AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಡಾಕ್ಟರ್​ನ ಮಣಿಸಿದ ರಾಜಶೇಖರ್ ಹಿಟ್ನಾಳ್ ಬಳಿ ಎಷ್ಟಿದೆ ಆಸ್ತಿ ಗೊತ್ತಾ?

ಇನ್ನು 29 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿರುವ ರಾಜಶೇಖರ ಹಿಟ್ನಾಳ್, 12 ಕೋಟಿ ರೂ. ಸಾಲವನ್ನು ಕೂಡಾ ಹೊಂದಿದ್ದಾರೆ. ಕೊಪ್ಪಳ ಸೇರಿದಂತೆ ಹಲವಡೆ ಕ್ರಷರ್ ಗಳನ್ನು ಹೊಂದಿರುವ ರಾಜಶೇಖರ ಹಿಟ್ನಾಳ್, ಅನೇಕ ಕನ್ಸ್​ಟ್ರಕ್ಷನ್ ಕಂಪನಿಗಳಲ್ಲಿ ಪಾಲು ಹೊಂದಿದ್ದಾರೆ. ಅವರು ಅಫಿಡವಿಟ್​​ನಲ್ಲಿ ನೀಡಿರುವ ವಿವರ ಇಲ್ಲಿದೆ.

ಕೊಪ್ಪಳದಲ್ಲಿ ಡಾಕ್ಟರ್​ನ ಮಣಿಸಿದ ರಾಜಶೇಖರ್ ಹಿಟ್ನಾಳ್ ಬಳಿ ಎಷ್ಟಿದೆ ಆಸ್ತಿ ಗೊತ್ತಾ?
ರಾಜಶೇಖರ್ ಹಿಟ್ನಾಳ್
ಸಂಜಯ್ಯಾ ಚಿಕ್ಕಮಠ
| Updated By: ರಮೇಶ್ ಬಿ. ಜವಳಗೇರಾ|

Updated on:Jun 06, 2024 | 8:33 PM

Share

ಕೊಪ್ಪಳ, ಜೂನ್ 6: ಲೋಕಸಭಾ ಚುನಾವಣೆಯಲ್ಲಿ (Lok Sabha Election Result) ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಶೇಖರ್ ಹಿಟ್ನಾಳ್ (Rajashekar Hitnal) ಜಯಗಳಿಸಿದ್ದಾರೆ. ತೀವ್ರ ಜಿದ್ದಾಜಿದ್ದಿ ಪಡೆದಿದ್ದ ಕಣದಲ್ಲಿ ಬಿಜೆಪಿಯ ಡಾ. ಬಸವರಾಜ್ ಕ್ಯಾವಟರ್ ಅವರನ್ನು 46,357 ಮತಗಳಿಂದ ಸೋಲಿಸಿ ಜಯಗಳಿಸಿದ್ದಾರೆ. ವಿಶೇಷವೆಂದರೆ 2019 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕೂಡಾ ರಾಜಶೇಖರ ಹಿಟ್ನಾಳ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ 31 ಸಾವಿರ ಮತಗಳಿಂದ ಸೋತಿದ್ದರು. ಆದರೆ ಮತ್ತೆ ಈ ಬಾರಿ ಸ್ಪರ್ಧಿಸಿದ್ದ ರಾಜಶೇಖರ್ ಹಿಟ್ನಾಳ್, ಎರಡನೇ ಪ್ರಯತ್ನದಲ್ಲಿ ಗೆಲವು ಸಾಧಿಸುವಲ್ಲಿ ಸಫಲರಾಗಿದ್ದಾರೆ.

ರಾಜಶೇಖರ ಹಿಟ್ನಾಳ್ ರಾಜಕೀಯ ಹಿನ್ನೆಲೆಯ ಕುಟುಂಬದವರು. ಅವರ ಸಹೋದರ ರಾಘವೇಂದ್ರ ಹಿಟ್ನಾಳ್ ಕೊಪ್ಪಳ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಇನ್ನು ರಾಜಶೇಖರ ಹಿಟ್ನಾಳ್ ಅವರ ತಂದೆ ಬಸವರಾಜ್ ಹಿಟ್ನಾಳ್ ಕೂಡಾ ಕೊಪ್ಪಳ ಕ್ಷೇತ್ರದ ಶಾಸಕರಾಗಿದ್ದರು. ಬಸವರಾಜ್ ಹಿಟ್ನಾಳ್ 2014 ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆದ್ರೆ ತಂದೆ ಮತ್ತು ತನಗೆ ಹಿಂದಿನ ಚುನಾವಣೆಯಲ್ಲಿ ಆದ ಸೋಲಿನ ಸೇಡನ್ನು ಈ ಬಾರಿ ತೀರಿಸಿಕೊಂಡಿರುವ ರಾಜಶೇಖರ ಹಿಟ್ನಾಳ್, ದೆಹಲಿಗೆ ಪ್ರವೇಶ ಪಡೆದಿದ್ದಾರೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದ ನಿವಾಸಿಯಾಗಿರುವ ನಲವತ್ನಾಲ್ಕು ವರ್ಷದ, ರಾಜಶೇಖರ ಹಿಟ್ನಾಳ್ ಓದಿದ್ದು ಪಿಯುಸಿವರಗೆ ಮಾತ್ರ. ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿರುವ ರಾಜಶೇಖರ್, ನಂತರ ವ್ಯಾಪಾರ ಮತ್ತು ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ರಾಜಶೇಖರ್ ಹಿಟ್ನಾಳ್ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ಸಣ್ಣ ವಯಸ್ಸಿನಲ್ಲಿಯೇ ನಿರ್ವಹಿಸಿದ್ದಾರೆ. ತನ್ನ ಸಹೋದರ ಮತ್ತು ತಂದೆಯ ಚುನಾವಣೆಯಗಳಲ್ಲಿ ಸಕ್ರೀಯವಾಗಿ ಓಡಾಡಿದ್ದ ರಾಜಶೇಖರ ಹಿಟ್ನಾಳ್, ರಾಜಕೀಯ ಪಟ್ಟುಗಳನ್ನು ಕಲಿತಿದ್ದರು. ಕೊಪ್ಪಳ ಜಿಲ್ಲಾ ಪಂಚಾಯತ್ ಸಧಸ್ಯರಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಎರಡು ಅವದಿಯಲ್ಲಿ ಕೆಲಸ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ರಾಜಶೇಖರ್ ಹಿಟ್ನಾಳ್ ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಬೇರೆಯವರಿಗೆ ಟಿಕೆಟ್ ಸಿಕ್ಕಿದ್ದರಿಂದ ಸುಮ್ಮನಾಗಿದ್ದ ಹಿಟ್ನಾಳ್ ಗೆ ಕಾಂಗ್ರೆಸ್ ಹೈಕಮಾಂಡ್, ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು.

ಇನ್ನು ಹಿಟ್ನಾಳ್ ಕುಟುಂಬ, ಸಿಎಂ ಸಿದ್ದರಾಮಯ್ಯಗೆ ತೀರಾ ಆಪ್ತವಾಗಿರುವ ಕುಟುಂಬ. ಸಿದ್ದರಾಮಯ್ಯ ಕೂಡಾ ತನಗೆ ತುಂಬಾ ಆತ್ಮೀಯ ಮತ್ತು ಶಿಕ್ಷ್ಯರಾಗಿರುವ ರಾಜಶೇಖರ ಹಿಟ್ನಾಳ್ ಗೆ ಟಿಕೆಟ್ ಕೊಡಿಸುವಲ್ಲಿ ಈ ಬಾರಿ ಸಫಲರಾಗಿದ್ದರು.

ಇದನ್ನೂ ಓದಿ: ಕೊಪ್ಪಳದಲ್ಲಿ ಕಾಂಗ್ರೆಸ್​​ನ ರಾಜಶೇಖರ್ ಹಿಟ್ನಾಳ್​ಗೆ ಗೆಲುವು

ಹಿಟ್ನಾಳ್ ಆಸ್ತಿ ವಿವರ

ಇನ್ನು 29 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿರುವ ರಾಜಶೇಖರ ಹಿಟ್ನಾಳ್, 12 ಕೋಟಿ ರೂ. ಸಾಲವನ್ನು ಕೂಡಾ ಹೊಂದಿದ್ದಾರೆ. ಕೊಪ್ಪಳ ಸೇರಿದಂತೆ ಹಲವಡೆ ಕ್ರಷರ್ ಗಳನ್ನು ಹೊಂದಿರುವ ರಾಜಶೇಖರ ಹಿಟ್ನಾಳ್, ಅನೇಕ ಕನ್ಸ್​ಟ್ರಕ್ಷನ್ ಕಂಪನಿಗಳಲ್ಲಿ ಪಾಲು ಹೊಂದಿದ್ದಾರೆ. ಇನ್ನು ಇವರ ವಿರುದ್ಧ ಕಲ್ಲು ಗಣಿಗಾರಿಕೆ ಖನಿಜ ನಿಯಮ ಉಲ್ಲಘಂನೆ ಮಾಡಿದ್ದರ ಬಗ್ಗೆ ಎರಡು ದೂರುಗಳು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:40 pm, Thu, 6 June 24