AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಷ್ಕಿಂಧೆಯಲ್ಲಿ ರಾಮನ ಹೆಜ್ಜೆ ಗುರುತು; ಹನುಮಂತನ ತಾಯಿ ಅಂಜನಾದೇವಿ ಭೇಟಿ ಮಾಡಿ ಆಶಿರ್ವಾದ ಪಡೆದಿದ್ದ ಪ್ರಭು ಶ್ರೀರಾಮ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ಪ್ರದೇಶದಲ್ಲಿರುವ ಕಿಷ್ಕಿಂಧೆ ಭಾಗಕ್ಕೆ ಶ್ರೀ ರಾಮ ಬಂದಿದ್ದ. ಅಲ್ಲಿ ಆಂಜನೇಯನನ್ನು ಭೇಟಿ ಮಾಡಿದ್ದ. ನಂತರ ಲಂಕೆ ಮೇಲೆ ದಾಳಿ ಮಾಡಿ, ರಾವಣನನ್ನು ಸೋಲಿಸಿ, ಸೀತೆಯನ್ನು ಬಿಡಿಸಿಕೊಂಡು ಬರುವಲ್ಲಿ ಹನುಮಂತ ಮತ್ತು ಕಿಷ್ಕಿಂಧೆಯ ವಾನರ ಸೇನೆಯ ಕೊಡುಗೆ ದೊಡ್ಡದಿದೆ.

ಕಿಷ್ಕಿಂಧೆಯಲ್ಲಿ ರಾಮನ ಹೆಜ್ಜೆ ಗುರುತು; ಹನುಮಂತನ ತಾಯಿ ಅಂಜನಾದೇವಿ ಭೇಟಿ ಮಾಡಿ ಆಶಿರ್ವಾದ ಪಡೆದಿದ್ದ ಪ್ರಭು ಶ್ರೀರಾಮ
ಹನುಮಂತ, ಅಂಜನಾದೇವಿ
ಸಂಜಯ್ಯಾ ಚಿಕ್ಕಮಠ
| Updated By: ಆಯೇಷಾ ಬಾನು|

Updated on: Jan 10, 2024 | 8:37 AM

Share

ಕೊಪ್ಪಳ, ಜ.10: ಪ್ರಭು ಶ್ರೀರಾಮನಿಗೂ (Lord Rama), ಆಂಜನೇಯನಿಗೂ (Lord Hanuman) ಕೂಡಾ ತುಂಬಾ ಹತ್ತಿರದ ನಂಟಿದೆ. ಹೀಗಾಗಿಯೇ ರಾಮನ ಭಂಟ ಹನುಮಂತ ಅಂತ ಹೇಳಲಾಗುತ್ತದೆ. ಎಲ್ಲಿ ರಾಮನಿರುವನೋ ಅಲ್ಲಿ ಹನುಮನಿರುವನು ಅಂತ ಹೇಳುತ್ತಾರೆ. ಇನ್ನು ಶ್ರೀರಾಮ ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ (Anjanadri Betta) ಕೂಡಾ ಬಂದಿದ್ದ. ಹನುಮಂತನ ತಾಯಿ ಅಂಜನಾದೇವಿಯನ್ನು ಭೇಟಿ ಮಾಡಿ, ಆಶೀರ್ವಾದ ಜೊತೆಗೆ ಕೃತಜ್ಞತೆ ಸಲ್ಲಿಸಿದ್ದ.

ಅಂಜನಾದ್ರಿಗೆ ಬಂದಿದ್ದ ಪ್ರಭು ಶ್ರೀರಾಮ

ರಾಮ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳದಿವೆ. ಇದು ಕನ್ನಡಿಗರಿಗೆ ಕೂಡಾ ಸಂತಸವನ್ನು ಹೆಚ್ಚಿಸಿದೆ. ಯಾಕಂದ್ರೆ ರಾಜ್ಯದ ಕಿಷ್ಕಿಂಧೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳು ಇವೆ. ಅಯೋಧ್ಯೆಯಿಂದ ಪತ್ನಿಯನ್ನು ಹುಡುಕುತ್ತಾ ಹೊರಟಿದ್ದ ಪ್ರಭು ಶ್ರೀರಾಮ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ಪ್ರದೇಶದಲ್ಲಿರುವ ಕಿಷ್ಕಿಂಧೆ ಭಾಗಕ್ಕೆ ಬಂದಿದ್ದ. ಅಲ್ಲಿ ಆಂಜನೇಯನನ್ನು ಭೇಟಿ ಮಾಡಿದ್ದ. ನಂತರ ಲಂಕೆ ಮೇಲೆ ದಾಳಿ ಮಾಡಿ, ರಾವಣನನ್ನು ಸೋಲಿಸಿ, ಸೀತೆಯನ್ನು ಬಿಡಿಸಿಕೊಂಡು ಬರುವಲ್ಲಿ ಹನುಮಂತ ಮತ್ತು ಕಿಷ್ಕಿಂಧೆಯ ವಾನರ ಸೇನೆಯ ಕೊಡುಗೆ ದೊಡ್ಡದಿದೆ. ಹೀಗಾಗಿ ಲಂಕೆಯಿಂದ ಮರಳುವಾಗ ಪ್ರಭು ಶ್ರೀರಾಮ ನೇರವಾಗಿ ಅಯೋಧ್ಯೆಗೆ ಹೋಗದೆ ಮರಳಿ ಮತ್ತೆ ಅಂಜನಾದ್ರಿಗೆ ಬಂದಿದ್ದ. ಅಂಜನಾದ್ರಿಯಲ್ಲಿರುವ ಹನುಮಂತನ ತಾಯಿ ಅಂಜನಾದೇವಿಯನ್ನು ಭೇಟಿ ಮಾಡಿ, ಅಂಜನಾದೇವಿಯಿಂದ ಆಶೀರ್ವಾದ ಪಡೆದು, ಆಕೆಗೆ ಕೃತಜ್ಞತೆ ಸಲ್ಲಿಸಿದ್ದ. ಹನುಮಂತ ಮತ್ತು ವಾನರ ಸೇನೆಯ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದ ಎಂದು ಅನೇಕ ಇತಿಹಾಸಕಾರರು ಹೇಳಿದ್ದಾರೆ.

ಇದನ್ನೂ ಓದಿ: ರಾಮ ಮತ್ತು ರಾಮನ ಭಂಟ ಆಂಜನೇಯ ಮೊದಲು ಭೇಟಿಯಾಗಿದ್ದು ಎಲ್ಲಿ? ಇಲ್ಲಿ ರಾಮನ ಪಾದುಕೆಯೂ ಇದೆ

ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ, ಹನುಮನ ಜನ್ಮಸ್ಥಳ ಅಂತ ಹೇಳುತ್ತಾರೆ. ಅಂಜನಾದ್ರಿ ಬೆಟ್ಟದಲ್ಲಿ ಹನುಂತನ ದೇವಸ್ಥಾನವಿದೆ. ಹನುಮಂತನ ದೇವಸ್ಥಾನದ ಆವರಣದಲ್ಲಿಯೇ ಹನುಮಂತನ ತಾಯಿ ಅಂಜನಾದೇವಿಯ ದೇವಸ್ಥಾನ ಕೂಡಾ ಇದೆ. ಅಂಜನಾದೇವಿಗೆ ಕೂಡಾ ಪ್ರತಿನಿತ್ಯ ಪೂಜೆ ನಡೆಯುತ್ತದೆ. ಇನ್ನು ತನ್ನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹನುಮಂತನನ್ನು ರಾಮ ಮರೆಯದೇ, ಮರಳಿ ಅಂಜನಾದ್ರಿಗೆ ಬಂದು, ಅಂಜನಾದೇವಿಗೆ ತನ್ನ ದರ್ಶನ ನೀಡ್ತಾನೆ ಅಂತ ಹೇಳಲಾಗುತ್ತಿದೆ. ಇನ್ನು ಕಿಷ್ಕಿಂಧೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳು ಇವೆ. ರಾಮ ಮತ್ತು ಆಂಜನೇಯ ಭೇಟಿಯಾಗಿದ್ದು, ವಾಲಿ ಹತ್ಯೆ ಮಾಡಿದ್ದು ಸೇರಿದಂತೆ ರಾಮ ಮತ್ತು ಆಂಜನೇಯನ ಬಗ್ಗೆ ಅನೇಕ ಘಟನೆಗಳು ವಾಲ್ಮಿಕಿಯ ರಾಮಾಯಣದಲ್ಲಿ ಉಲ್ಲೇಖವಾಗಿವೆ.

ರಾಮ ಮಂದಿರ ಉದ್ಘಾಟನೆಗೆ ದಿನಗಳು ಹತ್ತಿರ ಬರ್ತಿದ್ದಂತೆ, ರಾಮನ ಭಂಟ ಹನುಮಂತನ ನಾಡಿನ ಕೊಪ್ಪಳ ಜನರಿಗೆ ಸಂತಸ ಇಮ್ಮಡಿಯಾಗುತ್ತಿದೆ. ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಿಷ್ಕಿಂಧೆ ಜನ ಕಾಯುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ