ಹಳೇ ವೈಷ್ಯಮ್ಯಕ್ಕೆ ಕತ್ತು ಕುಯ್ದು ಯುವಕನ ಬರ್ಬರ ಹತ್ಯೆ: ತಲೆ ಮರೆಸಿಕೊಂಡ ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸ್
ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಹಾಸನದ ರವೀಂದ್ರನಗರದಲ್ಲಿ ಸಿವಿಲ್ ಗುತ್ತಿಗೆದಾರ ಜ್ಞಾನೇಶ್ ಬಂಧಿತ.
ಮಂಡ್ಯ: ಹಳೇ ವೈಷ್ಯಮ್ಯಕ್ಕೆ ಕತ್ತು ಕುಯ್ದು ಯುವಕನ ಹತ್ಯೆ (brutal murder) ಮಾಡಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ನೀಲನಹಳ್ಳಿಯಲ್ಲಿ ನಡೆದಿದೆ. ಹತ್ಯೆಯಿಂದ ಬೆಳ್ಳಂಬೆಳಗ್ಗೆ ಮಂಡ್ಯ ಜನರು ಬೆಚ್ಚಿಬಿದಿದ್ದಾರೆ. ಲಕ್ಷ್ಮೀಸಾಗರ ಗ್ರಾಮದ ಧನಂಜಯ(26)ಕೊಲೆಯಾದ ಯುವಕ. ಪಾಂಡವಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಧನಂಜಯ. ರೌಡಿಶೀಟರ್ ರೋಹಿತ್ ಹಾಗೂ ಆತನ ಸಹಚರರಿಂದ ಕೃತ್ಯವೆಸಗಲಾಗಿದೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಮೇಲುಕೋಟೆ ಪೊಲೀಸರ ಭೇಟಿ, ಸ್ಥಳ ಪರಿಶೀಲನೆ ಮಾಡಿದ್ದು, ತಲೆ ಮರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ. ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಲೋಕಾಯುಕ್ತ ಅಧಿಕಾರಿಯ ಬಂಧನ
ಚಿಕ್ಕಬಳ್ಳಾಪುರ: ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಹಾಸನದ ರವೀಂದ್ರನಗರದಲ್ಲಿ ಸಿವಿಲ್ ಗುತ್ತಿಗೆದಾರ ಜ್ಞಾನೇಶ್ ಬಂಧಿತ. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಠಾಣೆಗೆ ದೂರು ನೀಡಿದ್ದರು. ಲೋಕಾಯುಕ್ತ ಎಂದು ತಹಶೀಲ್ದಾರ್ ಕಚೇರಿಗೆ H.T.ಜ್ಞಾನೇಶ್ ನುಗ್ಗಿದ್ದ. ಸೆ.22ರಂದು ಕಚೇರಿಗೆ ನುಗ್ಗಿ ವಿವಾದಿತ ಜಮೀನಿನ ದಾಖಲೆ ಪರಿಶೀಲನೆ ಮಾಡಿದ್ದು, ಲೋಕಾಯುಕ್ತ ಗುರುತು ಕೇಳ್ತಿದ್ದಂತೆ ಜ್ಞಾನೇಶ್ ಪರಾರಿಯಾಗಿದ್ದಾನೆ.
ಪೊಲೀಸ್ರಿಂದ ಗಾಂಜಾ ಪೆಡ್ಲರ್ ಬಂಧನ:
ನೆಲಮಂಗಲ: ನೆಲಮಂಗಲ ಗ್ರಾಮಾಂತರ ಪೊಲೀಸ್ರಿಂದ ಹೆದ್ದಾರಿ ಪಕ್ಕದ ಡಾಬಾ ಬಳಿ ಲಾರಿ ಚಾಲಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಗಾಂಜಾ ಪೆಡ್ಲರ್ನನ್ನು ಬಂಧನ ಮಾಡಲಾಗಿದೆ. ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಆನಂದ್ ನಗರ ಬಳಿ ಬಂಧನ ಮಾಡಲಾಗಿದೆ. ನೆಲಮಂಗಲದ ಇಸ್ಲಾಂಪುರ ಮೂಲದ ಅಲ್ತಮಶ್ ಶರೀಫ್ (22) ಬಂಧಿತ ಆರೋಪಿ. ಸುಮಾರು ಒಂದುಕಾಲು ಕೆಜಿಯಷ್ಟು ಗಾಂಜಾ, ಡಿಯೋ ಸ್ಕೂಟಿ ಜಪ್ತಿ ಮಾಡಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ 4 ಬೈಕ್ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗಾರ್ಮೇಂಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅನುಮಾನಸ್ಪದ ಸಾವು
ಶಿವಮೊಗ್ಗ: ಮಾಚೇನಹಳ್ಳಿ ಕೈಗಾರಿಕೆಯ ಪ್ರದೇಶದ ಶಾಹಿ ಗಾರ್ಮೇಂಟ್ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿ ಲೀಲಾಧರ್ (45) ಅನುಮಾನಸ್ಪದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೆ. 28 ರಂದು ಕೈಗಾರಿಕೆಯ ಪ್ರದೇಶದ ಬಳಿ ರೂಂನಲ್ಲಿ ಘಟನೆ ನಡೆದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ. ಯುಪಿಯಿಂದ ಬಂದ ಪತ್ನಿ ಮತ್ತು ಸಂಬಂಧಿಕರು ಆಗಮಿಸಿದ್ದು, ಶವ ಯುಪಿಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ಪರದಾಡಿದ್ದಾರೆ. ಶಾಹಿ ಕಂಪನಿಯ ಅಧಿಕಾರಿಗಳು ಶವ ತೆಗೆದುಕೊಂಡು ಹೋಗಲು ವ್ಯವಸ್ಥೆಗೆ ನಿರಾಕರಿಸಿದ್ದಾರೆ. ಗ್ರಾಮಾಂತರ ಪೊಲೀಸ ಠಾಣೆ ಎದುರು ಮೃತನ ಪತ್ನಿ ಕಣ್ಣೀರು ಹಾಕಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಮೃತನ ಶವ ರವಾನೆ ವ್ಯವಸ್ಥೆಗೆ ಪತ್ನಿಯ ಒತ್ತಾಯ ಮಾಡಿದ್ದು, ಜವಾಬ್ದಾರಿಯಿಂದ ಶಾಹಿ ಗಾರ್ಮೇಂಟ್ಸ್ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.