ಬೆಂಗಳೂರು, ಮಾರ್ಚ್ 16: ಐಪಿಎಲ್ (IPL) ಪಂದ್ಯ ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರವಾಗುವ ಹಿನ್ನೆಲೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯದ್ವಾರ ಬಳಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಒಂದು ವೇಳೆ ಐಪಿಲ್ ನಡೆಸದೆ ಹೋದರೆ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಲ್ಲಿ ನೀರಿನ ಅಭಾವ ಶುರುವಾಗಿದ್ದರಿಂದ ಕ್ರಿಕೆಟ್ ಮ್ಯಾಚ್ ಬೇರೆ ರಾಜ್ಯಕ್ಕೆ ಶಿಫ್ಟ್ ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚಿಂತನೆ ನಡೆಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ IPL ಮ್ಯಾಚ್ ಬೇರೆ ರಾಜ್ಯಕ್ಕೆ ಸ್ಥಳಾಂತರ ಬೇಡ. IPL ಪಂದ್ಯಗಳನ್ನ ಬೆಂಗಳೂರಿನಿಂದ ಸ್ಥಳಾಂತರ ಮಾಡದಂತೆ ಒತ್ತಾಯ ಮಾಡಲಾಗಿದೆ.
ಈ ವೇಳೆ ಮಾತನಾಡಿದ ವಾಟಳ್ ನಾಗರಾಜ್, ನೀರಿಲ್ಲಾ ಅಂತಾ ಹೇಳಿ ಐಪಿಎಲ್ ಪಂದ್ಯ ಬೇರೆ ರಾಜ್ಯದಲ್ಲಿ ನಡೆಸುವುದು ಅಪಮಾನ. ಹೇಳದೆ ಕೇಳದೆ ಕಾವೇರಿ ನೀರು ತಮಿಳುನಾಡಿಗೆ ಕೊಟ್ಟಿದ್ದು ಅಪಮಾನ. ಐಪಿಎಲ್ ನಡೆಯಲೇ ಬೇಕು. ನಮ್ಮ ಮನವಿಗೆ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ತಂತ್ರಾಗಾರಿಕೆ ನಡೆಸಿ ಐಪಿಲ್ ನಡೆಸದೆ ಹೋದರೆ ಕರ್ನಾಟಕ ಬಂದ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು
ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಬಾರದು ಎಂಬ ವಾದ ಇದೆ. ಇದಕ್ಕೂ ನಮಗೂ ಬಾರಿ ನಂಟಿದೆ. ಈ ಹಿಂದೆ ಈ ಮೈದಾನ ಸೆಂಟ್ರಲ್ ಕಾಲೇಜ್ನಲ್ಲಿ ಇತ್ತು. ನನಗೂ ಕ್ರಿಕೆಟ್ ಸಂಸ್ಥೆಗೂ ಬಾರಿ ಸಂಬಂಧ. ಈ ಸ್ಟೇಡಿಯಂ ಹಾಗೂ ಇದರ ಹಿನ್ನೆಲೆ ಬಹಳ. ಇದು ಬಾಂಧವ್ಯ ಜೊತೆ ರಾಜ್ಯದ ಗೌರವ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ದೇವಾಲಯಗಳ ಪ್ರಸಾದದ ಹಿಂದಿದೆ ಇತಿಹಾಸ; ಅದರ ಕಥಾಸಾರ ಸವಿಯುವ ಭಾಗ್ಯ ನಗರವಾಸಿಗಳಿಗೆ ಪ್ರಾಪ್ತಿ
ಬೆಂಗಳೂರಿನಲ್ಲಿ ಯಾವ ಏರಿಯಾಗೆ ಹೋದ್ರೂ, ಯಾವ ವಾರ್ಡ್ಗೆ ಹೋದ್ರೂ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಜನರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ನೀರಿನ ಬವಣೆ ಕಲ್ಯಾಣ ಮಂಟಪಗಳಿಗೂ ತಟ್ಟಿದ್ದು, ಬುಕ್ ಆಗಿರೋ ಮದುವೆ ಮತ್ತು ಸಮಾರಂಭಗಳಿಗೆ ನೀರು ಹೊಂದಿಸೋದೇ ಸವಾಲಾಗಿದೆ. ಹೀಗಾಗಿ, ಹೊಸದಾಗಿ ಬುಕ್ಕಿಂಗ್ ಮಾಡೋದನ್ನ ಕೈ ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:36 pm, Sat, 16 March 24