AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಎಚ್​ಡಿಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗಿಳಿದ ಎಚ್​ಡಿ ರೇವಣ್ಣ: ರಂಗೇರಿದ ರಾಜಕೀಯ

ಸಕ್ಕರೆ ನಾಡಿನಲ್ಲಿ ಲೋಕಸಭಾ (Mandya Lok Sabha) ಚುನಾವಣಾ ಕಣ ರಂಗೇರಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಬಲ ಅಭ್ಯರ್ಥಿ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಇಂದು ಮಂಡ್ಯದಲ್ಲಿ ನಾಮಪತ್ರ ಸಲ್ಲಸಿದ್ದಾರೆ. ಇನ್ನು ಇವರ ವಿರುದ್ಧವಾಗಿ ಎಚ್‌.ಡಿ.ರೇವಣ್ಣ ಸಹ ಸ್ಪರ್ಧೆಗಿಳಿದಿದ್ದಾರೆ. ಅರೇ ಇದೇನಿದು ಅಚ್ಚರಿ ಅಂತೀರಾ? ಇಲ್ಲಿದೆ ನೋಡಿ ಅಸಲಿಯತ್ತು

ಮಂಡ್ಯದಲ್ಲಿ ಎಚ್​ಡಿಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗಿಳಿದ ಎಚ್​ಡಿ ರೇವಣ್ಣ:  ರಂಗೇರಿದ ರಾಜಕೀಯ
ಹೆಚ್​ಡಿ ಕುಮಾರಸ್ವಾಮಿ
Follow us
ರಮೇಶ್ ಬಿ. ಜವಳಗೇರಾ
|

Updated on: Apr 04, 2024 | 10:18 PM

ಮಂಡ್ಯ, (ಏಪ್ರಿಲ್ 04): ಲೋಕಸಭೆ ಚುನಾವಣೆಯ (Loksabha Elections 2024) ಮೊದಲ ಹಂತದ ಮತದಾನ ನಡೆಯುವ ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು(ಏಪ್ರಿಲ್ 04) ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿತ್ತು. ಹೀಗಾಗಿ ಮೊದಲ 14 ಕ್ಷೇತ್ರಗಳ ಅಭ್ಯರ್ಥಿಗಳಿವತ್ತು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನು ಮಂಡ್ಯ ಲೋಕಸಭಾ(mandya loksabha) ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ(HD Kumaraswamy) ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಮಂಡ್ಯದಿಂದ ಎಚ್​ಡಿ ರೇವಣ್ಣ(HD Revanna) ಅವರು ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅರೇ ಇದೇನಿದು ತಮ್ಮ ಕುಮಾರಸ್ವಾಮಿ ವಿರುದ್ಧವೇ ಅಣ್ಣ ರೇವಣ್ಣ ಸ್ಪರ್ಧೆ ಮಾಡುತ್ತಿದ್ದಾರಾ ಎಂದು ಅಚ್ಚರಿಯಾಗಬಹುದು. ಆದ್ರೆ, ಮಂಡ್ಯದಲ್ಲಿ ಕಣಕ್ಕಿಳಿದ ಎಚ್​ಡಿ ರೇವಣ್ಣ ಬೇರೆ.

ಎಚ್‌.ಡಿ.ರೇವಣ್ಣ ಎಂದಾಕ್ಷಣ ಕುಮಾರಸ್ವಾಮಿ ಅವರ ಅಣ್ಣ ಎಂದು ಅನೇಕರು ಭಾವಿಸಬಹುದು. ಆದರೆ ಎಚ್‌ಡಿಕೆ ಸಹೋದರ ಎಚ್‌.ಡಿ.ರೇವಣ್ಣ ಅಲ್ಲ. ಅದೇ ಹೆಸರಿಗೆ ವ್ಯಕ್ತಿಯೊಬ್ಬರು ಸ್ಪರ್ಧೆಗಿಳಿದಿದ್ದಾರೆ. ಹೌದು.. ಎಚ್.‌ಡಿ.ರೇವಣ್ಣ ಹೆಸರಿನ ವ್ಯಕ್ತಿಯೊಬ್ಬರು ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಹಾಸನ ಮೂಲದ ಎಚ್‌.ಡಿ.ರೇವಣ್ಣ (H.D.Revanna) ಎಂಬವರು ಪೂರ್ವಾಂಚಲ ಮಹಾಪಂಚಾಯತ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚನ್ನರಾಯಪಟ್ಟಣದ ಕೋಡಿಹಳ್ಳಿ ಗ್ರಾಮದ ದೊಡ್ಡೇಗೌಡರ ಪುತ್ರ ಈ ಎಚ್‌.ಡಿ.ರೇವಣ್ಣ.

ಇದನ್ನೂ ಓದಿ: ಮತ್ತೊಬ್ಬ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಡಾಕ್ಟರಲ್ಲ, ಪ್ರಮಾಣಪತ್ರವೂ ನಕಲಿ ಎಂದ ಬಿಜೆಪಿ!

ಇನ್ನು ದೊಡ್ಡೇಗೌಡರ ಪುತ್ರ ಈ ಎಚ್‌.ಡಿ.ರೇವಣ್ಣ ಅವರು ಎರಡು ಲಕ್ಷ ರೂಪಾಯಿ ನಗದು ಸೇರಿದಂತೆ ಒಟ್ಟು ಆರು ಲಕ್ಷ ಮೌಲ್ಯದ ಆಸ್ತಿ ಇರುವುದಾಗಿ ತಮ್ಮ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ. ಇನ್ನು ಕುಮಾರಸ್ವಾಮಿ ವಿರುದ್ಧ ಎಚ್​ಡಿ ರೇವಣ್ಣ ಅವರ ಸ್ಪರ್ಧೆ ಒಂದು ರೀತಿಯಾಗಿ ರಾಜಕೀಯ ತಂತ್ರ. ಒಂದೇ ಹೆಸರಿನ ಮತ್ತೊಬ್ಬನನ್ನು ಕಳ್ಳಿಸುವುದು, ಒಂದು ರೀತಿ ಇರುವ ವ್ಯಕ್ತಿಯನ್ನು ಚುನಾವಣೆಗೆ ಕರೆತರುವುದು ಸಾಮಾನ್ಯ.

ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲೂ ಸಹ ಡಾ ಸಿಎನ್ ಮಂಜುನಾಥ್​ ಹೆಸರಿನ ಮತ್ತೋರ್ವ ವ್ಯಕ್ತಿ ಸಹ ನಾಮಪತ್ರ ಸಲ್ಲಿಸಿದ್ದಾರೆ. ಖ್ಯಾದ ವೈದ್ಯ ಡಾ.ಸಿಎನ್ ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೆ, ಅದೇ ಹಸರಿನ ಹಾಸನ ಮೂಲದ ಮತ್ತೋರ್ವ ಡಾ ಸಿಎನ್ ಮಂಜುನಾಥ್ ಎನ್ನುವರು ಸಹ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕಳೆದ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡಿದ್ದರು. ಇದರ ಜೊತೆ ಸುಮಲತಾ ಎನ್ನುವ ಹೆಸರಿನ ನಾಲ್ವರು ಮಹಿಳೆಯರು ಸಹ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇದರ ಅರ್ಥ, ಮತದಾರರಲ್ಲಿ ಗೊಂದಲ ಮೂಡಿಸಿ ಮತಗಳನ್ನು ಚದುರಿಸುವ ರಾಜಕೀಯ ತಂತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ