AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಕಾರಣಕ್ಕೂ ನಾನು ಈ ಮಣ್ಣನ್ನ ಬಿಡೋದಿಲ್ಲ; ಮಂಡ್ಯ ಲೋಕಸಭಾ ಸ್ಪರ್ಧೆ ಬಗ್ಗೆ ಸುಮಲತಾ ಸುಳಿವು

ದರ್ಶನ್ ಅವರು ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ಬೆಳ್ಳಿಹಬ್ಬ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದೆ ಸುಮಲತಾ ಅವರು ಮುಂದಿನ ಲೋಕಸಭಾ ಚುನಾವಣೆಗೆ ತಮ್ಮ ಸ್ಪರ್ಧೆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ನಾನು ಈ ಮಣ್ಣನ್ನ ಬಿಡೋದಿಲ್ಲ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ನಾನು ಈ ಮಣ್ಣನ್ನ ಬಿಡೋದಿಲ್ಲ; ಮಂಡ್ಯ ಲೋಕಸಭಾ ಸ್ಪರ್ಧೆ ಬಗ್ಗೆ ಸುಮಲತಾ ಸುಳಿವು
ಸುಮಲತಾ ಅಂಬರೀಶ್
ಪ್ರಶಾಂತ್​ ಬಿ.
| Edited By: |

Updated on:Feb 18, 2024 | 8:10 AM

Share

ಮಂಡ್ಯ, ಫೆ.18: ಮತ್ತೊಮ್ಮೆ ಮಂಡ್ಯ ಲೋಕ ಸಭಾ ಅಖಾಡಕ್ಕೆ (Mandya Lok Sabha) ಸುಮಲತಾ ಅಂಬರೀಶ್ (Sumalatha Ambarish) ಅವರು ಇಳಿಯುತ್ತಿರುವುದು ಬಹುತೇಕ ಫಿಕ್ಸ್ ಆಗಿದೆ. ಈ ಬಗ್ಗೆ ಅವರೇ ಕೇಳಿ ಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆ ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ಬೆಳ್ಳಿಹಬ್ಬ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ರೆಬಲ್ ಲೇಡಿ ಸುಮಲತಾ ಅವರು ಮತ್ತೆ ಸುಳಿವು ಕೊಟ್ಟಿದ್ದಾರೆ.

ಮಂಡ್ಯ ಮಣ್ಣು ಬಿಡಲ್ಲ ಎನ್ನುತ್ತಲೇ ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ ಕಣ್ಣಕ್ಕಿಳಿಯುವ ಸೂಚನೆ ನೀಡಿದ್ದಾರೆ. 2019ರ ಚುನಾವಣೆ ನೆನೆದು ಸುಮಲತಾ ಅವರು ಭಾವುಕರಾದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ, ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ರು. ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್​ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕವೇ ಸುಳಿವು ಕೊಟ್ಟಿದ್ದಾರೆ. ಚುನಾವಣೆ ಹತ್ತಿರವಾಗ್ತಿದ್ದಂತೆ ಸುಮಲತಾ ಕುತೂಹಲ ಹೆಚ್ಚಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಹಾಗೂ ಯಶ್ ಮಾಡಿದ ಸಹಾಯ ನೆನಪು ಮಾಡಿಕೊಂಡ ಸುಮಲತಾ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅವರ ಸ್ಪರ್ಧೆ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಿಂದಲೇ ಸುಮಲತಾ ಅವರು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಒಂದು ಕಡೆ ಕೇಳಿ ಬರುತ್ತಿದ್ದು, ಕಾಂಗ್ರೆಸ್ ಕೂಡ ಸುಮಲತಾ ಅವರನ್ನು ತಮ್ಮನ್ನ ಸೆಳೆದುಕೊಳ್ಳಲು ನಾನಾ ಸರ್ಕಸ್ ಮಾಡುತ್ತಿದೆ ಎಂಬ ಮಾತು ಕೂಡ ಮತ್ತೊಂದೆಡೆ ಕೇಳಿ ಬಂದಿತ್ತು. ಇದೆಲ್ಲದರ ಜೊತೆಗೆ ಸುಮಲತಾ ಪಕ್ಷೇತರವಾಗಿಯೇ ಸ್ಪರ್ಧೆಗೆ ಇಳಿಯುವುದು ಪಕ್ಕಾ ಎನ್ನಲಾಗ್ತಿದೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಎಂದ ಸುಮಲತಾ, ಮತ್ತೆ ಮಂಡ್ಯ ಕ್ಷೇತ್ರದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:06 am, Sun, 18 February 24

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್