ಮಡಿಕೇರಿ: 32ನೇ ಬಾರಿಗೆ ಮೊದಲಿಗನಾಗಿ ಮತ ಚಲಾಯಿಸಿದ 82ರ ವಿಶೇಷ ಚೇತನ ಮಿಟ್ಟು ಚಂಗಪ್ಪ

ಪ್ರಜಾಪ್ರಭುತ್ವದಲ್ಲಿ ಮತದಾನ ನಮ್ಮ ಹಕ್ಕು. ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮಡಿಕೇರಿಯ 82 ವರ್ಷದ ಹಿರಿಯರಲ್ಲಿರುವ ಮತದಾನದ ಉತ್ಸಾಹ ಈಗಿನ ಪೀಳಿಗೆಗೆ ಮಾದರಿಯಾಗಿದೆ. ಹೌದು ಮಡಿಕೇರಿಯ ವಿಟ್ಟು ಚಂಗಪ್ಪ ಅವರು 32ನೇ ಬಾರಿಗೆ ಮೊದಲು ಮತ ಚಲಾಯಿಸಿದ್ದಾರೆ.

Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 27, 2024 | 6:54 PM

ಕೊಡಗು, ಏಪ್ರಿಲ್​ 26: ಪ್ರತಿ ಸಾರ್ವತ್ರಿಕ ಚುನಾವಣೆಯ ಮತದಾನದ ದಿನ ಒಂದೊಂದು ವಿಶೇಷತೆಗೆ ಸಾಕ್ಷಿಯಾಗುತ್ತದೆ. ಈ ಬಾರಿಯ 2024ರ ಲೋಕಸಭೆ ಚುನವಾಣೆಯ (Lok Sabha Election) ಎರಡನೇ ಹಂತದ ಮತದಾನ ನಡೆಯುತ್ತಿದೆ. ಮಡಿಕೇರಿ (Madikeri) ನಗರದ ವಿಶೇಷ ಚೇತನ ಮಿಟ್ಟು ಚಂಗಪ್ಪ (82 ವರ್ಷ) ಇವರು ಮಡಿಕೇರಿ ನಗರದ ಮತಗಟ್ಟೆ ಸಂಖ್ಯೆ 225 ರಲ್ಲಿ 32ನೇ ಬಾರಿಗೆ ಮತ ಚಲಾಯಿಸಿದ್ದಾರೆ. ವಿಶೇಷ ಅಂದರೆ ಯಾವುದೇ ಚುನಾವಣೆ ಇರಲಿ ಮಿಟ್ಟು ಚಂಗಪ್ಪ ಮೊದಲು ಮತ ಚಲಾಯಿಸಿದ್ದಾರೆ.

1962ರಲ್ಲಿ ಪಂಚಾಯಿತಿ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಈಗ 2024ರವರೆಗೆ ನಡೆದ ಪಂಚಾಯಿತಿ, ನಗರಸಭೆ, ವಿಧಾನಸಭೆ, ಲೋಕಸಭೆಗೆ ಕಳೆದ 60 ವರ್ಷದಲ್ಲಿ ನಡೆದ 30 ಚುನಾವಣೆಯಲ್ಲಿ ಮಿಟ್ಟು ಚಂಗಪ್ಪ ಮೊದಲಿಗರಾಗಿ ಮತ ಹಾಕುತ್ತಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾಗಿರುವ ಮಿಟ್ಟು ಚಂಗಪ್ಪ ಒಮ್ಮೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ವರ್ಷದಿಂದ ದೃಷ್ಟಿ ಹೀನರಾಗಿರುವ 82 ವರ್ಷದ ಮಿಟ್ಟು ಚಂಗಪ್ಪ ಅವರಿಗೆ ಮನೆಯಲ್ಲೆ ಮತದಾನ ಮಾಡುವ ಅವಕಾಶ ಇದ್ದರೂ ಮತಗಟ್ಟೆಯಲ್ಲೆ ಮೊದಲ ಮತದಾನ ಮಾಡಬೇಕು ಎಂಬ ಆಸೆಯಿಂದ ತಮ್ಮ ಪತ್ನಿಯ ಸಹಕಾರದಿಂದ ಮಡಿಕೇರಿ ನಗರದ ಸಂತ ಮೈಕಲರ ಶಾಲಾ ಮತಗಟ್ಟೆಗೆ ಬೆಳಿಗ್ಗೆ 6:45ಕ್ಕೆ ಬಂದು ಮೊದಲ ಮತ ಚಲಾಯಿಸಿದರು. ಇವರ ಈ ಉತ್ಸಾಹ ಯುವ ಮತ್ತು ಮತದಾನ ಮಾಡಲು ನಿರ್ಲಕ್ಷ್ಯವಹಿಸುವ ಮತದಾರರಿಗೆ ಪ್ರೇರಣೆಯಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಲೋಕಸಭೆ ಚುನಾವಣೆಗೆ Rapidoದಿಂದ ಉಚಿತ ಸೇವೆ, ಯಾರಿಗೆಲ್ಲ ಲಭ್ಯ, ಇಲ್ಲಿದೆ ಮಾಹಿತಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:02 pm, Fri, 26 April 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ