AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya News: ಎರಡೂವರೆ ತಿಂಗಳ ಗರ್ಭಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಕೊಲೆ ಶಂಕೆ

ಎರಡೂವರೆ ತಿಂಗಳ ಗರ್ಭಿಣಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮೇಗಳಪುರ ಗ್ರಾಮದಲ್ಲಿ ನಡೆದಿದೆ.

Mandya News: ಎರಡೂವರೆ ತಿಂಗಳ ಗರ್ಭಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಕೊಲೆ ಶಂಕೆ
ಮೃತ ರಮ್ಯ
TV9 Web
| Edited By: |

Updated on: Jan 01, 2023 | 2:15 PM

Share

ಮಂಡ್ಯ: ಎರಡೂವರೆ ತಿಂಗಳ ಗರ್ಭಿಣಿ (Pregnant) ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ಮೇಗಳಪುರ ಗ್ರಾಮದಲ್ಲಿ ನಡೆದಿದೆ. ಹೆಚ್.ವೈ.ರಮ್ಯಾ (24) ಮೃತ ಮಹಿಳೆ. ರಮ್ಯಾ 5 ವರ್ಷದ ಹಿಂದೆ ಕುಮಾರ್ ಎಂಬಾತನನ್ನು ಮದುವೆಯಾಗಿದ್ದಳು. ದಂಪತಿಗೆ 4 ವರ್ಷದ ಹೆಣ್ಣು ಮಗುವಿದ್ದು, ಈಗ ಮತ್ತೆ ಗರ್ಭಿಣಿಯಾಗಿದ್ದಳು. ಕುಮಾರ್ ಕುಟುಂಬಸ್ಥರು ಕಳೆದ 1 ವರ್ಷದಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಕುಟುಂಬಸ್ಥರ ಕಾಟ ತಾಳಲಾರದೆ ತಂದೆ ಮನೆಯಿಂದ 4.5 ಲಕ್ಷ ರೂ. ತಂದುಕೊಟ್ಟಿದ್ದಳು. ಇಷ್ಟಾದರು ಹಣದ ದಾಹ ಕಡಿಮೆಯಾಗದೆ ಮತ್ತೆ ಬೇಡಿಕೆ ಇಟ್ಟಿದ್ದರು.

ಇದೇ ವಿಚಾರಕ್ಕೆ ಕುಮಾರ್ ಕುಟುಂಬಸ್ಥರುಆಗಾಗ ಜಗಳ ತೆಗೆದು ರಮ್ಯಾಗೆ ಕಿರುಕುಳ ನೀಡುತ್ತಿದ್ದರಂತೆ. ನಿನ್ನೆ (ಡಿ.31/2022) ಗಂಡ ಹಾಗೂ ಆತನ ಮನೆಯವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ರಮ್ಯ ಆತ್ಮಹತ್ಯೆ ಮಾಡಿಕೊಂಡಿಲ್ಲ ಗಂಡ ಹಾಗೂ ಆತನ ಕುಟುಂಬಸ್ಥರು ಕೊಲೆಗೈದು ನೇಣುಹಾಕಿದ್ದಾರೆಂದು ರಮ್ಯಾ ತಂದೆ ಯೋಗೇಶ್ ಹಲಗೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.