ರಾಜ್ಯದ 2ನೇ ಹಂತದ ಮತದಾನ: ಬೆಂಗಳೂರು-ಉತ್ತರ ಕರ್ನಾಟಕದ ಈ ಜಿಲ್ಲೆಗಳಿಗೆ ವಿಶೇಷ ರೈಲು
ಬೇಸಿಗೆ ರಜೆ ಮತ್ತು ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೇ.07 ರಂದು ಮತದಾನ ಹಿನ್ನೆಲೆಯಲ್ಲಿ ರೈಲಿನಲ್ಲಿ ಪ್ರಯಾಣಿಸುವ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಲಯ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಬೆಂಗಳೂರು, ಮೇ 06: ಬೇಸಿಗೆ ರಜೆ ಮತ್ತು ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೇ.07 ರಂದು ಮತದಾನ (Voting) ಹಿನ್ನೆಲೆಯಲ್ಲಿ ರೈಲಿನಲ್ಲಿ ಪ್ರಯಾಣಿಸುವ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಲಯ (South Western Railway Zone) ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು (Train) ಓಡಿಸಲು ನಿರ್ಧರಿಸಿದೆ. ಹಾಗಿದ್ದರೆ ಯಾವ ಯಾವ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು ಬಿಡಲಾಗಿದೆ? ದಿನಾಂಕ, ಸಮಯ ಇಲ್ಲಿದೆ.
ರೈಲು ಪ್ರಯಾಣದ ಮಾಹಿತಿ
- ರೈಲು ಸಂಖ್ಯೆ 06231: ಮೇ 6 ರಂದು ರಾತ್ರಿ 7 ಗಂಟೆಗೆ ಬೆಂಗಳೂರಿನ ಸರ್ಎಂ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಡುವ ರೈಲು ಮೇ 07 ರಂದು ವಿಜಯಪುರಕ್ಕೆ ತಲುಪಲಿದೆ. ಮೇ 7ರ ರಾತ್ರಿ 7 ಗಂಟೆಗೆ ವಿಜಯಪುರ ರೈಲು ನಿಲ್ದಾಣದಿಂದ ಹೊರಡುವ ರೈಲು (ಗಾಡಿ ಸಂಖ್ಯೆ 06232) ಮೇ 8 ರಂದು ಸರ್ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ತಲುಪುತ್ತದೆ.
- ರೈಲು ಸಂಖ್ಯೆ 06227: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಮೇ 06 ರಂದು ರಾತ್ರಿ 11 ಗಂಟೆಗೆ ಹೊರಡುವ ರೈಲು ಮರುದಿನ ಮೇ 07 ರಂದು ಬೀದರ್ಗೆ ತಲುಪಲಿದೆ. ಮೇ 07 ರಂದು ಮಧ್ಯಾಹ್ನ 02:10 ನಿಮಿಷಕ್ಕೆ ಬೀದರ್ ರೈಲು ನಿಲ್ದಾಣದಿಂದ ಹೊರಡುವ ರೈಲು (ಗಾಡಿ ಸಂಖ್ಯೆ 06228) ಮರುದಿನ ಯಶವಂತಪುರ ರೈಲು ನಿಲ್ದಾಣಕ್ಕೆ ತಲುಪಲಿದೆ.
- ರೈಲು ಸಂಖ್ಯೆ 07319: ಮೇ 6 ರಂದು ರಾತ್ರಿ 9 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಹೊರಡುವ ರೈಲು ಮೇ 07 ರಂದು ವಿಜಯನಗರಕ್ಕೆ ತಲುಪಲಿದೆ. ವಿಜಯನಗರ ರೈಲು ನಿಲ್ದಾಣದಿಂದ ಮೇ 7 ರಂದು ಹೊರಡುವ ರೈಲು (ಗಾಡಿ ಸಂಖ್ಯೆ 07320) ಮೇ 8 ರಂದು ಯಶವಂತಪುರ ರೈಲು ನಿಲ್ದಾಣ ತಲುಪುತ್ತದೆ.
- ರೈಲು ಸಂಖ್ಯೆ 07373: ಮೇ 6 ರಂದು ರಾತ್ರಿ 9 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಹೊರಡುವ ರೈಲು ಮೇ 07 ರಂದು ತಾಳಗುಪ್ಪ ತಲುಪಲಿದೆ. ಮೇ 7 ರಂದು ಸಂಜೆ 6 ಗಂಟೆಗೆ ತಾಳಗುಪ್ಪ ರೈಲು ನಿಲ್ದಾಣದಿಂದ ಹೊರಡುವ ರೈಲು (ಗಾಡಿ ಸಂಖ್ಯೆ 07374) ಮೇ 8 ರಂದು ಮೈಸೂರು ರೈಲು ನಿಲ್ದಾಣ ತಲುಪುತ್ತದೆ.
- ರೈಲು ಸಂಖ್ಯೆ 07317: ಮೇ 6 ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಡುವ ಅಂದು ರಾತ್ರಿ 8 ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.
- ರೈಲು ಸಂಖ್ಯೆ 07375: ಮೇ 6 ರಂದು ಬೆಳಿಗ್ಗೆ 8:45ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಡುವ ಅಂದು ರಾತ್ರಿ 8:15 ಗಂಟೆಗೆ ಮೈಸೂರು ರೈಲು ನಿಲ್ದಾಣ ತಲುಪಲಿದೆ.
- ರೈಲು ಸಂಖ್ಯೆ 06241: ಮೇ 6 ರಂದು ರಾತ್ರಿ 8:15ಕ್ಕೆ ಮೈಸೂರು ರೈಲು ನಿಲ್ದಾಣದಿಂದ ಹೊರಡುವ ರೈಲು ಮೇ 07 ರಂದು ಕಾರವಾರ ರೈಲು ನಿಲ್ದಾಣ ತಲುಪಲಿದೆ.
- ರೈಲು ಸಂಖ್ಯೆ 06242: ಮೇ 7 ರಂದು ರಾತ್ರಿ 10 ಗಂಟೆಗೆ ಕಾರವಾರ ರೈಲು ನಿಲ್ದಾಣದಿಂದ ಹೊರಡುವ ರೈಲು ಮೇ 08 ರಂದು ಮೈಸೂರು ರೈಲು ನಿಲ್ದಾಣ ತಲುಪಲಿದೆ.
- ರೈಲು ಸಂಖ್ಯೆ 08321: ಮೇ 9 ಮತ್ತು 16 ರಂದು ರಾತ್ರಿ 9:45ಕ್ಕೆ ಸಂಬಲಾಪುರ ರೈಲು ನಿಲ್ದಾಣದಿಂದ ಹೊರಡುವ ರೈಲು ಮೇ 08 ಮತ್ತು 17 ರಂದು ಸರ್ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣ ತಲುಪಲಿದೆ. ಮೇ 11 ರಂದು ಮತ್ತು 18 ರಂದು ಮಧ್ಯಾಹ್ನ 1 ಗಂಟೆಗೆ ಸರ್ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಹೊರಡುವ ರೈಲು (ಗಾಡಿ ಸಂಖ್ಯೆ 08322) ಮೇ 12 ಮತ್ತು 19 ರಂದು ಸಂಬಲಾಪುರ ರೈಲು ನಿಲ್ದಾಣ ತಲುಪುತ್ತದೆ.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 am, Mon, 6 May 24