ಪತ್ನಿ ಚಿನ್ನ ಬಚ್ಚಿಟ್ಟ ರಾಗಿ ಮೂಟೆ ಮಾರಾಟ ಮಾಡಿದ ಪತಿ, ನಾಲ್ಕು ಲಕ್ಷದ ಚಿನ್ನಾಭರಣ ಹಿಂದಿರುಗಿಸಿದ ಮಂಡ್ಯದ ರೈಸ್ ಮಿಲ್ ಮಾಲೀಕ
ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಇಂತಹದೊಂದು ಅಪರೂಪದ ಮಾನವೀಯ ಘಟನೆ ನಡೆದಿದೆ. ಹಣ ಅಂದ್ರೆ ಹೆಣನೂ ಬಾಯಿ ಬಿಡುವ ಇಂತಹ ಯುಗದಲ್ಲಿ ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ರಾಗಿ ಮೂಟೆಯಲ್ಲಿ ತನಗೆ ಸಿಕ್ಕ 4 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ಹಿಂದಿರುಗಿಸಿದ್ದಾರೆ.
ಮಂಡ್ಯ: ತಾಯಂದಿರು ಸಾಸಿವೆ ಡಬ್ಬ, ಅಕ್ಕಿ ಡಬ್ಬಗಳಲ್ಲಿ ದುಡ್ಡನ್ನು ಕೂಡಿಟ್ಟು ಮಕ್ಕಳಿಗೆ ಕೊಡ್ತಿದದನ್ನು ನೋಡಿರ್ತೀರಿ. ಆದ್ರೆ ಇಲ್ಲಿ ಮಹಿಳೆಯೊಬ್ಬರು ರಾಗಿ ಮೂಟೆಯಲ್ಲಿ ಚಿನ್ನ ಬಚ್ಚಿಟ್ಟಿದ್ದು ಇದನ್ನು ತಿಳಿಯದ ಪತಿ ರಾಗಿ ಮೂಟೆಯನ್ನು ಮಾರಿದ್ದಾರೆ. ಸದ್ಯ ರಾಗಿ ಮೂಟೆ ಖರೀದಿಸಿದ ವ್ಯಕ್ತಿ ಸಿಕ್ಕ ಚಿನ್ನವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ಇಂತಹದೊಂದು ಅಪರೂಪದ ಮಾನವೀಯ ಘಟನೆ ನಡೆದಿದೆ. ಹಣ ಅಂದ್ರೆ ಹೆಣನೂ ಬಾಯಿ ಬಿಡುವ ಇಂತಹ ಯುಗದಲ್ಲಿ ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ರಾಗಿ ಮೂಟೆಯಲ್ಲಿ ತನಗೆ ಸಿಕ್ಕ 4 ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ಹಿಂದಿರುಗಿಸಿದ್ದಾರೆ. 11 ದಿನಗಳ ಬಳಿಕ ಚಿನ್ನಾಭರಣ ಬಡ ರೈತ ಕುಟುಂಬದ ಕೈ ಸೇರಿದೆ.
ನಾಗಮಂಗಲ ತಾಲೂಕಿನ ಕಲ್ಲಿನಾಥಪುರದ ಲಕ್ಷ್ಮಮ್ಮ ಕಳ್ಳರಿಗೆ ಹೆದರಿ ರಾಗಿ ಮೂಟೆಯಲ್ಲಿ ಆಭರಣ ಬಚ್ಚಿಟ್ಟಿದ್ದರು. ರಾಗಿ ಮೂಟೆಯಲ್ಲಿ ಆಭರಣ ಬಚ್ಟಿಟ್ಟು ಬೆಂಗಳೂರಿನ ಮಗಳ ಮನೆಗೆ ತೆರಳಿದ್ದರು. ಅತ್ತ ಲಕ್ಷ್ಮಮ್ಮ ಬೆಂಗಳೂರಿಗೆ ಹೋಗ್ತಿದ್ದಂತೆ ಇತ್ತ ಪತಿ ಕಲ್ಲೇಗೌಡ ರಾಗಿ ಮಾರಾಟ ಮಾಡಿದ್ದಾರೆ. ರಾಗಿ ಖರೀದಿಸಿದ್ದ ವ್ಯಾಪಾರಿಯೊಬ್ಬ ಒಂದಿಷ್ಟು ಲಾಭಕ್ಕೆ ಬಸರಾಳು ಗ್ರಾಮದ ರೈಸ್ ಮಿಲ್ಗೆ ರಾಗಿ ಮೂಟೆ ಮಾರಿದ್ದ. ಬಳಿಕ ಬಸರಾಳಿನ ಶ್ರೀನಿವಾಸ ಬಿನ್ನಿ ರೈಸ್ ಮಿಲ್ಗೆ ಮಾರಾಟ ಮಾಡಿದ್ದಾರೆ. ಒಂದು ಚೀಲದಿಂದ ಮತ್ತೊಂದು ಚೀಲಕ್ಕೆ ರಾಗಿ ತುಂಬುವಾಗ ಚಿನ್ನವಿದ್ದ ಪರ್ಸ್ ಸಿಕ್ಕಿದೆ. ಪರ್ಸ್ನಲ್ಲಿ ಚಿನ್ನಾಭರಣದ ಜೊತೆ ಸಿಕ್ಕ ಚೀಟಿಯಿಂದ ಅಡ್ರೆಸ್ ಪತ್ತೆಯಾಗಿದೆ.
11 ದಿನದ ಬಳಿಕ ಅರಿವಿಗೆ ಬಾರದೇ ಚಿನ್ನ ಕಳೆದುಕೊಂಡಿದ್ದ ರೈತ ದಂಪತಿಗೆ ಚಿನ್ನ ವಾಪಸ್ ಸಿಕ್ಕಿದೆ. ಅಡ್ರೆಸ್ ಪತ್ತೆ ಹಚ್ಚಿ ಬ್ರೇಸ್‌ಲೆಟ್, ಮಾಂಗಲ್ಯ ಸರ, ಮುತ್ತಿನ ಓಲೆ ಸೇರಿ 4 ಲಕ್ಷ ಮೌಲ್ಯದ ಒಡವೆಯನ್ನು ತಿಮ್ಮೇಗೌಡ ಮರಳಿಸಿದ್ದಾರೆ.
ಇದನ್ನೂ ಓದಿ: Shocking Video: ರಸ್ತೆಯ ಮಧ್ಯದಲ್ಲಿ ಬೈಕ್ ಸವಾರ ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ವಿಡಿಯೊ ನೋಡಿ