ಮಂಡ್ಯ, ಫೆಬ್ರವರಿ 03: ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಕಾರು ಬಿದ್ದು ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದು (death), ಓರ್ವನ ರಕ್ಷಣೆ ಮಾಡಿರುವಂತಹ ಘಟನೆ ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ನಡೆದಿದೆ. ಕಾರು ಮಾಲೀಕ ಫಯಾಜ್, ಅಸ್ಲಂಪಾಷಾ ಮತ್ತು ಪೀರ್ಖಾನ್ ಮೃತರು. ನಯಾಜ್ ರಕ್ಷಣೆಗೊಳಗಾದ ವ್ಯಕ್ತಿ. ಕಾರಿನಲ್ಲಿದ್ದ ನಾಲ್ವರು ಮಂಡ್ಯದ ಹಾಲಹಳ್ಳಿ ಸ್ಲಂ ನಿವಾಸಿಗಳು. ಘಟನಾ ಸ್ಥಳಕ್ಕೆ ಮಂಡ್ಯ ಡಿಸಿ ಡಾ.ಕುಮಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪಾಂಡವಪುರದಿಂದ ಮಂಡ್ಯಕ್ಕೆ ಬರುವ ವೇಳೆ ಅವಘಡ ಸಂಭವಿಸಿದೆ. ವಿಸಿ ನಾಲೆಗೆ ತಡೆಗೋಡೆ ಇಲ್ಲದ ಹಿನ್ನೆಲೆ ಕಾರು ಬಿದ್ದಿದೆ ಎನ್ನಲಾಗುತ್ತಿದೆ. ಸದ್ಯ ಶಿವಳ್ಳಿ ಠಾಣೆ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದಿದ್ದು, ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ನೀರಿನ ರಭಸಕ್ಕೆ ಕಾರು ಮುಳುಗಡೆಯಾಗಿದೆ. ಅಪಾರ ನೀರು ಇರುವ ಕಾರಣ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ.
ಇದನ್ನೂ ಓದಿ: ಕುವೈತ್ನಲ್ಲಿ ಅರಳಿದ್ದ ಪ್ರೀತಿ ವಿಜಯಪುರದಲ್ಲಿ ಅಂತ್ಯ: ಪ್ರೇಮಿಯನ್ನೇ ನಂಬಿ ಮೋಸ ಹೋದ ಆಂಧ್ರ ಬೆಡಗಿ
ಇನ್ನು ತಡೆಗೋಡೆ ಇಲ್ಲದ ಕಾರಣ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ವಿಸಿ ನಾಲೆಗೆ ಕಾರು, ಬಸ್ ಬೀಳ್ಳುತ್ತಿವೆ. ಹೀಗಿದ್ದರೂ ತಡೆಗೋಡೆ ಮಾತ್ರ ಹಾಕುತ್ತಿಲ್ಲ. ಜನರ ಪ್ರಾಣಕ್ಕೆ ಇವರ ಬಳಿ ಬೆಲೆ ಇಲ್ಲ ಎಂದು ಸರ್ಕಾರಕ್ಕೆ ಜನರು ಇಡಿ ಶಾಪ ಹಾಕುತ್ತಿದ್ದಾರೆ.
ಇನ್ನು ದುರಂತದ ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿ ಇಂಜಿನಿಯರ್ ಜಗದೀಶ್‌ಗೆ ಜನರು ತರಾಟೆ ತೆಗೆದುಕೊಂಡಿದ್ದಾರೆ. ನಿಮ್ಮಿಂದಲೇ ದುರಂತ, ಕಾರಣವೇ ನೀವು ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತವಾಗಿದೆ. ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ರಸ್ತೆಯಲ್ಲಿಯೇ ಕೂತು ಸ್ಥಳೀಯರು ಪ್ರತಿಭಟನೆ ಮಾಡಿದ್ದಾರೆ.
ಮಂಡ್ಯ ಡಿಸಿ ಡಾ.ಕುಮಾರ ಪ್ರಕ್ರಿಯಿಸಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಇನ್ನೋರ್ವ ಜೀವಂತವಾಗಿ ಸಿಕ್ಕಿದ್ದಾನೆ. ಇಬ್ಬರು ನಾಪ್ಪತ್ತೆಯಾಗಿದ್ದಾರೆ. ಅವರ ಹುಡುಕಾಟ ನಡೆಯುತ್ತಿದೆ. ವಿಸಿ ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ನೀರನ್ನು ನಿಲ್ಲಿಸಲು ಹೇಳಿದ್ದೇವೆ. 5 ಗಂಟೆಗೆ ನೀರು ಕಡಿಮೆಯಾಗುತ್ತದೆ. ಬಳಿಕ ಕಾರು, ನಾಪತ್ತೆಯಾಗಿರುವವರನ್ನು ಹುಡುಕುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ
ಈ ಘಟನೆ ನಡೆದಿರುವುದು ದುರ್ದೈವ. ಕಾರು ಯಾವ ರೀತಿ ಅಪಘಾತ ಆಗಿದೆ ಎಂದು ಗೊತ್ತಿಲ್ಲ. ಅದರ ಬಗ್ಗೆ ತನಿಖೆ ಮಾಡುತ್ತೇವೆ. 560 ಕಿಮೀ ಉದ್ದ ವಿಸಿ ನಾಲೆ ಇದೆ. ಎಲ್ಲಿ ಅಪಘಾತ ಹೆಚ್ಚಾಗಿ ನಡೆಯುತ್ತಿವೆ, ಯಾವ ಜಾಗ ಡೇಂಜರ್ ಎಂದು ತಿಳಿಯಲು ತಂಡ ನಿಯೋಜನೆ ಮಾಡಿದ್ದು, ಆ ತಂಡ ವರದಿಯನ್ನು ಸಹ ಕೊಟ್ಟಿದೆ. ಅದನ್ನು ಕಾರ್ಯರೂಪವಲ್ಲಿ ಕೆಲಸ ಸಹ ನಡೆಯುತ್ತಿದೆ. ಏಕಕಾಲದಲ್ಲಿ 560 ಕಿಮೀ ದೂರ ತಡೆಗೋಡೆ ನಿರ್ಮಾಣ ಕಷ್ಟ. ಹಂತ ಹಂತವಾಗಿ ತಡೆಗೋಡೆ ನಿರ್ಮಾಣ ಕೆಲಸ ಕಾರ್ಯ ಆಗುತ್ತಿದೆ. ಇದು ತೀವ್ರಗತಿಯಲ್ಲಿ ಮಾಡಲು ನಾನು ಇನ್ನಷ್ಟು ಕ್ರಮವಹಿಸುತ್ತೇವೆ. ಈ ರಸ್ತೆಯ ಅಗಲ ಸಾಕಾಗುವುದಿಲ್ಲ. ಇದನ್ನು ಇನ್ನಷ್ಟು ಅಗಲೀಕರಣ ಮಾಡಲು ಕ್ರಮವಹಿಸುತ್ತೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:42 pm, Mon, 3 February 25