ಮಂಡ್ಯ ಸೌಹಾರ್ದತೆಗೆ ಬೆಂಕಿ ಹಚ್ಚಲು ಬಂದ್ರೆ ಅಹಿಂಸೆ ಮಾರ್ಗವನ್ನ ದಾಟ ಬೇಕಾಗುತ್ತೆ; ಕಾಳಿ ಸ್ವಾಮಿ ಮೂರನೇ ದರ್ಜೆಯ ಹಲಾಲ್ ಕೋರ -ಪ್ರಗತಿಪರ ಚಿಂತಕ ಜಗದೀಶ್ ಕೊಪ್ಪ
ಮಂಡ್ಯ ಜಿಲ್ಲೆಯ ಸೌಹಾರ್ದತೆಗೆ ಬೆಂಕಿ ಹಚ್ಚಲು ಬರುತ್ತಿದ್ದಾರೆ. ಸೌಹಾರ್ದತೆ ಕೆಡಿಸಲು ಬಂದರೆ ಹಿಂಸಾ ಮಾರ್ಗ ಹಿಡಿಯುತ್ತೇವೆ. ಮಂಡ್ಯ ಜಿಲ್ಲೆಗೂ ಪ್ರಮೋದ್ ಮುತಾಲಿಕ್ಗೂ ಏನ್ ಸಂಬಂಧ. ಮಂಡ್ಯದಲ್ಲಿ ಪಾದಯಾತ್ರೆ ಮಾಡಲು ನಾವು ಬಿಡುವುದಿಲ್ಲ ಎಂದರು.
ಮಂಡ್ಯ: ಮುತಾಲಿಕ್(Pramod Muthalik) & ಕಾಳಿಸ್ವಾಮಿ(Kali Swamiji) ಪಾದಯಾತ್ರೆಯನ್ನ ತಡೆಯುತ್ತೇವೆ. ಪಾದಯಾತ್ರೆ ವೇಳೆ ಘರ್ಷಣೆಯಾದ್ರೆ ನಾವು ಹೊಣೆಗಾರರಲ್ಲ. ಮಂಡ್ಯ ಜಿಲ್ಲೆ ಸೌಹಾರ್ದತೆಗೆ ಬೆಂಕಿ ಹಚ್ಚಲು ಬಂದ್ರೆ ಅಹಿಂಸೆ ಮಾರ್ಗವನ್ನ ದಾಟ ಬೇಕಾಗುತ್ತೆ ಎಂದು ಮಂಡ್ಯ ಡಿಸಿ ಕಚೇರಿ ಆವರಣದಲ್ಲಿ ಪ್ರಗತಿಪರ ಚಿಂತಕ ಜಗದೀಶ್ ಕೊಪ್ಪ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸೌಹಾರ್ದತೆಗೆ ಬೆಂಕಿ ಹಚ್ಚಲು ಬರುತ್ತಿದ್ದಾರೆ. ಸೌಹಾರ್ದತೆ ಕೆಡಿಸಲು ಬಂದರೆ ಹಿಂಸಾ ಮಾರ್ಗ ಹಿಡಿಯುತ್ತೇವೆ. ಮಂಡ್ಯ ಜಿಲ್ಲೆಗೂ ಪ್ರಮೋದ್ ಮುತಾಲಿಕ್ಗೂ ಏನ್ ಸಂಬಂಧ. ಮಂಡ್ಯದಲ್ಲಿ ಪಾದಯಾತ್ರೆ ಮಾಡಲು ನಾವು ಬಿಡುವುದಿಲ್ಲ ಎಂದರು. ಋಷಿಕುಮಾರ ಸ್ವಾಮೀಜಿ ನಿನ್ನೆ ಮೊನ್ನೆ ಸಿನಿಮಾ ಥೇಟರ್ಗಳಲ್ಲಿ ಶೂಟಿಂಗ್ ನಲ್ಲಿ ಚಡ್ಡಿ ಬಿಚ್ಚಿಕೊಂಡು ತಿರುಗುತ್ತಿದ್ದ. ಕಾಳಿ ಸ್ವಾಮಿ ಮೂರನೇ ದರ್ಜೆಯ ಹಲಾಲ್ ಕೋರ ಎಂದು ಕಾಳಿ ಸ್ವಾಮಿ ವಿರುದ್ಧ ಪ್ರಗತಿ ಪರ ಚಿಂತಕ ಜಗದೀಶ್ ಕೊಪ್ಪ ವಾಗ್ಧಾಳಿ ನಡೆಸಿದ್ದಾರೆ.
ಮಂಡ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಋಷಿಕುಮಾರ ಸ್ವಾಮಿಜಿಗೆ ಕಪ್ಪು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು: ಮಲ್ಲೇಶ್ವರಂನ ಗಂಗಮ್ಮನ ದೇವಾಲಯದಲ್ಲಿ ಋಷಿ ಕುಮಾರ ಸ್ವಾಮಿಯ(Rishi Kumara Swamiji) ಮೇಲೆ ದಾಳಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಋಷಿ ಕುಮಾರ ಸ್ವಾಮಿಜಿಗೆ ಕಪ್ಪು ಮಸಿ ಬಳೆದು ಕರ್ನಾಟಕ ರಕ್ಷಣಾ ವೇದಿಕೆ ವಿಕೃತಿ ಮೆರೆದಿದ್ದಾರೆ. ನಾಡಪ್ರಭು ಕೆಂಪೇಗೌಡ, ಕುವೆಂಪುರವರ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಋಷಿ ಕುಮಾರ ಸ್ವಾಮಿಯ ಕಾಲಿಗೆ ಪೆಟ್ಟು ಬಿದ್ದಿದೆ. ಋಷಿ ಕುಮಾರ ಸ್ವಾಮಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮನ ದೇವಾಲಯಕ್ಕೆ ಬಂದಿದ್ದ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಕಪ್ಪು ಮಸಿ ಬಳೆದು ಕೃತ್ಯ ಎಸಗಿದ್ದಾರೆ. ಸದ್ಯ ಕಾಳಿ ಸ್ವಾಮಿ ಖಾಸಗಿ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಿಮಗೆ ಧಮ್ ಇದ್ರೆ ನೀವು ಗಂಡಸರಾದ್ರೆ ನ್ಯಾಯಾಲಯದಲ್ಲಿ ಸಾಬೀತು ಮಾಡಿ. ನಾನು ಇದಕ್ಕೆಲ್ಲ ಹೆದರಲ್ಲವೆಂದು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆಗೆ ಕಾಳಿ ಸ್ವಾಮಿ ಓಪನ್ ಚ್ಯಾಲೆಂಜ್ ಕೊಟ್ಟಿದ್ದಾರೆ.
ರಾಷ್ಟ್ರ ಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಅವಮಾನಿಸಿದ ಆರೋಪ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಡು ರಸ್ತೆಯಲ್ಲಿ ಋಷಿಕುಮಾರ ಸ್ವಾಮಿ ಮುಖಕ್ಕೆ ಮಸಿ ಬಳಿದಿದ್ದಾರೆ. ನಾಡಗೀತೆಯನ್ನ ಅನುಸರಿಸುತ್ತಿರುವ ಕನ್ನಡಪರ ಹೋರಾಟಗಾರರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆಂದು ಕಾಳಿ ಸ್ವಾಮೀಜಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸೇಡು ತೀರಿಸಿಕೊಂಡಿದೆ. ನೂರಾರು ಕಾರ್ಯಕರ್ತರು ಸೇರಿ ಕಾಳಿ ಸ್ವಾಮಿ ಮುಖಕ್ಕೆ ಮಸಿ ಬಳಿಯುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
Published On - 3:24 pm, Tue, 17 May 22