ಜಯತೀರ್ಥರ ಆರಾಧನಾ ವಿಚಾರಕ್ಕೆ ಅರ್ಚಕರ ನಡುವೆ ವಾಗ್ವಾದ, ವಿಡಿಯೋ ವೈರಲ್

ಕಳೆದ ಗುರುವಾರ ಜಯತೀರ್ಥರ ಆರಾಧನೆ ಹಿನ್ನೆಲೆಯಲ್ಲಿ ಅರ್ಚಕರಿಂದ ಪೂಜೆ ನಡೆಯುತ್ತಿತ್ತು. ಈ ವೇಳೆ ರಾಯರ ಮಠದ ಅರ್ಚಕರು ಪೂಜೆ ಮಾಡಲು ಉತ್ತರಾಧಿ ಮಠದ ಅರ್ಚಕರಿಂದ ವಿರೋಧ ವ್ಯಕ್ತವಾಗಿದೆ.

ಜಯತೀರ್ಥರ ಆರಾಧನಾ ವಿಚಾರಕ್ಕೆ ಅರ್ಚಕರ ನಡುವೆ ವಾಗ್ವಾದ, ವಿಡಿಯೋ ವೈರಲ್
ಜಯತೀರ್ಥರ ಆರಾಧನಾ ವಿಚಾರಕ್ಕೆ ಅರ್ಚಕರ ನಡುವೆ ವಾಗ್ವಾದ
Edited By:

Updated on: Aug 01, 2021 | 9:00 AM

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ನವವೃಂದಾವನ ಗಡ್ಡೆಯಲ್ಲಿ ಅರ್ಚಕರ ನಡುವೆ ವಾಗ್ವಾದ ನಡೆದಿದೆ. ಜಯತೀರ್ಥರ ಆರಾಧನಾ ವಿಚಾರವಾಗಿ ರಾಯರ ಮಠ, ಉತ್ತರಾಧಿ ಮಠದ ಅರ್ಚಕರು ವಾಗ್ವಾದ ನಡೆಸಿದ್ದಾರೆ.

ಕಳೆದ ಗುರುವಾರ ಜಯತೀರ್ಥರ ಆರಾಧನೆ ಹಿನ್ನೆಲೆಯಲ್ಲಿ ಅರ್ಚಕರಿಂದ ಪೂಜೆ ನಡೆಯುತ್ತಿತ್ತು. ಈ ವೇಳೆ ರಾಯರ ಮಠದ ಅರ್ಚಕರು ಪೂಜೆ ಮಾಡಲು ಉತ್ತರಾಧಿ ಮಠದ ಅರ್ಚಕರಿಂದ ವಿರೋಧ ವ್ಯಕ್ತವಾಗಿದೆ. ನೀವು ಜಯತೀರ್ಥರ ಬೃಂದಾವನಕ್ಕೆ ಪೂಜೆ ಮಾಡುತ್ತಿಲ್ಲ. ಜಯತೀರ್ಥರ ಬೃಂದಾವನ ಮಳಖೇಡದಲ್ಲಿದೆ. ಅಲ್ಲಿಗೆ ಹೋಗಿ ಪೂಜೆ ಮಾಡಿ ಎಂದು ಉತ್ತರಾಧಿ ಮಠದ ಅರ್ಚಕರು ಗಲಾಟೆ ಮಾಡಿದ್ದಾರೆ. ಇದಕ್ಕೆ ರಾಯರ ಮಠದ ಭಕ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಮಳಖೇಡದಲ್ಲಿರುವುದು ಮೂಲ ಬೃಂದಾವನ ಅಲ್ಲ. ಇಲ್ಲಿ ಇರುವುದೇ ಮೂಲ ಬೃಂದಾವನ ಎಂದು ಅರ್ಚಕರು ತಿರುಗೇಟು ನೀಡಿದ್ದಾರೆ. ಇದೇ ವಿಚಾರವಾಗಿ ಅರ್ಚಕರ ಮಧ್ಯೆ ಪರಸ್ಪರ ವಾಗ್ವಾದ ಶುರುವಾಗಿದೆ.

ಗುರುವಾರ ಜಯತೀರ್ಥರ ಆರಾಧನೆ ಹಿನ್ನೆಲೆಯಲ್ಲಿ ಇಬ್ಬರು ಅರ್ಚಕರ ನಡುವೆ ನಡೆದ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದೆ.

ಜಯತೀರ್ಥರ ಆರಾಧನಾ ವಿಚಾರಕ್ಕೆ ಅರ್ಚಕರ ನಡುವೆ ವಾಗ್ವಾದ

ಇದನ್ನೂ ಓದಿ:  ದಾವಣಗೆರೆ: ಅಜ್ಜಿ ಹಬ್ಬದ ವಿಶೇಷತೆ ಏನು? ಮಳೆಗಾಲದಲ್ಲಿಯೇ ಈ ಹಬ್ಬ ಆಚರಿಸಲು ಅನೇಕ ಕಾರಣಗಳಿವೆ