
ಕೊಪ್ಪಳ, (ಏಪ್ರಿಲ್ 13): ಜಿಲ್ಲೆಯಲ್ಲಿ ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದ ಹೊರವಲಯದಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಗುಂಡಿಯಲ್ಲಿ ಇಬ್ಬರು ಯುವಕರ (Youths) ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ರುದ್ರೇಶ್ ಗಂಗಾವತಿ ಮತ್ತು ರವಿ ರಾಮಣ್ಣ ತಟ್ಟಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ. ಇವರಿಬ್ಬರು ಸ್ನೇಹಿತರಾಗಿದ್ದು (Friends), ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಆದ್ರೆ, ಇಂದು (ಏಪ್ರಿಲ್ 13) ಏಕಾಏಕಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
23 ವರ್ಷದ ರುದ್ರೇಶ್ ಗಂಗಾವತಿ ಮತ್ತು 32 ವರ್ಷದ ರವಿ ರಾಮಣ್ಣ ತಟ್ಟಿ ಇವರಿಬ್ಬರೂ ಕುಕನೂರು ನಿವಾಸಿಗಳಾಗಿದ್ದು, ಸ್ನೇಹಿತರಾಗಿದ್ದರೆಂದು ತಿಳಿದುಬಂದಿದೆ. ಕಳೆದ ಕೆಲವು ವರ್ಷಗಳಿಂದ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಆಧಾರಸ್ತಂಭರಾಗಿದ್ದರು. ನಾಲ್ಕೈದು ದಿನಗಳ ಹಿಂದೆ ಕೆಲಸಕ್ಕೆ ಎಂದು ಮನೆಯಿಂದ ತೆರಳಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಪಕ್ಕದಲ್ಲೇ ಎಣ್ಣೆ ಪ್ಯಾಕೆಟ್‌ಗಳು ಹಾಗೂ ತುಂಡಾದ ಚಪ್ಪಲಿಗಳು ಪತ್ತೆಯಾಗಿವೆ. ಇದರಿಂದ ಶವಗಳಿಗೆ ಬೆಂಕಿ ಹಚ್ಚಲಾಗಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಇನ್ನು ಮೃತರ ಬೈಕ್ ಘಟನೆ ನಡೆದ ಸ್ಥಳದಿಂದ ಬೇರೆಡೆ ಪತ್ತೆಯಾಗಿದ್ದು, ಅದಕ್ಕೆ ಹೆಚ್ಚಿನ ಹಾನಿ ಕಂಡುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲಿಸಿದರು.
ಇಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವುದನ್ನು ನೋಡಿ ಕೆಲವರು ಇದೊಂದು ಹಿಟ್ ಆ್ಯಂಡ್ ರನ್ ಇರಬಹುದು ಎನ್ನುತ್ತಿದ್ದಾರೆ. ಇನ್ನು ಕೆಲವರು ಪ್ರೀ ಪ್ಲ್ಯಾನ್ ಮರ್ಡರ್ ಎನ್ನುತ್ತಿದ್ದಾರೆ. ಅದಕ್ಕೆ ಅಕ್ಕ ಪಕ್ಕ ಬಿದ್ದಿರೋ ಡ್ರಿಂಕ್ಸ್ ಪಾಕೆಟ್ ಗಳು ಕೂಡಾ ಕಾರೆಣ. ರಾತ್ರಿ ಎಲ್ಲೋ ಪಾರ್ಟಿ ಮಾಡಿದ್ದು, ಅಲ್ಲಿ ಅವರನ್ನು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿರಬಹುದು ಎನ್ನುವ ಶಂಕೆ ಸಹ ವ್ಯಕ್ತವಾಗಿದೆ.
ಇನ್ನು ಅಪಘಾತ ಬೈಕ್ ಗೆ ಹಾನಿಯಾಗಬೇಕಾಗಿತ್ತು, ಆದ್ರೆ ಬೈಕ್ ಗೆ ಅಂತಹ ಯಾವುದೇ ಹಾನಿಯಾಗಿಲ್ಲ, ಹೀಗಾಗಿ ಈ ಪ್ರಕರಣ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಇನ್ನು ಶವ ಬಿದ್ದಿವೆ ಅನ್ನೋ ವಿಚಾರ ತಿಳಿದು ಜನ ತಂಡೋಪ ತಂಡವಾಗಿ ದೌಡಾಯಿಸಿದ್ದು, ಇನ್ನೊಂದೆಡೆ ಜನರನ್ನ ನಿಯಂತ್ರಿಸಲು ಪೊಲೀಸರು ಹಸರಸಾಹ ಪಡಬೇಕಾಯ್ತ. ಇನ್ನು ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ