದೇವಿ ಒನಕೆಯಿಂದ ಹೊಡೆದಿದ್ಧಾರೆ. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ರಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ಧಾರೆ. ಇನ್ನು ರಮೇಶ್ ಹಾಗೂ ಮಹಾದೇವಿ ದಂಪತಿಯ ಮಗಳು ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಹೊಡೆಯಬೇಕು ಎಂಬ ಉದ್ದೇಶದಿಂದ ಹೊಡಿದಿದ್ದಲ್ಲ, ಅಚಾನಕ್ ಆಗಿ ಘಟನೆ ಸಂಭವಸಿದೆ ಎಂದಿದ್ದಾರೆ.
ಸಣ್ಣ ಗಲಾಟೆ ಕೊಲೆಯಲ್ಲಿ ಪರ್ಯವಸಾನಗೊಳ್ಳಲು ವಿಕೃತ ಮನಸೇ ಕಾರಣ
ಮೃತ ರಮೇಶ್ ಮುನಿರಾಬಾದ್ ಕೆಪಿಸಿಎಲ್ ನಲ್ಲಿ ಕಳೆದ ಹತ್ತು ವರ್ಷದಿಂದ ಕೆಲಸ ಮಾಡತ್ತಿದ್ದರು. ಕಚೇರಿಯ ಸರ್ಕಾರಿ ಕ್ವಾಟರ್ಸ್ನಲ್ಲಿ ವಾಸವಿದ್ದರು. ಕೆಪಿಸಿಎಲ್ನಲ್ಲಿ ರಮೇಶ್ಗೆ ಕೈತುಂಬಾ ಸಂಬಳವೂ ಇತ್ತು. ಹೆಚ್ಚು ಕಡಿಮೆ 80 ಸಾವಿರ ರೂ. ಸಂಬಳ ಇತ್ತು ಎನ್ನಲಾಗಿದೆ. ಆದರೆ ಮನೆಗೆ ಕೇವಲ ಎರಡು ಸಾವಿರ ರೂ. ಕೊಡುತ್ತಿದ್ದರಂತೆ. ಹಣಕಾಸಿನ ವಿಚಾರಕ್ಕೂ ಮನೆಯಲ್ಲಿ ಗಲಾಟೆಯಾಗುತ್ತಿತ್ತು. ಅದಲ್ಲದೆ ಮಗ ದುಬೈನಲ್ಲಿನದ್ದಾನೆ. ಮಗನ ವಿವಾಹ ವಿಚ್ಛೇದನ ವಿಚಾರವಾಗಿ ಮನೆಯಲ್ಲಿ ಆಗಾಗ ಗಲಾಟೆ ನಡೆಯುತ್ಇತ್ತು.ಇದನ್ನು ಹೊರತುಪಡಿಸಿದರೆ ಗಂಡ ಹೆಂಡತಿ ಚೆನ್ನಾಗಿದ್ದರು. ಸಣ್ಣ ಗಲಾಟೆ ಕೊಲೆಯಾಗುವ ಹಂತಕ್ಕೆ ಹೋಗಿದ್ದಕ್ಕೆ ಕಾರಣ ರಮೇಶನ ವಿಕೃತ ಮನಸ್ಸು ಎನ್ನಲಾಗಿದೆ.
ಗಂಡನ ವಿಕೃತ ಮನಸು, ಕಾಮದಾಹದ ಬಗ್ಗೆ ಪತ್ನಿ ಅಳಲು
ಗಂಡನನ್ನು ಹೊಡೆದು ಕೊಲೆ ಮಾಡಿರುವ ಮಹಾದೇವಿ, ಪೊಲೀಸರ ಮುಂದೆ ರಮೇಶನ ವಿಕೃತ ಮನಸ್ಥಿತಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಗಲಾಟೆಯಿಂದ ರೋಸಿಹೋಗಿದ್ದು ಒಂದು ಕಾರಣವಾದರೆ, ಆತನ ಕಾಮದಾಹ ಹೆಂಡತಿ ಮಹಾದೇವಿಗೆ ಸಾಕಾಗಿ ಹೋಗಿತ್ತು. ವಯಸ್ಸು 50 ದಾಟಿದರೂ ನಿತ್ಯ ಲೈಂಗಿಕ ಕ್ರೀಯೆಗೆ ಸಹಕರಿಸುವಂತೆ ರಮೇಶ್ ಒತ್ತಾಯ ಮಾಡುತ್ತಿದ್ದರಂತೆ. ವಿಚಿತ್ರ ಎಂದರೆ ಅಶ್ಲೀಲ ವಿಡಿಯೋ ತೋರಿಸಿ ಹೀಗೆ ಸಹಕರಿಸು ಎಂದು ಗಲಾಟೆ ಮಾಡತಿದ್ದರು ಎನ್ನಲಾಗಿದೆ.
ಲೈಂಗಿಕ ಕ್ರಿಯೆ ವಿಚಾರಕ್ಕೇ ನಡೆದಿತ್ತಂತೆ ಗಲಾಟೆ
ಶುಕ್ರವಾರ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ರಮೇಶ್ ಮೃತ ದೇಹ ಕೂಡ ಅದನ್ನೇ ಸಾರಿ ಹೇಳುತ್ತಿದೆ. ಆತ ಅರ್ದಂಬರ್ದ ಬಟ್ಟೆ ಹಾಕೊಂಡಿರುವ ಸ್ಥಿತಿಯಲ್ಲೇ ಮೃತದೇಹ ಇದೆ. ಅಶ್ಲೀಲ ವಿಡಿಯೋ ತೋರಿಸಿ ಅದೇ ರೀತಿ ಸಹಕರಿಸು ಎಂದು ಹೇಳಿರುವುದನ್ನು ಸಹಿಸದೆ ಉಮಾದೇವಿ ರೊಚ್ಚಿಗೆದ್ದು ಒನಕಯಿಂದ ಹೊಡೆದ ಪರಿಣಾಮ ರಮೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಬೇಕು ಎಂಬ ಉದ್ದೇಶದಿಂದ ಹೊಡೆದಿಲ್ಲ ಎಂದು ಮಹಾದೇವಿ ಪೊಲೀಸರ ಮುಂದೆ ಹೇಳಿದ್ದಾರೆ. ಸದ್ಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಮಗಳು ದೂರು ನೀಡಿದ್ದಾಳೆ.
ಇದನ್ನೂ ಓದಿ: ತಾಯಿಯ ಎದುರೇ ಐದು ವರ್ಷದ ಬಾಲಕನ ಶಿರಚ್ಛೇದ, ಆರೋಪಿಯನ್ನು ಥಳಿಸಿ ಕೊಂದ ಸ್ಥಳೀಯರು
ಒಟ್ಟಾರೆಯಾಗಿ, ಗಂಡನ ಕಾಮದಹಕ್ಕೆ ಬೇಸತ್ತು ಹೆಂಡತಿ ಆತನನ್ನು ಬಾರದ ಲೋಕಕ್ಕೆ ಕಳುಹಿಸಿದ್ದಾರೆ. ಮನೆಯಲ್ಲಿ ಮಕ್ಕಳು ಇದ್ದಾರೆ ಎಂಬುದನ್ನೂ ಮರೆತಂತೆ ವರ್ತಿಸಿದ್ದ ರಮೇಶ್ ಹೆಂಡತಿ ಜೊತೆ ವಿಕೃತವಾಗಿ ನಡೆದುಕೊಳ್ಳುತ್ತಿದ್ದುದು ಸಾವಿಗೆ ಕಾರಣವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Sat, 27 September 25



