ಸಾಧುಗಳೆಂದು ನಂಬಿಸಿ ಹಣ, ಮೊಬೈಲ್ ಕದೀತಿದ್ದ ನಾಲ್ವರು ಸೆರೆ
ಕೊಡಗು: ಸಾಧುಗಳೆಂದು ನಂಬಿಸಿ ಹಣ, ಮೊಬೈಲ್ ಕದೀತಿದ್ದವರನ್ನು ಶ್ರವಣಬೆಳಗೊಳ ಬಳಿ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಾಗನಾಥ್(40), ಜಜೂರ್ ನಾಥ್(25), ಸುರಬ್ ನಾಥ್ (45), ಉಮೇಶ್ ನಾಥ್(25) ಬಂಧಿತ ಆರೋಪಿಗಳು. ಇವರು ರಾಸಾಯನಿಕ ಪುಡಿ ನೀಡಿ ಅಘೋರಿಗಳು ಎಂದು ಯಾಮಾರಿಸುತ್ತಿದ್ದವರು. ಒಮ್ಮೆ ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಎಂಬುವವರನ್ನು ಯಾಮಾರಿಸಿದ್ದರು. ಸದ್ಯ ಬಂಧಿತ ನಾಲ್ವರು ನಕಲಿ ಸ್ವಾಮಿಗಳಿಂದ ರಾಜಸ್ಥಾನದಿಂದ ತಂದಿದ್ದ ಬಾಡಿಗೆ ಕಾರು, ವಿವಿಧ ರಾಸಾಯನಿಕ ಪುಡಿಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ರಾಸಾಯನಿಕ ಪುಡಿಯನ್ನು […]

ಕೊಡಗು: ಸಾಧುಗಳೆಂದು ನಂಬಿಸಿ ಹಣ, ಮೊಬೈಲ್ ಕದೀತಿದ್ದವರನ್ನು ಶ್ರವಣಬೆಳಗೊಳ ಬಳಿ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ನಾಗನಾಥ್(40), ಜಜೂರ್ ನಾಥ್(25), ಸುರಬ್ ನಾಥ್ (45), ಉಮೇಶ್ ನಾಥ್(25) ಬಂಧಿತ ಆರೋಪಿಗಳು.
ಇವರು ರಾಸಾಯನಿಕ ಪುಡಿ ನೀಡಿ ಅಘೋರಿಗಳು ಎಂದು ಯಾಮಾರಿಸುತ್ತಿದ್ದವರು. ಒಮ್ಮೆ ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಎಂಬುವವರನ್ನು ಯಾಮಾರಿಸಿದ್ದರು. ಸದ್ಯ ಬಂಧಿತ ನಾಲ್ವರು ನಕಲಿ ಸ್ವಾಮಿಗಳಿಂದ ರಾಜಸ್ಥಾನದಿಂದ ತಂದಿದ್ದ ಬಾಡಿಗೆ ಕಾರು, ವಿವಿಧ ರಾಸಾಯನಿಕ ಪುಡಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ರಾಸಾಯನಿಕ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕಳೆದ ತಿಂಗಳು ನವೆಂಬರ್ 24 ದಂದು ಕುಶಾಲನಗದಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧಿಸಿ ಹಾಸನದ ಶ್ರವಣ ಬೆಳಗೊಳದಲ್ಲಿ ಪೊಲೀಸರು ಈ ನಕಲಿ ಸ್ವಾಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಣ ಮಾಡಲು ಖಾವಿ ಧರಿಸಿದ್ದ ಅಸಾಮಿಗಳು ಈಗ ಜೈಲು ಸೇರಿದ್ದಾರೆ. ಕುಶಾಲನಗರ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.




