ವಾಲ್ಮೀಕಿ ನಿಗಮದ ಹಗರಣದ ಮಾದರಿಯಲ್ಲೇ KRIDLನಲ್ಲಿ ಭಾರಿ ಅಕ್ರಮ: ಲೋಕಾಯುಕ್ತಕ್ಕೆ ದೂರು
ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಮಾದರಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಕೊಪ್ಪಳ ವಿಭಾಗದಲ್ಲಿ 72 ಕೋಟಿ ರೂ. ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂದಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ದೂರು ಕೂಡಾ ಸಲ್ಲಿಕೆಯಾಗಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

ಕೊಪ್ಪಳ, (ಜುಲೈ 20): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣ ಸಾಕಷ್ಟು ಸದ್ದು ಮಾಡಿದ್ದು, ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡ ಕೂಡಾ ಆಗಿತ್ತು. ಅಂತಹದ್ದೆ ಇನ್ನೊಂದು ಹಗರಣ ಕೊಪ್ಪಳದ ಕೆಐಆರ್‌ಡಿಎಲ್ ನಲ್ಲಿ ನಡೆದಿದೆ. ಈ ಹಗರಣದಲ್ಲಿ ಭಾಗಿಯಾದ ಇಬ್ಬರು ಅಧಿಕಾರಿಗಳ ವಿರುದ್ದ ಕೊಪ್ಪಳ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. 96 ಕಾಮಗಾರಿಗಳಲ್ಲಿ 72 ಕೋಟಿ ಸರ್ಕಾರಿ ಹಣವನ್ನ ದುರ್ಬಳಕೆ ಮಾಡಿರೋ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನ ಸಲ್ಲಿಕೆ ಮಾಡಿದ್ದಾರೆ. 2019 ರಿಂದ 2025 ರ ವರೆಗೆ ಕೊಪ್ಪಳ ಜಿಲ್ಲೆಯ ವಿವಿದೆಡೆ ನಡೆದ 96 ಕಾಮಗಾರಿಗಳಲ್ಲಿ ಅಂದಿನ ಇಇ ಆಗಿದ್ದ ಝಡ್ ಎಂ ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡಗುಂದಿ ಎಂಬುವವರು 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೇಳು ಬಂದ ಹಿನ್ನೆಲೆ ಕೆಆರ್‌ಐಡಿಎಲ್ ಎಂಡಿ ಬಸವರಾಜ ನಿರ್ದೇಶನದ ಮೇರೆಗೆ ಕೊಪ್ಪಳ ವಿಭಾಗದ ಇಇ ಅನಿಲ್‌ಪಾಟೀಲ್, ನೆಲೋಗಿಪುರ ಉಪವಿಭಾಗದ ಆನಂದ ಕಾರ್ಲಕುಂಟಿ ಖುದ್ದಾಗಿ ಕೊಪ್ಪಳದ ಲೋಕಾಯುಕ್ತ ಕಚೇರಿಗೆ ತೆರಳಿ ಈ ಇಬ್ಬರು ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಿದ್ದಾರೆ.
2019 ರಿಂದ 2025 ರ ವರೆಗಿನ ಕೊಪ್ಪಳ ಜಿಲ್ಲೆಯಲ್ಲಿ ವಿವಿದ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯೋ ನೀರು ಸೇರಿ 96 ಕಾಮಗಾರಿಗಳನ್ನ ಮಾಡಿರೋದಾಗಿ ಕೊಟ್ಟಿ ಬಿಲ್ ಪಾವತಿ ಮಾಡುವ ಮೂಲಕ 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ, ಎಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು, ಸದ್ರ ಹಣ ದುರ್ಬಳಕೆ ಹಿನ್ನೆಲೆ ಕೆಆರ್‌ಐಡಿಎಲ್ ಎಂ ಡಿ ಬಸವರಾಜ ನಿರ್ದೇಶನದಂತೆ ದೂರು ಸಲ್ಲಿಸಿದ್ದು, ಲೋಕಾಯುಕ್ತ ಪೊಲೀಸರು 13 ಅಂಶಗಳ ಒಳಗೊಂಡ ಕಾಮಗಾರಿ ಟೆಂಡರ್ ಮೊತ್ತ ಟೆಂಡರ್ ದಿನಾಂಕ, ಪೂರ್ಣಗೊಂದ ಕಾಮಗಾರಿ ಅರ್ಧ ಮುಗಿಸಿರುವ ಕಾಮಗಾರಿ ಜೊತೆಗೆ ಬಿಲ್ ಪಾವತಿಯಾಗಿರುವ ಮಾಹಿತಿ ಹಾಗೂ ಬಾಕಿ ಇರುವ ಎಲ್ಲ ಎಲ್ಲ ದಾಖಲೆಗಳನ್ನ ಲೋಕಾಯುಕ್ತಕ್ಕೆ ನೀಡಿದ್ದಾರೆ.
ಇದನ್ನೂ ಓದಿ: ಚಿತ್ತಾಪುರದಲ್ಲಿ ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ಈ ಝಡ್ ಎಂ ಚಿಂಚೋಳಿಕರ್ ಅಧಿಕಾರಾವಧಿಯಲ್ಲಿ 72 ಕೋಟಿ ರೂ. ಸರ್ಕಾರಿ ಹಣ ದುರ್ಬಳೆ ಆಗಿದೆ. ಇದೆ ವಿಚಾರಕ್ಕೆ ಸರ್ಕಾರಕ್ಕೆ ಇವರನ್ನ ಸಸ್ಪೆಂಡ್ ಸಹ ಮಾಡಲಾಗಿತ್ತು. ಆದ್ರೆ ಅದೆ ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಯನ್ನ ಸದ್ಯ ದಾವಣಗೆರೆ ವಿಭಾಗ 2 ರಲ್ಲಿ ನಿಯೋಜನೆ ಮಾಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಿ, ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿರೋ ವ್ಯಕ್ತಿಗೆ ಮತ್ತೆ ಆಡಳಿತಾತ್ಮಕ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.



