ಮಂಡ್ಯ ಗಣೇಶ ಮೆರವಣಿಗೆ ಗಲಭೆ ಕೇಸ್​: 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಮಂಡ್ಯ ಜಿಲ್ಲೆಯ ನಾಗಮಂಗಲ ಸಹಜಸ್ಥಿತಿಗೆ ಬಂದಿದ್ರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸದ್ಯ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಾಗಮಂಗಲ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ಆರೋಪಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಂಡ್ಯ ಗಣೇಶ ಮೆರವಣಿಗೆ ಗಲಭೆ ಕೇಸ್​: 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಮಂಡ್ಯ ಗಣೇಶ ಮೆರವಣಿಗೆ ಗಲಭೆ ಕೇಸ್​: 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2024 | 8:01 PM

ಮಂಡ್ಯ, ಸೆಪ್ಟೆಂಬರ್​​ 12: ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ (judicial custody) ವಿಧಿಸಿ ನಾಗಮಂಗಲ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಆರೋಪಿಗಳನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.  ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಕೋರ್ಟ್ ಮುಂದೆ ಬಂಧಿತರ ಪೋಷಕರು ಜಮಾವಣೆಗೊಂಡ ಹಿನ್ನಲೆ ಪೊಲೀಸ್ ಬಿಗಿ ಬಂದೋಬಸ್ತ್ ಒದಲಾಗಿಸಲಾಗಿತ್ತು.

ಸ್ಥಳದಲ್ಲಿ ಇಂಚಿಂಚೂ ಮಾಹಿತಿ ಸಂಗ್ರಹಿಸಿದ FSL ತಜ್ಞರು

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ಸ್ಥಳ ಪರಿಶೀಲನೆ ಮಾಡಲಾಗಿದೆ. ಪೊಲೀಸರ ಜೊತೆ ಸುಟ್ಟುಹೋದ ಅಂಗಡಿ ಮುಂಗಟ್ಟುಗಳನ್ನು ತಜ್ಞರು ಪರಿಶೀಲಿಸಿದ್ದು, ತನಿಖೆಗೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದಾರೆ. FSL ತಜ್ಞರು ಸ್ಥಳದಲ್ಲಿ ಇಂಚಿಂಚೂ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಈದ್ ಮೆರವಣಿಗೆ ವೇಳೆ ಹಿಂದೂಗಳು ದಾಳಿ ಮಾಡಿದ್ರೆ ಏನಾಗುತ್ತೆ ಊಹೆ ಇದೆಯಾ: ಪಂಪ್ ವೆಲ್ ಪ್ರಚೋದನಕಾರಿ ಹೇಳಿಕೆ

ಜಿಲ್ಲೆಯ ನಾಗಮಂಗಲದಲ್ಲಿ ದಕ್ಷಿಣ ವಲಯ ಐಜಿಪಿ ನೇತೃತ್ವದಲ್ಲಿ ಪಥಸಂಚಲನ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆಗೆ ಬೋರಲಿಂಗಯ್ಯ ನೇತೃತ್ವದಲ್ಲಿ ರೌಂಡ್ಸ್ ಹಾಕಿದ್ದು, ಚನ್ನಕೇಶವ ದೇವಾಲಯ, ಪಾಂಡವಪುರ-ಬೆಳ್ಳೂರು ರಸ್ತೆ, ಮಂಡ್ಯ ವೃತ್ತ ಸೇರಿ ಹಲವು ಬಡಾವಣೆಗಳಲ್ಲಿ ಪಥಸಂಚಲನ ಮಾಡಲಾಗಿದೆ. ನಾಗಮಂಗಲ ಸಹಜ ಸ್ಥಿತಿಗೆ ತರಲು ಪೊಲೀಸರು ಪಥಸಂಚಲನ ಮಾಡಿದ್ದಾರೆ.

ಸಂಘರ್ಷದ ಬೆನ್ನಲ್ಲೇ ಅಲರ್ಟ್​ ಆಗಿದ್ದ ಪೊಲೀಸರು, ನಿನ್ನೆ ರಾತ್ರಿಯೇ ಎಸ್‌ಪಿ, ಡಿಸಿ ಸೇರಿ ಹಿರಿಯ ಅಧಿಕಾರಿಗಳು ನಾಗಮಂಗಲಕ್ಕೆ ದೌಡಾಯಿಸಿದ್ರು. ಲಾಠಿಚಾರ್ಜ್​ ಮಾಡಿ 2 ಗುಂಪುಗಳನ್ನ ಚದುರಿಸಿದ್ರು. ಪರಿಸ್ಥಿತಿ ಕೈ ಮೀರುತ್ತೆ ಅಂತಾ ಗೊತ್ತಾಗಿದ್ದೇ ತಡ, ಶನಿವಾರದ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣ; ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು-ಸಿದ್ದರಾಮಯ್ಯ

ಗಲಾಟೆ ಸಂಬಂಧ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ನೂರಾರು ಸಂಖ್ಯೆ ಯುವಕರು ಗಲಾಟೆ ಮಾಡಿದ್ದರಿಂದ, ಉದ್ರಿಕ್ತ ಆರೋಪಿಗಳನ್ನ ಪತ್ತೆ ಹಚ್ಚೋದೇ ಪೊಲೀಸರಿಗೆ ಸವಾಲಾಗಿದೆ. ಸಿಸಿ ಕ್ಯಾಮರಾ ದೃಶ್ಯಗಳನ್ನ ಆಧರಿಸಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಕರ್ತವ್ಯ ನಿರತ ಪಿಎಸ್ಐ B.J.ರವಿ ದೂರು ಆಧಾರದಲ್ಲಿ, ಈವರೆಗೂ 150 ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು. 30 ಮುಸ್ಲಿಂ ಯುವಕರು ಮತ್ತು 23 ಹಿಂದೂ ಯುವಕರನ್ನ ಬಂಧಿಸಲಾಗಿತ್ತು. ಇನ್ನು ತಲೆಮರೆಸಿಕೊಂಡಿರೋ 97 ಜನರಿಗೆ ಶೋಧ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ದರ್ಶನ್ ಪ್ರಕರಣ: ಉಪೇಂದ್ರ ಮೊದಲ ಪ್ರತಿಕ್ರಿಯೆ ಹೀಗಿತ್ತು
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು