ಮಂಡ್ಯ: ಹಳ್ಳಿಕಾರ್ ತಳಿಯ ಎತ್ತು 7.68 ಲಕ್ಷ ರೂ.ಗೆ ಮಾರಾಟ; ಈ ಎತ್ತಿನ ವಿಶೇಷತೆ ಏನು?
ಚಿಕ್ಕಮಗಳೂರಿನ ತೇಗೂರು ಗ್ರಾಮದ ಮಂಜುನಾಥ್ ಎಂಬುವವರಿಗೆ ಎತ್ತು ಮಾರಾಟ ಮಾಡಲಾಗಿದೆ. ಹಳ್ಳಿಕಾರ್ ತಳಿ ಎತ್ತು ಹೆಚ್ಚು ಬೆಲೆಗೆ ಮಾರಾಟವಾಗಿದೆ. ಅಲಂಕಾರ, ಪೂಜೆ ಮಾಡಿ ಎತ್ತನ್ನು ವಿನೋದ್ ಕುಟುಂಬ ಕಳಿಸಿಕೊಟ್ಟಿದೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹಳ್ಳಿಕಾರ್ ತಳಿಯ ಎತ್ತು ಒಂದು ಬರೋಬ್ಬರಿ 7.68 ಲಕ್ಷ ರೂಪಾಯಿಗೆ ಮಾರಾಟವಾಗಿ ಗಮನ ಸೆಳೆದಿದೆ. ಪಾಲಹಳ್ಳಿಯ ವಿನೋದ್ ಎಂಬುವವರು ಸಾಕಿದ್ದ ಎತ್ತು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಈ ಎತ್ತು 80ಕ್ಕೂ ಹೆಚ್ಚು ಎತ್ತಿನಗಾಡಿ ಓಟದಲ್ಲಿ ಭಾಗಿಯಾಗಿತ್ತು ಹಾಗೂ ಭಾಗವಹಿಸಿದ 80ಕ್ಕೂ ಅಧಿಕ ಓಟದ ಪೈಕಿ 70 ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ತಂದುಕೊಟ್ಟಿತ್ತು ಎಂಬುದು ವಿಶೇಷವಾಗಿದೆ.
ಈ ಎತ್ತಿನ ಸಾಧನೆಗೆ ಅದನ್ನು ‘ಕಿಂಗ್ ಗಗನ್’ ಎಂದೆ ಕರೆಯಲಾಗ್ತಿತ್ತು. ಕಳೆದ ಒಂದು ವರ್ಷದ ಹಿಂದೆ 4.5 ಲಕ್ಷಕ್ಕೆ ಈ ಎತ್ತು ಖರೀದಿಸಿದ್ದ ವಿನೋದ್ ಇದೀಗ 7.68 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಚಿಕ್ಕಮಗಳೂರಿನ ತೇಗೂರು ಗ್ರಾಮದ ಮಂಜುನಾಥ್ ಎಂಬುವವರಿಗೆ ಎತ್ತು ಮಾರಾಟ ಮಾಡಲಾಗಿದೆ. ಹಳ್ಳಿಕಾರ್ ತಳಿ ಎತ್ತು ಹೆಚ್ಚು ಬೆಲೆಗೆ ಮಾರಾಟವಾಗಿದೆ. ಅಲಂಕಾರ, ಪೂಜೆ ಮಾಡಿ ಎತ್ತನ್ನು ವಿನೋದ್ ಕುಟುಂಬ ಕಳಿಸಿಕೊಟ್ಟಿದೆ.
ಹಳ್ಳಿಕಾರ್ ತಳಿ
ಹಳ್ಳಿಕಾರ್ ತಳಿಯು ಭಾರತದಲ್ಲಿ ಅಳಿವಿನ ಅಂಚಿನಲ್ಲಿ ಇರುವ ತಳಿ ಎಂದು ಗುರುತಿಸಲ್ಪಟ್ಟಿದೆ. ಈ ತಳಿಯ ಎತ್ತು ಅಪ್ಪಟ ಕೆಲಸಗಾರ ಎತ್ತಾಗಿದೆ. ಹೆಚ್ಚು ಭಾರವನ್ನು, ಹೆಚ್ಚು ಹೊತ್ತು ಎಳೆಯಬಲ್ಲ ಸಾಮರ್ಥ್ಯ ಈ ತಳಿಯ ಎತ್ತುಗಳಿಗೆ ಇರುತ್ತವೆ. ಈ ತಳಿಯ ಎತ್ತುಗಳು ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಬೆಂಗಳೂರು, ತುಮಕೂರು, ಚಿಕ್ಕಮಗಳೂರು ಭಾಗಗಳಲ್ಲಿ ಹೆಚ್ಚಾಗಿ ಇವೆ. ಹಳ್ಳಿಕಾರ್ ಎತ್ತುಗಳನ್ನು ಹೊಂದಿರುವ ರೈತರು ಅವುಗಳಿಗೆ ಹೆಸರು ನಾಮಕರಣ ಮಾಡಿ ಮನೆಯ ಮಗನಂತೆ ಹೆಮ್ಮೆಯಿಂದ ನೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಮಂಡ್ಯ: ಜೈಲಿನಿಂದ ಹೊರಬಂದ ಕಾಳಿ ಸ್ವಾಮೀಜಿಗೆ ಅದ್ಧೂರಿ ಸ್ವಾಗತ; ಹಾರ ಹಾಕಿ ಜೈ ಎಂದ ಅಭಿಮಾನಿಗಳು
ಇದನ್ನೂ ಓದಿ: ಮಂಡ್ಯ ನಗರದ ಪೊಲೀಸರಿಂದ ಅಮಾನವೀಯ ನಡೆ; ಮಹಿಳೆ ಅಸ್ವಸ್ಥ
Published On - 9:00 am, Tue, 25 January 22