AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಘೋಷಣೆ; ಬೆಂಗಳೂರಿನ ಐವರಿಗೆ ಪ್ರಶಸ್ತಿ

ಪ್ರತಿ ವರ್ಷದಂತೆ 2023-2024ನೇ ಸಾಲಿನ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರಕಟಿಸಿದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿ ಘೋಷಣೆ; ಬೆಂಗಳೂರಿನ ಐವರಿಗೆ ಪ್ರಶಸ್ತಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
Follow us
TV9 Web
| Updated By: ಆಯೇಷಾ ಬಾನು

Updated on:Mar 28, 2024 | 3:02 PM

ಬೆಂಗಳೂರು, ಮಾರ್ಚ್​.28: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡುವ ಕೆಯುಡಬ್ಲ್ಯೂಜೆ (KUWJ) ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ

  • ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ: ಬಿ.ಎಂ.ಬಶೀರ್, ಮಂಗಳೂರು.
  • ಗೊಮ್ಮಟ ಮಾಧ್ಯಮ ಪ್ರಶಸ್ತಿ: ಕುಂತಿನಾಥ ಶ್ರೀ ಕಲಮನಿ, ಬೆಳಗಾವಿ
  • ಡಿವಿಜಿ ಪ್ರಶಸ್ತಿ: ವಿ.ವೆಂಕಟೇಶ್, ಬೆಂಗಳೂರು
  • ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ: ಸಿ.ಜಿ.ಮಂಜುಳ, ಬೆಂಗಳೂರು
  • ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ಮಲ್ಲಿಗೆ ಮಾಚಮ್ಮ, ಮೈಸೂರು.
  • ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಮೋಹನ ಹೆಗಡೆ, ಹುಬ್ಬಳ್ಳಿ
  • ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ: ಸನತ್ ಕುಮಾರ್ ಬೆಳಗಲಿ
  • ಕಿಡಿ ಶೇಷಪ್ಪ ಪ್ರಶಸ್ತಿ: ಬಿ.ಎಂ.ನಂದೀಶ್, ಹಾಸನ.
  • ಎಚ್.ಎಸ್.ದೊರೆಸ್ವಾಮಿ ಪ್ರಶಸ್ತಿ: ಆರ್.ಜಯಕುಮಾರ್, ಬೆಂಗಳೂರು.
  • ಪಿ.ಆರ್.ರಾಮಯ್ಯ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಮೈಸೂರು.
  • ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ: ಅಶೋಕ್ ರಾಮ್, ರಾಮನಗರ.
  • ರಾಜಶೇಖರಕೋಟಿ ಪ್ರಶಸ್ತಿ: ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ
  • ಪಿ.ರಾಮಯ್ಯ ಪ್ರಶಸ್ತಿ: ಮನೋಹರ ಮಲ್ಲಾಡದ, ರಾಣೆಬೆನ್ನೂರು
  • ಮ.ರಾಮಮೂರ್ತಿ ಪ್ರಶಸ್ತಿ: ಎಚ್.ಕೆ.ಬಸವರಾಜು, ಬೆಂಗಳೂರು.
  • ಗರುಡನಗಿರಿ ನಾಗರಾಜ್ ಪ್ರಶಸ್ತಿ: ಪ್ರಭುದೇವ ಶಾಸ್ತ್ರಿಮಠ, ಬೆಂಗಳೂರು
  • ಮಹದೇವ ಪ್ರಕಾಶ್ ಪ್ರಶಸ್ತಿ: ವಿಜಯಕುಮಾರ್ ವಾರದ, ಕಲಬುರಗಿ
  • ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ.
  • ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ: ನಾಮದೇವ ವಾಟ್ಕರ್, ಯಾದಗಿರಿ
  • ಎಂ.ನಾಗೇಂದ್ರರಾವ್ ಪ್ರಶಸ್ತಿ: ರವಿ ಆರ್, ದಾವಣಗೆರೆ
  • ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಕೆ.ಗೋಪಿಕಾ ಮಲ್ಲೇಶ್, ಕೋಲಾರ.
  • ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ: ಆರ್.ಸಿ.ಪುಟ್ಟರಾಜು, ಚಾಮರಾಜನಗರ
  • ವಿಶೇಷ ಪ್ರಶಸ್ತಿ: ಚಿಕ್ಕಪ್ಪನಳ್ಳಿ ಷಣ್ಮುಖ, ಎಸ್.ಬಿ.ರವಿಕುಮಾರ್, ಶ.ಮಂಜುನಾಥ್, ರವಿ ಮಲ್ಲಾಪುರ ಸೇರಿ ಒಟ್ಟು ನಾಲ್ವರಿಗೆ ವಿಶೇಷ ಪ್ರಶಸ್ತಿ ಸಿಕ್ಕಿದೆ.

    ಇದನ್ನೂ ಓದಿ: ಹಿರಿಯ ಪತ್ರಕರ್ತ ಗೋಪಾಲ ವಾಜಪೇಯಿ ಹೆಸರಿನಲ್ಲಿ ‘ರಂಗ ಭೂಪತಿ’ ವಾರ್ಷಿಕ ಪ್ರಶಸ್ತಿ ಪ್ರಕಟ, ನಾಳಿದ್ದು ಧಾರವಾಡದಲ್ಲಿ ಪ್ರದಾನ

    ಅತ್ಯುತ್ತಮ ವರದಿ ಮಾಡಿದ ಮುದ್ರಣ ಹಾಗು ವಿದ್ಯುನ್ಮಾನ ಮಾಧ್ಯಮದ ವರದಿಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲೂ ಅತ್ಯುತ್ತಮ ಗ್ರಾಮಾಂತರ ವರದಿ, ಮಾನವೀಯ ವರದಿ, ಅಪರಾಧ ವರದಿ, ಸ್ಕೂಪ್ ವರದಿ, ಕ್ರೀಡಾ ವರದಿ, ರಾಜಕೀಯ ವಿಮರ್ಶಾತ್ಮಕ ಲೇಖನ, ವಾರ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರ ಲೇಖನ, ಸುದ್ದಿ ಛಾಯಾಚಿತ್ರ, ಅರಣ್ಯ ಕುರಿತ ವರದಿ, ವನ್ಯ ಪ್ರಾಣಿಗಳ ಕುರಿತ ವರದಿ, ಆರ್ಥಿಕ ದುರ್ಬಲ ವರ್ಗದವರ ಕುರಿತ ವರದಿ, ಗ್ರಾಮೀಣ ಜನ ಜೀವನದ ವರದಿ, ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅತ್ಯುತ್ತಮ ಕೃಷಿ ವರದಿ, ವಿಡಂಬನಾತ್ಮಕ ಲೇಖನ, ಪುಟ ವಿನ್ಯಾಸ, ಕೋರ್ಟ್ ವರದಿ, ಸೇನಾ ವರದಿ, ತನಿಖಾ ವರದಿಗಳಿಗೆ ಪ್ರತ್ಯೇಕ ಪ್ರಶಸ್ತಿಗಳಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:32 pm, Thu, 28 March 24

ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದಿಂದ ಯುದ್ಧದ ಭೀತಿ; ಪಾಕಿಸ್ತಾನದಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಎಡೆಬಿಡದೆ ಹೊಗಳಿದ ವಿಶ್ವನಾಥ್
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?