ಕಾಲು ಭಾಗ ಲಾಭಾಂಶ ತೋರಿ, 2 ಸಾವಿರ ಜನರ ತಲೆಗೆ ಟೋಪಿ ಹಾಕಿದ ಆರೋಪಿ ಅಂದರ್
ಶೇಕಡಾ 25ರಷ್ಟು ಲಾಭಾಂಶದ ಆಮಿಷವೊಡ್ಡಿ 2 ಸಾವಿರ ಜನರಿಗೆ ಮೋಸ ಮಾಡಿರುವ ಘಟನೆ ನಡೆದಿದೆ. ಆನ್‌ಲೈನ್ ಡಿಜಿಟೆಕ್ ಮಾರ್ಕ್ ಕಂಪನಿ ಮೂಲಕ 2 ಸಾವಿರ ಜನರಿಗೆ ವಂಚಿಸಿದ D.S.ರಂಗನಾಥ್ ಎಂಬುವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ನಿರ್ದಿಷ್ಟ ಕಚೇರಿ ಇಲ್ಲದೆ ಜಾಹೀರಾತು ಮೂಲಕ ವಂಚನೆ ಮಾಡುತ್ತಿದ್ದ.
ಬೆಂಗಳೂರು: ತಾನಾಗಿಯೇ ಮುಂದೆ ಬಿದ್ದು ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಈ ಜಗತ್ತಿನಲ್ಲಿ. ಮತ್ತು ಹೀಗೆ ಮೋಸ ಹೋಗುವವರು/ ಮೋಸ ಮಾಡುವವರು ಇರುವವರೆಗೂ ಅದರ ಬಗ್ಗೆ ಬರೆಯುವುಯದಕ್ಕೆ ನಾವೂ ಇದ್ದೇ ಇರುತ್ತೇವೆ. ಎಷ್ಟು ಹೇಳಿದರೂ, ಎಷ್ಟೇ ನಿದರ್ಶನಗಳನ್ನು ಒಪ್ಪಿಸಿದರೂ ಈ ಮೋಸ ಹೋಗುವವವರಿಗೆ ಬುದ್ಧಿ ಬಂದಿಲ್ಲ ಎಂದು ಹೇಳುತ್ತಾ ಮತ್ತೊಂದು ಮೋಸದ ಪುರಾಣದ ಬಗ್ಗೆ ಹೇಳಬೇಕಿದೆ.
ಶೇಕಡಾ 25ರಷ್ಟು ಲಾಭಾಂಶದ ಆಮಿಷವೊಡ್ಡಿ 2 ಸಾವಿರ ಜನರಿಗೆ ಮೋಸ ಮಾಡಿರುವ ಘಟನೆ ನಡೆದಿದೆ. ಆನ್‌ಲೈನ್ ಡಿಜಿಟೆಕ್ ಮಾರ್ಕ್ ಕಂಪನಿ ಮೂಲಕ 2 ಸಾವಿರ ಜನರಿಗೆ ವಂಚಿಸಿದ D.S.ರಂಗನಾಥ್ ಎಂಬುವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿ ನಿರ್ದಿಷ್ಟ ಕಚೇರಿ ಇಲ್ಲದೆ ಜಾಹೀರಾತು ಮೂಲಕ ವಂಚನೆ ಮಾಡುತ್ತಿದ್ದ.
ಶೇಕಡಾ 25ರಷ್ಟು ಲಾಭಾಂಶದ ಆಮಿಷವೊಡ್ಡಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು. ಮೊದಲು 15 ಸಾವಿರ ಹೂಡಿಕೆ ಮಾಡಿ ಸದಸ್ಯತ್ವ ಪಡೀಬೇಕು. ಬಳಿಕ ಎಷ್ಟು ವರ್ಷಕ್ಕೆ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಮೈಂಡ್ ವಾಷ್ ಮಾಡುತ್ತಿದ್ದರು. 2021ರ ಡಿಸೆಂಬರ್ನಲ್ಲಿ 1 ಲಕ್ಷ ಲಾಭಾಂಶ ನೀಡಿಕೆ, 2022ರಲ್ಲಿ 5 ಲಕ್ಷ ರೂಪಾಯಿ, 2023ರಲ್ಲಿ 12 ಲಕ್ಷ ರೂ, 2025ಕ್ಕೆ 25 ಲಕ್ಷ ರೂಪಾಯಿ ಲಾಭ ನೀಡುವ ಆಮಿಷವೊಡ್ಡಿ ವಂಚನೆ ಮಾಡಿದ್ದಾರೆ. ಇನ್ನು ಹೆಚ್ಚಿನ ಬಡ್ಡಿ ಬೇಕಾದರೆ 1 ಲಕ್ಷ ಹೂಡಿಕೆ ಮಾಡಲು ಹೇಳುತ್ತಿದ್ದರು. ಈ ರೀತಿ ಜನರಿಗೆ ನಂಬಿಸಿ ಮೋಸ ಮಾಡಿದ್ದಾರೆ. ಸದ್ಯ ಈ ಸಂಬಂಧ ಒಬ್ಬ ಆರೋಪಿ ಅರೆಸ್ಟ್ ಆಗಿದ್ದಾನೆ.
ಸದಸ್ಯತ್ವ ಪಡೆದವರಿಗೆ ಯುಸರ್ ನೇಮ್, ಪಾಸ್ ವರ್ಡ್ ನೀಡಲಾಗುತ್ತಿತ್ತು. ಆ ಮೂಲಕ ಚೈನ್ ಲಿಂಕ್ ಆಧಾರದಲ್ಲಿ ಹೂಡಕೆ ಮಾಡಿಸಲಾಗುತ್ತಿತ್ತು. ಹೂಡಕೆಯಾದ ಕೋಟ್ಯಾಂತರ ಹಣವನ್ನು ಕ್ರಿಪ್ಟೊ ಕರೆನ್ಸಿಯ ಟ್ರೋನ್ ಕಾಯಿನ್ ಆಗಿ ಹೂಡಕೆ ಮಾಡಲಾಗುತ್ತಿತ್ತು. ಬಳಿಕ ಕಂಪೆನಿ ಹೆಸರಿನಲ್ಲಿ ಡಿಟಿಎಂ ಟೋಕನ್ ಎಂದು ರೂಪಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಅರೆಸ್ಟ್ ಆಗ ರಂಗನಾಥ್ ವಿಚಾರಣೆಯನ್ನು ಸಿಸಿಬಿ ತೀವ್ರ ಗೊಳಿಸಿದೆ.
ಇದನ್ನೂ ಓದಿ: ಸಮಸ್ಯೆಗಳನ್ನು ಬಗೆಹರಿಸಿದರೆ ನಾನು ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಲು ಸಿದ್ಧ: ನವಜೋತ್ ಸಿಂಗ್ ಸಿಧು