Shakti scheme: ಕೆಎಸ್​ಆರ್​ಟಿಸಿಗೆ ಬಂತು ‘ಶಕ್ತಿ’, ದಾಖಲೆಯ 3,930 ಕೋಟಿ ರೂ. ಆದಾಯ

Free Bus Travel for Women; 2023-24ನೇ ಸಾಲಿನಲ್ಲಿ ಕೆಎಸ್​ಆರ್​ಟಿಸಿ ದಾಖಲೆಯ ಆದಾಯ ಸಂಗ್ರಹ ಮಾಡಿದೆ. ಇದಕ್ಕೆ ಶಕ್ತಿ ಯೋಜನೆ ನೇರ ಸಹಾಯ ಮಾಡಿದ್ದಕ್ಕಿಂತಲೂ ಪರೋಕ್ಷವಾಗಿ ನೆರವಾಗಿದ್ದೇ ಹೆಚ್ಚು ಎಂದಿದ್ದಾರೆ ಅಧಿಕಾರಿಗಳು. ಹಾಗಾದರೆ, ಅದ್ಹೇಗೆ ಕೆಎಸ್​ಆರ್​ಟಿಸಿ ಆದಾಯ ಹೆಚ್ಚಳಕ್ಕೆ ಶಕ್ತಿ ಯೋಜನೆ ಪರೋಕ್ಷವಾಗಿ ನೆರವಾಯಿತು? ವಿವರಗಳಿಗೆ ಮುಂದೆ ಓದಿ.

Shakti scheme: ಕೆಎಸ್​ಆರ್​ಟಿಸಿಗೆ ಬಂತು ‘ಶಕ್ತಿ’, ದಾಖಲೆಯ 3,930 ಕೋಟಿ ರೂ. ಆದಾಯ
ಕೆಎಸ್​ಆರ್​ಟಿಸಿಗೆ ಬಂತು ‘ಶಕ್ತಿ’: ದಾಖಲೆಯ 3,930 ಕೋಟಿ ರೂ. ಆದಾಯ
Follow us
|

Updated on: Jun 10, 2024 | 2:41 PM

ಬೆಂಗಳೂರು, ಜೂನ್ 10: ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Government) ಜಾರಿಗೊಳಿಸಿರುವ, ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Travel for Women) ಕಲ್ಪಿಸುವ ‘ಶಕ್ತಿ’ (Shakti Scheme) ಯೋಜನೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆದಾಯ ದಾಖಲೆ ಪ್ರಮಾಣದಲ್ಲಿ ಹೆಚ್ಚಳಕ್ಕೆ ನೇರ ಹಾಗೂ ಪರೋಕ್ಷವಾಗಿ ನೆರವಾಗಿರುವುದು ತಿಳಿದುಬಂದಿದೆ. ಯೋಜನೆಯ ಪರಿಣಾಮವಾಗಿ 2023-24ನೇ ಸಾಲಿನಲ್ಲಿ 3,930 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿದೆ.

ಕೆಎಸ್‌ಆರ್‌ಟಿಸಿಯ ಒಟ್ಟು ಸಂಚಾರ ಆದಾಯ 2016 ರಲ್ಲಿ 2,738 ಕೋಟಿ ರೂ., 2017 ರಲ್ಲಿ 2,975 ಕೋಟಿ ರೂ., 2018 ರಲ್ಲಿ 3,131 ಕೋಟಿ ರೂ., 2019 ರಲ್ಲಿ 3,182 ಕೋಟಿ ರೂ., 2020ರಲ್ಲಿ 1,569 ಕೋಟಿ ರೂ (ಕೋವಿಡ್​​ನಿಂದಾಗಿ ಕಡಿಮೆ ಆದಾಯ), 2021 ರಲ್ಲಿ 2,037 ಕೋಟಿ ರೂ ಮತ್ತು 2022 ರಲ್ಲಿ ರೂ 3,349 ಕೋಟಿ ಆಗಿತ್ತು. ಶಕ್ತಿ ಯೋಜನೆಯ ಅನುಷ್ಠಾನದ ನಂತರ, 2023-24ನೇ ಸಾಲಿನ ಆದಾಯ ರೂ 3,930 ಕೋಟಿ ಆಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ.“

ಶಕ್ತಿ ಯೋಜನೆ ಪರೋಕ್ಷ ಕಾರಣವಾಗಿದ್ದು ಹೇಗೆ?

2023ರ ಜೂನ್‌ನಿಂದ 2024ರ ಮೇ ವರೆಗೆ ಒಟ್ಟು 4,809 ಕೋಟಿ ರೂ.ಗಳ ಸಂಚಾರ ಆದಾಯ ಸಂಗ್ರಹವಾಗಿದೆ. ಶಕ್ತಿ ಯೋಜನೆಯೇತರ ಪ್ರಯಾಣಿಕರ ಹೆಚ್ಚಳವೇ ಇದಕ್ಕೆ ಕಾರಣ ಎಂದು ಅವರು ತಿಳಿಸಿದರು.

ಶಕ್ತಿ ಆದಾಯ ಶೇ 42.5 (2,044 ಕೋಟಿ ರೂ.) ಇದ್ದರೆ, ಶಕ್ತಿಯೇತರ ಆದಾಯ ಶೇ 57.5 (ರೂ. 2,764 ಕೋಟಿ) ಇತ್ತು. ಆದರೆ, ಮಹಿಳಾ ಪ್ರಯಾಣಿಕರು ನಮ್ಮ ಸೇವೆಯನ್ನು ಬಳಸಿದಾಗ, ಅವರು ಎಲ್ಲಾ ಸಮಯದಲ್ಲೂ ಒಬ್ಬಂಟಿಯಾಗಿ ಪ್ರಯಾಣಿಸಿರುವುದಿಲ್ಲ. ಪತಿ ಅಥವಾ ಮಕ್ಕಳೊಂದಿಗೆ ಪ್ರಯಾಣಿಸಿದ್ದಾರೆ. ಇದರಿಂದ ಶಕ್ತಿಯೇತರ ಆದಾಯ ಹೆಚ್ಚಳವಾಯಿತು ಎಂದು ಅವರು ಮಾಹಿತಿ ನೀಡಿರುವುದಾಗಿ ‘ದಿ ನ್ಯೂ ಇಂಡಿಯನ್​ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ಈ ಹಿಂದೆ, ನಮ್ಮ ದೈನಂದಿನ ಆದಾಯವು ಸುಮಾರು 9.7 ಕೋಟಿ ರೂಪಾಯಿಗಳಷ್ಟಿತ್ತು. ಅದು ಈಗ 13.9 ಕೋಟಿ ರೂಪಾಯಿಗಳಿಗೆ ಜಿಗಿದಿದೆ. ಇದಲ್ಲದೆ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರದಂತಹ ವಾರದ ಮಧ್ಯದ ದಿನಗಳಲ್ಲಿ ಆದಾಯ ಕಡಿಮೆ ಇತ್ತು. ಆದರೆ ಶಕ್ತಿ ಯೋಜನೆಯ ಅನುಷ್ಠಾನದ ನಂತರ, ಆ ದಿನಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಎಲ್ಲ ಅಂಶಗಳೂ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Shakti Yojana: ಶಕ್ತಿ ಯೋಜನೆಯಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ, ಜಿಎಸ್​ಟಿ ಸಂಗ್ರಹ ಹೆಚ್ಚಳ

ಡೀಸೆಲ್ ಬೆಲೆ ಲೀಟರ್‌ಗೆ 90 ರೂ.ಗೆ ಏರಿಕೆಯಾಗಿದ್ದರೂ ಯಾವುದೇ ದರ ಏರಿಕೆ ಮಾಡದೆ ಕೆಎಸ್‌ಆರ್‌ಟಿಸಿ ಈ ದಾಖಲೆ ನಿರ್ಮಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಸೋಲಿಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ ಡಿಕೆ ಸುರೇಶ್
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಹಣವನ್ನು ಗಾಳಿಯಲ್ಲಿ ತೂರಿ ಹುಟ್ಟುಹಬ್ಬ ಆಚರಿಸಿಕೊಂಡ ಹುಬ್ಬಳ್ಳಿಯ ಯುವಕ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?