ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ವಿದೇಶಿ ಕಂಪನಿಗಳಿಗೆ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ: ಲಹರ್ ಸಿಂಗ್

|

Updated on: Jun 22, 2024 | 4:26 PM

ಬಿಜೆಪಿ ರಾಜ್ಯಸಭಾ ಸಸದ್ಯ ಲಹರ್ ಸಿಂಗ್​ ಸಿರೋಯಾ ಟ್ವೀಟ್ ಮಾಡಿದ್ದು, ಕರ್ನಾಟಕ ಸರ್ಕಾರಕ್ಕೆ ತನ್ನ ಆದಾಯದ ಮೂಲವನ್ನು ಹೆಚ್ಚಿಸುವ ಆಲೋಚನೆಗಳು ಇದ್ದರೆ ರಾಜ್ಯದೊಳಗೆ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ದುಬಾರಿ ವಿದೇಶಿ ಕಂಪನಿಗಳ ಅಗತ್ಯವಿರಲಿಲ್ಲ. ಸರ್ಕಾರವು ಉನ್ನತ ಮಟ್ಟದ ಪ್ರಾಮಾಣಿಕ ನಿವೃತ್ತ ಅಧಿಕಾರಿಗಳ ತಂಡವನ್ನು ಒಟ್ಟುಗೂಡಿಸಬಹುದಿತ್ತು ಎಂದು ಹೇಳಿದ್ದಾರೆ.

ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ವಿದೇಶಿ ಕಂಪನಿಗಳಿಗೆ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ: ಲಹರ್ ಸಿಂಗ್
ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ವಿದೇಶಿ ಕಂಪನಿಗಳಿಗೆ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ: ಲಹರ್ ಸಿಂಗ್
Follow us on

ಬೆಂಗಳೂರು, ಜೂನ್ 22: ಆರ್ಥಿಕ ಹೊರೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಸರ್ಕಾರ, ರಾಜ್ಯದ ವರಮಾನ ಹೆಚ್ಚಿಸುವ ಸಲುವಾಗಿ ವಿದೇಶಿ ಕಂಪನಿಗೆ ಮೇಲುಸ್ತುವಾರಿಕೆ ವಹಿಸಿರುವುದು ಈಗಾಗಲೇ ಸಕಾಷ್ಟು  ಚರ್ಚೆಗೆ ಆಗುತ್ತಿದೆ. ಇದು ಬಿಜೆಪಿಗೂ ದೊಡ್ಡ ಅಸ್ತ್ರವಾಗಿದೆ. ಸದ್ಯ ಈ ವಿಚಾರವಾಗಿ ಬಿಜೆಪಿ ರಾಜ್ಯಸಭಾ ಸಸದ್ಯ ಲಹರ್ ಸಿಂಗ್​ ಸಿರೋಯಾ (Lahar Singh Siroya) ಪ್ರತಿಕ್ರಿಯಿಸಿದ್ದು, ಆದಾಯ ಹೆಚ್ಚಳಕ್ಕೆ ಸಲಹೆ ನೀಡಲು ಅನುಭವಿ ನಿವೃತ್ತ ಅಧಿಕಾರಿಗಳಿರುವಾಗ ಬಹುರಾಷ್ಟ್ರೀಯ ಕಂಪನಿಗಳನ್ನು ಕರೆಸಿ ಹಣವನ್ನೇಕೆ ವ್ಯರ್ಥ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಕರ್ನಾಟಕ ಸರ್ಕಾರಕ್ಕೆ ತನ್ನ ಆದಾಯದ ಮೂಲವನ್ನು ಹೆಚ್ಚಿಸುವ ಆಲೋಚನೆಗಳು ಇದ್ದರೆ ರಾಜ್ಯದೊಳಗೆ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ದುಬಾರಿ ವಿದೇಶಿ ಕಂಪನಿಗಳ ಅಗತ್ಯವಿರಲಿಲ್ಲ. ಸರ್ಕಾರವು ಉನ್ನತ ಮಟ್ಟದ ಪ್ರಾಮಾಣಿಕ ನಿವೃತ್ತ ಅಧಿಕಾರಿಗಳ ತಂಡವನ್ನು ಒಟ್ಟುಗೂಡಿಸಬಹುದಿತ್ತು ಎಂದು ಹೇಳಿದ್ದಾರೆ.

ಲಹರ್ ಸಿಂಗ್​ ಸಿರೋಯಾ ಟ್ವೀಟ್ 

ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾಗಿ ಒಬ್ಬರೇ ಅಧಿಕಾರಿ ಇರುವುದು ಹಿತಾಸಕ್ತಿಯ ಸಂಘರ್ಷ. ಆದಾಯ ಹೆಚ್ಚಳಕ್ಕೆ ಸಲಹೆ ಪಡೆಯಲು ಕರ್ನಾಟಕ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗೆ 10 ಕೋಟಿ ರೂ. ನೀಡಲು ಮುಂದಾಗಿದೆ. ಇದರ ಬದಲಾಗಿ, ಅನುಭವಿ ನಿವೃತ್ತ ಅಧಿಕಾರಿಗಳಾದ ಐಎಸ್‌ಎನ್ ಪ್ರಸಾದ್, ಚಿರಂಜೀವಿ ಸಿಂಗ್, ವಿ.ಬಾಲಸುಬ್ರಹ್ಮಣ್ಯಂ, ಸುಧಾಕರ್ ರಾವ್, ಎಂ.ಆರ್.ಶ್ರೀನಿವಾಸಮೂರ್ತಿ ಮೊದಲಾದ ಪರಿಣಿತರ ತಂಡವನ್ನು ನೇಮಿಸಬಹುದಿತ್ತು ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದ ವರಮಾನ ಹೆಚ್ಚಿಸಲು ವಿದೇಶಿ ಕಂಪನಿಗಳಿಂದ ಸಲಹೆ: ಬಿಜೆಪಿಗೆ ಅಸ್ತ್ರವಾದ ಕಾಂಗ್ರೆಸ್​ ನಡೆ

ರಾಜ್ಯದ ಭವಿಷ್ಯದ ದೃಷ್ಟಿಯಿಂದ ಗ್ಯಾರಂಟಿಗಳನ್ನು ರದ್ದುಪಡಿಸಲು ಕಾಂಗ್ರೆಸ್ ಸರ್ಕಾರವು ನಿರ್ಧಾರ ಕೈಗೊಳ್ಳಬೇಕು. ಅಲ್ಲದೆ, ಆರ್ಥಿಕ ಇಲಾಖೆಯ ಕಾರ್ಯದರ್ಶಿ ಎಲ್‌.ಕೆ.ಅತೀಖ್ ಅವರು ಮುಖ್ಯಮಂತ್ರಿಗಳ ಕಚೇರಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಅವರು ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತವಾಗಿರಲು ಸಾಧ್ಯವಾಗುವುದೇ? ಸಹಜವಾಗಿ ಇಲ್ಲಿ ಹಿತಾಸಕ್ತಿಯ ಸಂಘರ್ಷ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯಸ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.