Bus Strike: ಸರ್ಕಾರಿ ಬಸ್​ ಸಂಚಾರಕ್ಕೆ ಖಾಸಗಿ ಮಾಲೀಕರಿಂದ ವಿರೋಧ; ಕೋಲು ಕೊಟ್ಟು ಪೆಟ್ಟು ತಿಂದಂತಾದ ಅಧಿಕಾರಿಗಳು

KSRTC BMTC Workers Strike: ಮೈಸೂರಿನಲ್ಲಿ ಅರ್ಧಗಂಟೆಗೊಂದರಂತೆ ಸರ್ಕಾರಿ ಬಸ್​ ವ್ಯವಸ್ಥೆ ಮಾಡಿದ್ದು, ಕೆಲ ಸಿಬ್ಬಂದಿ ಮೂಲಕ ಬಸ್​ ಚಲಾಯಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಕೆಎಸ್​ಆರ್​ಟಿಸಿ ಬಸ್​ ಚಾಲನೆ ಆರಂಭವಾಗುತ್ತಿದ್ದಂತೆಯೇ ಖಾಸಗಿ ಬಸ್​ ಮಾಲೀಕರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಬಸ್​ ಓಡಿಸೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

Bus Strike: ಸರ್ಕಾರಿ ಬಸ್​ ಸಂಚಾರಕ್ಕೆ ಖಾಸಗಿ ಮಾಲೀಕರಿಂದ ವಿರೋಧ; ಕೋಲು ಕೊಟ್ಟು ಪೆಟ್ಟು ತಿಂದಂತಾದ ಅಧಿಕಾರಿಗಳು
ಕೆಎಸ್​ಆರ್​ಟಿಸಿ
Follow us
Skanda
| Updated By: ಆಯೇಷಾ ಬಾನು

Updated on: Apr 10, 2021 | 8:19 AM

ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ಹೂಡಿರುವ ಸಾರಿಗೆ ನೌಕರರು ಪಟ್ಟು ಸಡಿಲಿಸಲು ಒಪ್ಪದ ಕಾರಣ ನಾಲ್ಕನೇ ದಿನವೂ ರಾಜ್ಯದಲ್ಲಿ ಸರ್ಕಾರಿ ಬಸ್​ಗಳು ರಸ್ತೆಗಿಳಿದಿಲ್ಲ. ಕೆಲವೆಡೆ ತರಬೇತಿ ನಿರತ ಸಿಬ್ಬಂದಿ ಮೂಲಕ ಬಸ್​ ಚಲಾಯಿಸಲಾಗುತ್ತಿದೆಯಾದರೂ ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ಅದು ಸಾಧ್ಯವಾಗಿದೆ. ಹೀಗಾಗಿ ಸಾರಿಗೆ ನಿಗಮದ ಅಧಿಕಾರಿಗಳು ಖಾಸಗಿ ಬಸ್​ಗಳನ್ನೇ ಮುಂದಿಟ್ಟುಕೊಂಡು ಸಂಚಾರ ವ್ಯವಸ್ಥೆ ನಿರ್ವಹಿಸುತ್ತಿದ್ದಾರೆ. ಆದರೆ, ಇದೇ ಅವರಿಗೆ ಮುಳುವಾಗಿದ್ದು ಕೆಲವೆಡೆ ಸರ್ಕಾರಿ ಬಸ್​ ಬಿಡೋಣವೆಂದರೂ ಖಾಸಗಿ ಬಸ್ ಮಾಲೀಕರು ತಕರಾರು ತೆಗೆಯುತ್ತಿದ್ದಾರೆ. ಇದರಿಂದಾಗಿ ಸಾರಿಗೆ ನೌಕರರ ಮುಷ್ಕರದ ಸಂಕಷ್ಟ ಅನುಭವಿಸುತ್ತಿರುವ ಅಧಿಕಾರಿಗಳಿಗೆ ಈಗ ಖಾಸಗಿ ಬಸ್​ ಮಾಲೀಕರ ಮನವೊಲಿಸುವ ಅನಿವಾರ್ಯತೆಯೂ ಎದುರಾಗಿದ್ದು ಅವರ ಪರಿಸ್ಥಿತಿ ಕೋಲು ಕೊಟ್ಟು ಪೆಟ್ಟು ತಿಂದಂತಾಗಿದೆ.

ಮೈಸೂರಿನಲ್ಲಿ ಅರ್ಧಗಂಟೆಗೊಂದರಂತೆ ಸರ್ಕಾರಿ ಬಸ್​ ವ್ಯವಸ್ಥೆ ಮಾಡಿದ್ದು, ಕೆಲ ಸಿಬ್ಬಂದಿ ಮೂಲಕ ಬಸ್​ ಚಲಾಯಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಕೆಎಸ್​ಆರ್​ಟಿಸಿ ಬಸ್​ ಚಾಲನೆ ಆರಂಭವಾಗುತ್ತಿದ್ದಂತೆಯೇ ಖಾಸಗಿ ಬಸ್​ ಮಾಲೀಕರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಬಸ್​ ಓಡಿಸೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ನಂತರ ಪೊಲೀಸರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ಬಗೆಹರಿಸುವ ಪ್ರಯತ್ನ ಮಾಡಿದ್ದು, ಸಾರಿಗೆ ಅಧಿಕಾರಿಗಳು ಅರ್ಧ ಗಂಟೆಗೊಂದರಂತೆ ಬಸ್​ ಬಿಡುವುದಿಲ್ಲ, ನಾವು ಬಸ್ ತರಿಸಲ್ಲ ಎಂದು ಖಾಸಗಿ ಬಸ್​ ಮಾಲೀಕರಿಗೆ ಮಾತು ಕೊಡಬೇಕಾದ ಅನಿವಾರ್ಯತೆ ಎದುರಾಯಿತು. ಅಧಿಕಾರಿಗಳು ಭರವಸೆ ಕೊಟ್ಟ ನಂತರವಷ್ಟೇ ಖಾಸಗಿ ಬಸ್​ಗಳು ಮತ್ತೆ ಸಂಚಾರ ಆರಂಭಿಸಿವೆ.

ಈ ಮಧ್ಯೆ, ಸರ್ಕಾರ ಹಾಗೂ ಸಾರಿಗೆ ಅಧಿಕಾರಿಗಳ ಯಾವ ಆದೇಶಕ್ಕೂ ಜಗ್ಗದ ನೌಕರರು ಕರ್ತವ್ಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ನಾಲ್ಕು ನಿಗಮಗಳ ನೌಕರರೂ ಕರ್ತವ್ಯಕ್ಕೆ ಹಾಜರಾಗದೇ ದೂರ ಉಳಿದಿದ್ದು ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಮುಖಂಡರು ತಯಾರಿಯಲ್ಲಿ ತೊಡಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಸಾರಿಗೆ ಮುಖಂಡರು ಹಾಗೂ ನೌಕರರು ಸಭೆ ನಡೆಸಲಿದ್ದು, ಯಾವ ರೀತಿ ಮುಷ್ಕರವನ್ನು ಮುಂದುವರೆಸಬೇಕೆಂದು ತೀರ್ಮಾನಿಸಲಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲಿಸಿದವರಿಗೆ ಸರ್ಕಾರದಿಂದ ನೋಟಿಸ್​ 

ಸಾರಿಗೆ ನಿಗಮ ನೌಕರರ ಮುಷ್ಕರ, ಕೆಎಸ್​ಆರ್​ಟಿಸಿಗೆ ಮೂರು ದಿನಗಳಲ್ಲಿ ರೂ. 51 ಕೋಟಿ ನಷ್ಟ!

(KSRTC BMTC Workers Strike: Private Bus owners opposes to operate KSRTC bus in Mysuru)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ