ಮೂವರು ಮಹಿಳಾ ಸಾಧಕರಿಗೆ ಲಾಸ್ಯ ಅಕಾಡೆಮಿಯ ಪ್ರತಿಷ್ಠಿತ ‘ಲಾಸ್ಯ ಸಾಧಕಿ’ ಪ್ರಶಸ್ತಿ ಪ್ರದಾನ

ಲಾಸ್ಯ ಅಕಾಡೆಮಿ ಆ ಡಾನ್ಸ್ ಸಂಸ್ಥೆಯು ತನ್ನ ಈ ವರ್ಷದ ಪ್ರತಿಷ್ಠಿತ 'ಲಾಸ್ಯ ಸಾಧಕಿ' ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಮೂವರು ಮಹಿಳಾ ಸಾಧಕಿಯರಿಗೆ ನೀಡಲಾಗಿದೆ. ರತ್ನಾಕರ್ ರಾವ್, ಪ್ರಮೀಳಾ ದೇವಿ ಮತ್ತು ನಳಿನಾಕ್ಷಿ ರವಿಕುಮಾರ್​ ಅವರಿಗೆ 'ಲಾಸ್ಯ ಸಾಧಕಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮೂವರು ಮಹಿಳಾ ಸಾಧಕರಿಗೆ ಲಾಸ್ಯ ಅಕಾಡೆಮಿಯ ಪ್ರತಿಷ್ಠಿತ 'ಲಾಸ್ಯ ಸಾಧಕಿ' ಪ್ರಶಸ್ತಿ ಪ್ರದಾನ
'ಲಾಸ್ಯ ಸಾಧಕಿ' ಪ್ರಶಸ್ತಿ ಪಡೆದವರು ಮತ್ತು ಇತರರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 29, 2024 | 6:51 PM

ಬೆಂಗಳೂರು, ಮಾರ್ಚ್​ 29: ಲಾಸ್ಯ ಅಕಾಡೆಮಿ (Lasya Academy) ಆ ಡಾನ್ಸ್ ಸಂಸ್ಥೆಯು ತನ್ನ ಈ ವರ್ಷದ ಪ್ರತಿಷ್ಠಿತ ‘ಲಾಸ್ಯ ಸಾಧಕಿ’ ಪ್ರಶಸ್ತಿಯನ್ನು ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದೆ, ಮಂಗಳೂರಿನ ವಿದುಷಿ ಸುಮಂಗಲ ರತ್ನಾಕರ್ ರಾವ್, ಬೆಂಗಳೂರಿನ ಖ್ಯಾತ ಮನೋವೈದ್ಯೆ ಮತ್ತು ವೈದ್ಯ ಕಲಾ ರಂಗದ ಸಂಸ್ಥಾಪಕಿ ಡಾ. ಪ್ರಮೀಳಾ ದೇವಿ, ಓಡಿಸಾ ಮೂಲದ ಖ್ಯಾತ ಒಡಿಸ್ಸಿ ನೃತ್ಯಗಾತಿ ವಿದುಷಿ ಲೀನಾ ಮೊಹಾಂತ್ಯ ಹಾಗೂ ಲೇಪಾಕ್ಷಿಯ ಸಮಾಜ ಸೇವಕಿ, ಲೇಖಕಿ, ಸಂಶೋಧಕಿ ಶ್ರೀಮತಿ ನಳಿನಾಕ್ಷಿ ರವಿಕುಮಾರ್ ಅವರಿಗೆ ನೀಡಲಾಗಿದೆ.

ನೆರೆದಿದ್ದ ಸಭಿಕರೆಲ್ಲರೂ ಸಾಧಕಿಯರ ಯಶೋಗಾಥೆಗಳನ್ನು ಕೇಳಿ ಅತ್ಯಂತ ಸ್ಪೂರ್ತಿ ಪಡೆದರು. ಈ ಸಂದರ್ಭದಲ್ಲಿ ವಿದುಷಿ ಲೀನಾ ಮೊಹಾಂತಿ ಅವರು ಶಾಸ್ತ್ರೀಯ ಒಡಿಸ್ಸಿ ನೃತ್ಯವನ್ನು ಪ್ರಸ್ತುತ ಪಡಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಜಾಗಾ ಮಹೇಶ್ವರ ಎಂದು ತನ್ನೊಳಗೆ ಅಡಕವಾಗಿರುವ ಶಿವನಿಗೆ ಸುಪ್ರಭಾತ ಕೋರುವುದರಿಂದ ಆರಂಭವಾದ ಅವರ ನೃತ್ಯ, ಶ್ರೀಮದ್ಭಾಗವತದಿಂದ ಕೃಷ್ಣನ ವಿರಹದಲ್ಲಿ ಬೇಯುತ್ತಿರುವ ರಾಧೆ, ದುಂಬಿಯೊಂದನ್ನು ಕೃಷ್ಣನ ದೂತ ಎಂದು ನೆನೆದು ಸಂವಾದ ನಡೆಸುವ ‘ಭ್ರಮರ ಗೀತಾ’ದಲ್ಲಿ ಮುಕ್ತಾಯವಾಯಿತು.

ಇದನ್ನೂ ಓದಿ: World Air Quality report: ಹವಾಮಾನ ಬದಲಾವಣೆಯಿಂದ ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ

ಬಳಿಕ ಯಕ್ಷಗಾನದಲ್ಲಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಯವರ ‘ಜಾಮ್ಬಅವತೀ ಕಲ್ಯಾಣ’ ಪ್ರಸಂಗದ ಪ್ರದರ್ಶನ, ವಿದುಷಿ ಸುಮಂಗಲ ರತ್ನಾಕರ್ ಮತ್ತು ಅವರ ಯಕ್ಷಾರಾಧನಾ ತಂಡದಿಂದ. ತುಂಬಿದ್ದ ಸಭೆ ಈ ಪ್ರದರ್ಶನವನ್ನು ಅತ್ಯಾಸಕ್ತಿಯಿಂದ ನೋಡಿ, ಜೋರಾದ ಕರತಾಡನದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಘೋಷಣೆ; ಬೆಂಗಳೂರಿನ ಐವರಿಗೆ ಪ್ರಶಸ್ತಿ

ಗೌರಿ ಅಮ್ಮ ಎಂದೇ ದೂರದರ್ಶನದ ನೋಡುಗರೆಲ್ಲರಿಗೂ ಚಿರಪರಿಚಿತರಾಗಿರುವ ಡಾ. ಗೌರಿ ಸುಬ್ರಮಣ್ಯ ಹಾಗೂ ಹಿರಿಯ ಪತ್ರಕರ್ತೆ ಡಾ. ಆಶಾ ಕೃಷ್ಣಸ್ವಾಮಿ ಅವರು ಸಭೆಯ ಮುಖ್ಯ ಅತಿಥಿಗಳಾಗಿದ್ದರು. ಡಾ. ಕೆ.ಎಸ್. ಚೈತ್ರ ಅವರ ನಿರೂಪಣೆ ಮಾಡಿದ್ದು, ಡಾ. ಲಕ್ಷ್ಮಿ ರೇಖಾ ಅರುಣ್ ಅವರ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಸಂಸ್ಥೆಯ ಕಾರ್ಯಬದ್ಧತೆಗೆ ಸಾಕ್ಷಿಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ