Bus Strike: ಸಾರಿಗೆ ನೌಕರರ ವಿರುದ್ಧ ಫಿಟ್ನೆಸ್ ಪರೀಕ್ಷೆ ಅಸ್ತ್ರ: ಇಂದು ಸರ್ಟಿಫಿಕೇಟ್ ನೀಡದೇ ಇದ್ರೆ ಗೇಟ್ಪಾಸ್
KSRTC BMTC Employees Protest: 55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸಲು ಬಿಎಂಟಿಸಿ ಸೂಚನೆ ನೀಡಿದ್ದು, ಸರ್ಟಿಫಿಕೇಟ್ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಇಂದು ಸರ್ಟಿಫಿಕೇಟ್ ನೀಡಲು ವಿಫಲವಾದ್ರೆ ಗೇಟ್ಪಾಸ್ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಅಂತ್ಯ ಕಾಣದೇ ಇರುವ ಹಿನ್ನೆಲೆ ಸರ್ಕಾರ ಅವರ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. 55 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿಗೆ ಫಿಟ್ನೆಸ್ ಸರ್ಟಿಫಿಕೇಟ್ ಸಲ್ಲಿಸಲು ಬಿಎಂಟಿಸಿ ಸೂಚನೆ ನೀಡಿದ್ದು, ಸರ್ಟಿಫಿಕೇಟ್ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಇಂದು ಸರ್ಟಿಫಿಕೇಟ್ ನೀಡಲು ವಿಫಲವಾದ್ರೆ ಗೇಟ್ಪಾಸ್ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಆ ಮೂಲಕ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ಸಜ್ಜಾಗಿದೆ.
ಇನ್ನೊಂದೆಡೆ, ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಪಟ್ಟು ಹಿಡಿದಿರುವ ಸಾರಿಗೆ ನೌಕರರು ಇಂದು ತಟ್ಟೆ, ಲೋಟ ಬಡಿಯುವ ಚಳವಳಿ ನಡೆಸುವುದಾಗಿ ತಿಳಿಸಿದ್ದಾರೆ. ರಾಜ್ಯಾದ್ಯಂತ ಬೆಳಗ್ಗೆ 11 ಗಂಟೆಯಿಂದ ಚಳವಳಿ ನಡೆಯಲಿದ್ದು, ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗಳ ಎದುರು ಚಳವಳಿ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೇ ಇಂದು ಮಧ್ಯಾಹ್ನ 3ಗಂಟೆಗೆ ರಾಜ್ಯ ಮಟ್ಟದ ಸಾರಿಗೆ ಮುಖಂಡರ ಸಭೆ ಕರೆಯಲಾಗಿದ್ದು ಮುಂದಿನ ನಡೆಗಳ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ.
ಈ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಚಳವಳಿ ಯಶಸ್ವಿಯಾಗಿ ನಡೆಯಲಿದೆ. ಸಂಬಳ ತಡೆಹಿಡಿದಿರುವುದು ನೌಕರರಿಗೆ ಗೊತ್ತಿದೆ. ಆದರೂ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇದೀಗ ತಟ್ಟೆ ಲೋಟ ಬಡಿಯುವುದರ ಮೂಲಕ ವಿಭಿನ್ನ ಚಳುವಳಿ ನಡೆಸುತ್ತೇವೆ. ನೌಕರರಿಗೆ 6ನೇ ವೇತನ ಘೋಷಣೆ ಮಾಡಲು ಒತ್ತಾಯ ಮಾಡುತ್ತೇವೆ. ಸರ್ಕಾರ ಮುಷ್ಕರ ದಮನ ಮಾಡಲು ಮುಂದಾಗಿದೆ. ಕೆಲ ಸಂಘಟನೆಗಳ ಮೂಲಕ ಕೆಲ ಬಸ್ ಗಳು ಓಡಾಡುತ್ತಿವೆ. ಒಂದೆರಡು ಬಸ್ ಓಡಾಡಬಹುದು. ಒಂದೆರಡು ನೌಕರರು ಕರ್ತವ್ಯಕ್ಕೆ ಹಾಜರಾಗಿರಬಹುದು ಆದ್ರೆ ಮುಷ್ಕರ ನಿಂತಿಲ್ಲ. ರಾಜ್ಯಾದ್ಯಂತ ಮುಷ್ಕರ, ಪ್ರತಿಭಟನೆ ನಡೆಯುತ್ತೆ ಎಂದು ತಿಳಿಸಿದ್ದರು.
ಎರಡನೇ ದಿನದ ಕೊವಿಡ್ ಕರ್ಫ್ಯೂ ಅಂತ್ಯ ರಾಜ್ಯದ ಕೆಲ ನಗರಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಕೊವಿಡ್ ಕರ್ಫ್ಯೂವಿನ ಎರಡನೇ ದಿನ ಅಂತ್ಯವಾಗಿದೆ. ರಾತ್ರಿ 10 ಗಂಟೆಯಿಂದ ರಸ್ತೆಗಳಿಗೆ ಬ್ಯಾರಿಕೇಡ್ ಅಡ್ಡವಿಟ್ಟು ಸಂಚಾರ ನಿರ್ಬಂಧಿಸಿದ್ದ ಪೊಲೀಸರು ಮುಂಜಾನೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಬ್ಯಾರಿಕೇಡ್ ತೆರವುಗೊಳಿಸಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರನ್ನು ಎದುರು ಹಾಕಿಕೊಂಡವರು ಈವರೆಗೂ ಉಳಿದಿಲ್ಲ: ಐಎನ್ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ
ಸಾರಿಗೆ ನೌಕರರ ಮುಷ್ಕರ ನಿಲ್ಲಿಸದಿದ್ದರೆ ‘ಅಂತರ್ ನಿಗಮ ವರ್ಗಾವಣೆ’ ಪರಿಗಣಿಸದಿರಲು ತೀರ್ಮಾನ!