ಪ್ರವಾಹದಿಂದ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಸಂಭ್ರಮಿಸಿದ್ದಾರೆ, ಈ ಜನ್ಮದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಂದಾಗಲ್ಲ -ಆರ್.ಅಶೋಕ್

ಪ್ರವಾಹದ ವೇಳೆ ಸಿದ್ದರಾಮಯ್ಯ ಬರ್ತಡೇ ಆಚರಿಸಿಕೊಂಡರು. ರಾಜ್ಯದ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಸಂಭ್ರಮಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಹತ್ಯೆ ಹಿನ್ನೆಲೆ ಒಂದು ವರ್ಷದ ಸಾಧನಾ ಸಮಾವೇಶ ರದ್ದು ಮಾಡಿದ್ದೆವು.

ಪ್ರವಾಹದಿಂದ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಸಂಭ್ರಮಿಸಿದ್ದಾರೆ, ಈ ಜನ್ಮದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಂದಾಗಲ್ಲ -ಆರ್.ಅಶೋಕ್
ಕಂದಾಯ ಸಚಿವ ಆರ್.ಅಶೋಕ
Follow us
TV9 Web
| Updated By: ಆಯೇಷಾ ಬಾನು

Updated on:Aug 04, 2022 | 5:52 PM

ಮಂಡ್ಯ: ಜಿಲ್ಲೆಯಲ್ಲಿ ಭಾರಿ ಮಳೆಯಿಂದ(Karnataka Rains) ಅವಾಂತರಗಳು ಸೃಷ್ಟಿಯಾದ ಹಿನ್ನೆಲೆ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್(R Ashok) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ(Siddaramaiah) ಬರ್ತಡೇ ಆಚರಿಸಿಕೊಂಡ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಸಂಭ್ರಮಿಸಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಮಳೆಯಿಂದ 64 ಜನರು ಸಾವು

ಇನ್ನು ಮಂಡ್ಯದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಆರ್.ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಜೂನ್‌ 1ರಿಂದ ಆ.4ರವರೆಗೆ ಮಳೆಯಿಂದ 64 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮಳೆಯಿಂದ 14 ಜಿಲ್ಲೆಗಳಲ್ಲಿ ತೊಂದರೆಯಾಗಿದೆ. 1,4,956 ಜನರು ಪ್ರವಾಹ ಪೀಡಿತರಾಗಿದ್ದಾರೆ. 608 ಮನೆ ಸಂಪೂರ್ಣ ಹಾನಿ, 2,450 ಮನೆ ಭಾಗಶಃ ಹಾನಿಯಾಗಿದೆ. ಈವರೆಗೆ 8,057 ಜನರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 6,933 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ 1,8,280 ಹೆಕ್ಟೇರ್ ಕೃಷಿ ಜಮೀನು ಹಾನಿಯಾಗಿದೆ. 4,500 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. 1,392 ಕಿ.ಮೀ. ರಸ್ತೆ ಹಾನಿ, 61 ಕೆರೆಗಳಿಗೆ ಹಾನಿಯಾಗಿದೆ. 299 ಸೇತುವೆ ಹಾಗೂ 4,224 ಶಾಲೆಗಳಿಗೆ ತೊಂದರೆಯಾಗಿದೆ ಎಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಸಚಿವ R.ಅಶೋಕ್‌ ಮಾಹಿತಿ ನೀಡಿದ್ರು.

ರಾಹುಲ್ ಗಾಂಧಿ ಹೇಳಿದ ಪಾಠದಂತೆ ಅವರು ನಟಿಸಿದ್ದಾರೆ

ಇದೇ ವೇಳೆ ಸಚಿವ ಅಶೋಕ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರವಾಹದ ವೇಳೆ ಸಿದ್ದರಾಮಯ್ಯ ಬರ್ತಡೇ ಆಚರಿಸಿಕೊಂಡರು. ರಾಜ್ಯದ ಜನ ಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ ಸಂಭ್ರಮಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಹತ್ಯೆ ಹಿನ್ನೆಲೆ ಒಂದು ವರ್ಷದ ಸಾಧನಾ ಸಮಾವೇಶ ರದ್ದು ಮಾಡಿದ್ದೆವು. ಜನರ ಪರ ಇರುವವರು ಯಾರೆಂದು ಇದರಿಂದಲೇ ಗೊತ್ತಾಗುತ್ತೆ. ಜನರನ್ನು ಸೇರಿಸುವುದು ಹೇಗೆಂದು ಎಲ್ಲಾ ಪಕ್ಷಗಳಿಗೂ ಗೊತ್ತಿದೆ. ಈ ಜನ್ಮದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಒಂದಾಗಲ್ಲ. ಈ ಜನ್ಮದಲ್ಲಿ ಇಬ್ಬರು ನಾಯಕರು ಹಾವು ಮುಂಗುಸಿಗಳು.

ಕುಮಾರಸ್ವಾಮಿ ಅವರ ಜೊತೆಗೆ ಕೈಎತ್ತಿ ಜೋಡೆತ್ತು ಎಂದಿದ್ದರು. ಈಗ ಏನಾಗಿದೆ ಕುಮಾರಸ್ವಾಮಿಯವರ ಕಥೆ? ಮುಂದೆ ಸಿದ್ದರಾಮಯ್ಯನವರ ಕಥೆಯೂ ಹಾಗೇ ಆಗಲಿದೆ. ಸಿದ್ದರಾಮಯ್ಯ & ಡಿಕೆಶಿ ಅವರದ್ದು ಬಲಬಂತದ ಆಲಿಂಗನ. ರಾಹುಲ್ ಗಾಂಧಿ ಹೇಳಿದ ಪಾಠದಂತೆ ಅವರು ನಟಿಸಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.

ನರೇಂದ್ರ ಮೋದಿ ಎದುರು ಕಾಂಗ್ರೆಸ್ಸಿಗರ ಆಟ ನಡೆಯಲ್ಲ. ಮೋದಿ ಹೆಸರು ಹೇಳಿಕೊಳ್ಳಲು ನಮಗೆ ಹಿಂಜರಿಕೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನಮ್ಮ ಪಕ್ಷದ ನಾಯಕರು. ಬಿಜೆಪಿಗೆ ನಾಯಕತ್ವದ ಸಮಸ್ಯೆ ಇಲ್ಲ. ನಾಯಕತ್ವದ ಸಮಸ್ಯೆ ಇರುವುದು ಕಾಂಗ್ರೆಸ್‌ ಪಕ್ಷದಲ್ಲಿ. ಕಾಂಗ್ರೆಸ್ನವರು ಇಂದಿರಾ ಗಾಂಧಿ ಜಪ ಮಾಡುತ್ತಿದ್ದರು. ಆಗ ಕಾಂಗ್ರೆಸ್ ನಾಯಕರಿಗೆ ನಾವು ಏನೂ ಅಂದಿಲ್ಲ ಎಂದರು.

Published On - 5:52 pm, Thu, 4 August 22