ಕೊಪ್ಪಳ; ಶವ ಸಂಸ್ಕಾರಕ್ಕೂ ಪರದಾಟ, ರಸ್ತೆ ಇಲ್ಲದೆ ಭತ್ತದ ಗದ್ದೆ ಮೂಲಕ ಸ್ಮಶಾನ ತಲುಪುವ ಸ್ಥಿತಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೆನಾಗನಹಳ್ಳಿಯಲ್ಲಿ ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಶವವನ್ನು ಭತ್ತದ ಗದ್ದೆ ಮೂಲಕ ಸ್ಮಶಾನಕ್ಕೆ ಹೊತ್ತುಕೊಂಡು ಹೋದ ಘಟನೆ ನಡೆದಿದೆ. ಕಳೆದ 60 ವರ್ಷಗಳಿಂದ ಇದೇ ಸ್ಥಿತಿ ಇದೆ. ಆದಷ್ಟು ಬೇಗ ರಸ್ತೆ ಮಾರ್ಗ ಕಲ್ಪಿಸಿ ಎಂದು ಗ್ರಾಮಸ್ಥರು ಟಿವಿ9 ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಕೊಪ್ಪಳ; ಶವ ಸಂಸ್ಕಾರಕ್ಕೂ ಪರದಾಟ, ರಸ್ತೆ ಇಲ್ಲದೆ ಭತ್ತದ ಗದ್ದೆ ಮೂಲಕ ಸ್ಮಶಾನ ತಲುಪುವ ಸ್ಥಿತಿ
ಶವ ಸಂಸ್ಕಾರಕ್ಕೂ ಪರದಾಟ, ರಸ್ತೆ ಇಲ್ಲದೆ ಭತ್ತದ ಗದ್ದೆ ಮೂಲಕ ಮೆರವಣಿಗೆ
Follow us
| Updated By: ಆಯೇಷಾ ಬಾನು

Updated on: Sep 29, 2024 | 9:31 AM

ಕೊಪ್ಪಳ, ಸೆ.29: ಸ್ಮಶಾನಕ್ಕೆ ಹೋಗಲು ರಸ್ತೆ ಸಂಪರ್ಕವಿಲ್ಲದ (No Road Service) ಕಾರಣ ಭತ್ತದ ಗದ್ದೆಗಳಲ್ಲೇ ಶವ ಹೊತ್ತುಕೊಂಡು ಸಾಗಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ ತಾಲೂಕಿನ ಹಳೆನಾಗನಹಳ್ಳಿಯಲ್ಲಿ ನಡೆದಿದೆ. ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರ ಮಾಡಲು ಇಲ್ಲಿನ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ಇದೆ. ಭತ್ತದ ಗದ್ದೆಯಲ್ಲಿಯೇ ನಡೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಇದೆ.

ಗ್ರಾಮದ ಹೊರವಲಯದಲ್ಲಿ ಸ್ಮಶಾನವಿದೆ. ಆದರೆ ಸ್ಮಶಾನಕ್ಕೆ ಹೋಗಲು ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ಭತ್ತದ ಗದ್ದೆಗಳಲ್ಲಿ ಶವ ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಬೇಕಿದೆ. ನಿನ್ನೆ ಅಂಬರೀಶ್ ಅನ್ನೋ ವೃದ್ದ ಮೃತಪಟ್ಟಿದ್ದರು. ಭತ್ತದ ಗದ್ದೆಯಲ್ಲಿ ನಡೆದುಕೊಂಡು ಹೋಗಿ ಗ್ರಾಮಸ್ಥರು ಶವ ಸಂಸ್ಕಾರ ಮಾಡಿ ಬಂದಿದ್ದಾರೆ. ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಿ ಕೊಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದ್ರೆ ಕಳೆದ ಅರವತ್ತು ವರ್ಷಗಳಿಂದ ನಮ್ಮ ಸಮಸ್ಯೆ ಬಗೆಹರಿದಿಲ್ಲಾ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮತ್ತೊಂದೆಡೆ ಘಟನೆ ಸಂಬಂಧ ಗ್ರಾಮ ಪಂಚಾಯತ್ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು ಸ್ಮಶಾನಕ್ಕೆ ಇಲ್ಲಿ ವರಗೆ ರಸ್ತೆ ನಿರ್ಮಾಣವಾಗಿಲ್ಲ. ಸ್ಮಶಾನಕ್ಕೆ ಹೋಗಲು ಸರ್ಕಾರಿ ರಸ್ತೆ ಇಲ್ಲ. ಹೀಗಾಗಿ ರಸ್ತೆ ನಿರ್ಮಾಣ ಮಾಡಲು ಆಗ್ತಿಲ್ಲ. ಹೊಸದಾಗಿ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಅದಕ್ಕಾಗಿ ರೈತರಿಂದ ಭೂಮಿಯನ್ನು ಪಡೆದು ರಸ್ತೆಯನ್ನು ನಿರ್ಮಾಣ ಮಾಡಬೇಕಾಗಿದೆ. ಸರಿಸುಮಾರು ಮೂನ್ನೂರು ಮೀಟರ್ ರಸ್ತೆಗೆ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕು.

ಸ್ಮಶಾನಕ್ಕೆ ಹೋಗಲು ಭೂಮಿ ಖರೀದಿ ಮಾಡಲು ಆಗದೇ ಇರೋದರಿಂದ ನೆನೆಗುದಿಗೆ ಬಿದ್ದಿದೆ. ಸ್ಥಳೀಯ ಗ್ರಾಮ ಪಂಚಾಯತಿನಿಂದ ಶಾಸಕರವರಗೆ ಜನರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ತೊಂದರೆಗಳು ಇರುವುದರಿಂದ ರಸ್ತೆ ನಿರ್ಮಾಣ ಮಾಡಲು ಆಗ್ತಿಲ್ಲ ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಲಾಲ್ ಬಾಗ್ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಾದ ಬ್ಯಾಂಡ್ ಸ್ಟ್ಯಾಂಡ್

ಪೊಲೀಸ್ ಠಾಣೆ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಸಾವು

ಪೊಲೀಸ್ ಠಾಣೆ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಹಾಸನ ನಗರದ ಪೊಲೀಸ್ ಸಂಕೀರ್ಣ ಕಟ್ಟಡದಲ್ಲಿ ಘಟನೆ ನಡೆದಿದ್ದು, ನಾಲ್ಕನೇ ಮಹಡಿಯಿಂದ ಬಿದ್ದು 30 ವರ್ಷದ ಸುನೀಲ್ ಸಾವನ್ನಪ್ಪಿದ್ದಾನೆ. ಹೊಳೆನರಸೀಪುರ ತಾಲೂಕಿನ ಮಲ್ಲೇನಹಳ್ಳಿಯ ನಿವಾಸಿಯಾಗಿರೋ ಆತ, ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್, ನಿನ್ನೆ ಉಪಾಧೀಕ್ಷಕರ ಕಚೇರಿಗೆ ಬಂದು, ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ