ಮತ್ತೆ ಬಾಲ ಬಿಚ್ಚಿದ ನಿಷೇಧಿತ ಪಿಎಫ್​ಐ ಸಂಘಟನೆ ಸದಸ್ಯರು: ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿಗೆ ಜೀವ ಬೆದರಿಕೆ

ನಿಷೇಧಿತ ಪಿಎಫ್​ಐ ಸಂಘಟನೆ ಸದಸ್ಯರು ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿಜಿಗೆ ಜೀವ ಬೆದರಿಕೆ ಹಾಕಿರುವಂತಹ ಘಟನೆ ನಡೆದಿದೆ.

ಮತ್ತೆ ಬಾಲ ಬಿಚ್ಚಿದ ನಿಷೇಧಿತ ಪಿಎಫ್​ಐ ಸಂಘಟನೆ ಸದಸ್ಯರು: ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿಗೆ ಜೀವ ಬೆದರಿಕೆ
ಯತಿರಾಜರಾಮಾನುಜ ಜೀಯರ್ ಸ್ವಾಮೀಜಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 08, 2023 | 9:58 PM

ಮಂಡ್ಯ: ನಿಷೇಧಿತ ಪಿಎಫ್​ಐ (PFI) ಸಂಘಟನೆ ಸದಸ್ಯರು ಮೇಲುಕೋಟೆಯ ಯದುಗಿರಿ ಮಠದ ಪೀಠಾಧಿಪತಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿಗೆ ಜೀವ ಬೆದರಿಕೆ ಹಾಕಿರುವಂತಹ ಘಟನೆ ನಡೆದಿದೆ. ಜಮ್ಮು-ಕಾಶ್ಮೀರದಲ್ಲಿ ರಾಮಾನುಜಚಾರ್ಯ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆ ಇಂಟರ್​ನೆಟ್ ಕರೆ ಮಾಡಿದ ದುಷ್ಕರ್ಮಿಗಳು ಬೆದರಿಕೆ ಹಾಕುತ್ತಿದ್ದಾರೆ. ಜೀವ ಬೆದರಿಕೆ ಕರೆ ಬಂದ ಹಿನ್ನೆಲೆ ಕೇಂದ್ರ ಗೃಹ ಇಲಾಖೆ ಸ್ವಾಮೀಜಿಗೆ ವೈ ಕೆಟಗರಿ ಭದ್ರತೆ ನೀಡಿದೆ. ಬೆಂಗಳೂರಿನ ಮಲ್ಲೇಶ್ವರಂ ಶಾಖಾ ಮಠದಲ್ಲಿ ಸ್ವಾಮೀಜಿ ವಾಸ್ತವ್ಯ ಹೊಡಿದ್ದಾರೆ.

ಅವರಿಗೆ ನಿರಂತರ ಬೆದರಿಕೆ ಬರ್ತಾ ಇತ್ತು: ಶಿಷ್ಯ ರಘುನಂದನ್

ಯತಿರಾಜ ಮಠ ಸ್ವಾಮೀಜಿಗೆ ಬೆದರಿಕೆ ಹಿನ್ನಲೆ ಸ್ವಾಮೀಜಿ ಮಠ ಶಿಷ್ಯ ರಘುನಂದನ್ ಹೇಳಿಕೆ ನೀಡಿದ್ದು, ಸ್ವಾಮೀಜಿ ಎಲ್ಲಾ ಕಡೆ ಸಂಚಾರ ಮಾಡ್ತಾರೆ. ಅವರಿಗೆ ನಿರಂತರ ಬೆದರಿಕೆ ಬರ್ತಾ ಇತ್ತು. ಗೃಹ ಇಲಾಖೆಗೆ ನಾವು ಮನವಿ ಮಾಡಿದ್ದೇವು. ಇಂದು ಗೃಹ ಇಲಾಖೆ ವೈ ಕ್ಯಾಟಗರಿ ಭದ್ರತೆಗೆ ಆದೇಶ ಮಾಡಿದ್ದಾರೆ. ಸ್ವಾಮೀಜಿ ಅಯೋಧ್ಯೆ, ಶ್ರೀನಗರ, ತಮಿಳುನಾಡು, ಬೆಂಗಳೂರಿನ ಮಠಗಳಿಗೆ ಭೇಟಿ ನೀಡ್ತಾರೆ. ಹೀಗಾಗಿ ಭದ್ರತೆ ಅವಶ್ಯಕತೆ ಇತ್ತು ಎಂದು ಹೇಳಿದರು.

ಮಠದ ಟ್ರಸ್ಟಿ ಸುಜೇಂದ್ರ ಸ್ಪಷ್ಟನೆ 

ಇನ್ನು ಮಠದ ಟ್ರಸ್ಟಿ ಸುಜೇಂದ್ರ ಪ್ರತಿಕ್ರಿಯೆ ನೀಡಿ, ಶ್ರೀಗಳಿಗೆ ವೈ ಕ್ಯಾಟಗರಿ ಭದ್ರತೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಸ್ವಾಮೀಜಿಗೆ ಥ್ರೇಟ್ ಇತ್ತು ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದೇವು. ಇದರಿಂದ ಕೇಂದ್ರದಿಂದ ವೈ ಶ್ರೇಣಿ ಭದ್ರತೆ ನೀಡಲಾಗಿದೆ. ಶ್ರೀನಗರದಲ್ಲಿ ರಾಮಾನುಜ ಪ್ರತಿಮೆ ಸ್ಥಾಪಿಸಿದ್ರು. ಅಪರಿಚಿತ ನಂಬರ್​ನಿಂದ ಮಠಕ್ಕೆ ಸಂಬಂಧಪಟ್ಟ ಮೊಬೈಲ್​ಗೆ ಕರೆ ಬರುತ್ತಿತ್ತು. 1 ವಾರದಿಂದ ಕರೆ ಬರುತ್ತಿದ್ದ ಹಿನ್ನಲೆ ಮನವಿ ಮಾಡಿದ್ದೇವು ಭದ್ರತೆ ನೀಡಿದ್ದಾರೆ. ಸದ್ಯ ಮಲ್ಲೇಶ್ವರಂ ನ ಸಂಪಿಗೆ ರಸ್ತೆಯ ಶ್ರೀಯದುಗಿರಿ ಯತಿರಾಜ ಮಠದಲ್ಲಿ ಶ್ರೀಗಳು ವಾಸ್ತವ್ಯದಲ್ಲಿದ್ದಾರೆ ಎಂದು ಹೇಳಿದರು.

ರಸ್ತೆ ಮೇಲೆ ಬರೆದು RSSಗೆ ವಾರ್ನಿಂಗ್ ಕೊಟ್ಟ ಪಿಎಫ್​ಐ

ಬಂಟ್ವಾಳ: ದೇಶದ ಅನೇಕ ಕಡೆ ದಾಳಿ ನಡೆಸಿ ಪಿಎಫ್​ಐ ಮುಖಂಡರನ್ನು ಬಂಧಿಸಲಾಗಿದ್ದು ದಿನದಿಂದ ದಿನಕ್ಕೆ ಪಿಎಫ್​ಐ ಸಂಬಂಧ ಅನೇಕ ಸಂಗತಿಗಳು ಬಹಿರಂಗವಾಗುತ್ತಿದೆ. ಇದರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಎಫ್​ಐ ಸಂಘಟನೆ ಪರವಾಗಿ ಕೆಲ ಕಿಡಿಗೇಡಿಗಳು RSSಗೆ ವಾರ್ನಿಂಗ್​ ಕೊಟ್ಟಿದ್ದಾರೆ. ಚಡ್ಡಿಗಳೇ ಎಚ್ಚರ, ನಾವು ಮರಳಿ ಬರುತ್ತೇವೆ ಎಂದು ಕೆಲ ಕಿಡಿಗೇಡಿಗಳು ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ರಸ್ತೆ ಮೇಲೆ ಬರದು ಆರ್​ಎಸ್​ಎಸ್​ಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: PFI Banned: ಪಿಎಫ್​ಐ ಹಾಗೂ ಅದರ ಅಂಗ ಸಂಸ್ಥೆಗಳ ನಿಷೇಧಕ್ಕೆ 15 ಕಾರಣಗಳು

ಈ ಕುರಿತು ಸ್ಥಳೀಯರು ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ್ದಾರೆ. ಬಂಟ್ವಾಳ ಭಾಗದಲ್ಲಿ ಪಿಎಫ್ಐ ಸಂಘಟನೆ ಸಕ್ರಿಯವಾಗಿತ್ತು. ಪಿಎಫ್​ಐನಲ್ಲಿ ಸಕ್ರಿಯವಾಗಿದ್ದವರೇ ಎಚ್ಚರಿಕೆ ಬರಹ ಬರೆದಿರೋ ಮಾಹಿತಿ ಇದ್ದು ಸ್ಪ್ರೇ ಪೈಂಟ್ ಬಳಸಿ ತಡರಾತ್ರಿ ರಸ್ತೆಯಲ್ಲಿ ಬರಹ ಬರೆಯಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಫ್​ಐ ಸಂಘಟನೆ ಬ್ಯಾನ್​ಗೆ ಸಿಎಂ ಇಬ್ರಾಹಿಂ ತೀವ್ರ ವಿರೋಧ; ಬಿಜೆಪಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಇಬ್ರಾಹಿಂ

ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಪಿಎಫ್​ಐ ಸಂಚು

ಪಿಎಫ್ಐ ದೇಶದ್ರೋಹಿ ಸಂಘಟನೆಯಾಗಿದ್ದು, ಮುಂಬೈ ದಾಳಿ ಮಾದರಿಯಲ್ಲಿ ಅಯೋಧ್ಯೆ ರಾಮಮಂದಿರ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ವಿಧ್ವಂಸಕ ಕೃತ್ಯ ಮಾಡುವ ಪಿಎಫ್​ಐನ ಷಡ್ಯಂತ್ರ ಬಯಲಾಗಿದೆ. ಭಾರತದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Wed, 8 February 23