AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದ್ದ ರಿವಾಲ್ವರ್ ತೋರಿಸಿ ಸಾಲು ಸಾಲು ದರೋಡೆ; ಮಂಗಳೂರು ಪೊಲೀಸರ ಬಲೆಗೆ ಬಿತ್ತು ಕರ್ನಾಟಕದ ಅತಿ ದೊಡ್ಡ ಕಳ್ಳರ ತಂಡ

2020 ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಹಳ್ಳಿಯಲ್ಲಿ ಮನೆಗೆ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರ ಗುಂಪೊಂದು ಬುಲೆಟ್​ಗಳ ಸಮೇತ ಲೈಸೆನ್ಸ್ ಇರುವ ಪಿಸ್ತೂಲ್ ಅನ್ನು ಎಗರಿಸಿತ್ತು. ಈ ರಿವಾಲ್ವಾರ್ ಅನ್ನೇ ಬಂಡವಾಳವಾಗಿಸಿಕೊಂಡ ಕಳ್ಳರ ತಂಡ ಹೆದ್ದಾರಿ, ಮನೆ ದರೋಡೆ ಹೀಗೆ ಸಾಕಷ್ಟು ಕೃತ್ಯಗಳನ್ನು ಎಸಗಿತ್ತು.

ಕದ್ದ ರಿವಾಲ್ವರ್ ತೋರಿಸಿ ಸಾಲು ಸಾಲು ದರೋಡೆ; ಮಂಗಳೂರು ಪೊಲೀಸರ ಬಲೆಗೆ ಬಿತ್ತು ಕರ್ನಾಟಕದ ಅತಿ ದೊಡ್ಡ ಕಳ್ಳರ ತಂಡ
ಪೊಲೀಸರಿಂದ ದರೋಡೆಕೊರರ ಬಂಧನ
preethi shettigar
| Updated By: Skanda|

Updated on: Apr 17, 2021 | 2:21 PM

Share

ದಕ್ಷಿಣ ಕನ್ನಡ; ಕಳ್ಳತನ ಮಾಡಿದ ರಿವಾಲ್ವರ್ ತೋರಿಸಿ ದರೋಡೆ ಮಾಡುತ್ತಿದ್ದವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 2020 ರಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಅರೆಹಳ್ಳಿಯಲ್ಲಿ ಮನೆಗೆ ಕಳ್ಳತನ ಮಾಡಲು ನುಗ್ಗಿದ್ದ ಕಳ್ಳರ ಗುಂಪೊಂದು ಬುಲೆಟ್​ಗಳ ಸಮೇತ ಲೈಸೆನ್ಸ್ ಇರುವ ಪಿಸ್ತೂಲ್ ಅನ್ನು ಎಗರಿಸಿತ್ತು. ಈ ರಿವಾಲ್ವಾರ್ ಅನ್ನೇ ಬಂಡವಾಳವಾಗಿಸಿಕೊಂಡ ಕಳ್ಳರ ತಂಡ ಹೈವೇ, ಮನೆ ದರೋಡೆ ಹೀಗೆ ಸಾಕಷ್ಟು ಕೃತ್ಯಗಳನ್ನು ಎಸಗಿತ್ತು. ಒಂದು ರಿವಲ್ವರ್ ಬಲದಿಂದ ನಾಲ್ಕೈದು ಜನರ ತಂಡ 50 ಕ್ಕೂ ಹೆಚ್ಚು ಜನರ ದರೋಡೆ ಗುಂಪಾಗಿ ಮಾರ್ಪಟ್ಟಿತ್ತು.

ನಾಲ್ಕು ತಂಡಗಳಾಗಿ ಕಳ್ಳತನಕ್ಕೆ ಇಳಿಯುತ್ತಿದ್ದ ಇವರು ಹೆದ್ದಾರಿ ದರೋಡೆ, ಮನೆ ದರೋಡೆ, ಕಳ್ಳತನ ಸೇರಿದಂತೆ ವಿವಿಧ ಕೃತ್ಯದಲ್ಲಿ ತೊಡಗಿದ್ದರು. ಇನ್ನು ಕಳ್ಳತನ ಮಾಡುವಾಗ ಯಾರಾದರೂ ಅಡ್ಡ ಬಂದರೆ ಅಮಾನವೀಯವಾಗಿ ಅವರ ಮೇಲೆ ಆಕ್ರಮಣ ಮಾಡುತ್ತಿದ್ದರು. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ ಸೇರಿದಂತೆ ಮಂಗಳೂರಿನ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿದ್ದವು. ಆದರೆ ಸದ್ಯ ಮಂಗಳೂರು ಪೊಲೀಸರು ಒಟ್ಟು 28 ಪೊಲೀಸ್ ಠಾಣೆಗಳಿಗೆ ಬೇಕಾದ ಈ ಕಳ್ಳರ ಗುಂಪನ್ನು ಬಂಧಿಸಿದ್ದಾರೆ.

ಏಪ್ರಿಲ್ 2 ರಂದು 50 ಜನರ ಪೈಕಿ 9 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಮುಂದುವರೆದಂತೆ ಈಗ ಮತ್ತೆ 6 ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಅರೇಹಳ್ಳಿ ಮನೆಯಲ್ಲಿ ಪಿಸ್ತೂಲ್ ಕದ್ದಿದ್ದ ಬೋಳಿಯಾರ್ ಮನ್ಸೂರ್​ನನ್ನು ಕೂಡ ಬಂಧಿಸಲಾಗಿದೆ. ಈ ತಂಡದ ಕಿಂಗ್​ಪಿನ್​ಗಳಾದ ಮೊಹಮ್ಮದ್ ಝುಬೈರ್, ಇಬ್ರಾಹಿಂ ಲತೀಫ್, ರಾಕೇಶ್, ಅರ್ಜುನ್ ಮತ್ತು ಮೋಹನ್​ರನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಂದ ಚಿನ್ನ, ಬೆಳ್ಳಿ, ಕಾರು, ಮೊಬೈಲ್ ಸೇರಿದಂತೆ 41.82 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಇನ್ನು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಮಾರಕಾಸ್ತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:

ಚಿಕ್ಕಬಳ್ಳಾಪುರದ ಶ್ರೀ ಭೋಗನಂದೀಶ್ವರ ಸ್ವಾಮಿ ಕ್ಷೇತ್ರದಲ್ಲಿ ಕಳ್ಳತನ; ನಂದಿ ವಿಗ್ರಹದ ಬಲಗಾಲು ಮುರಿದು ಪರಾರಿಯಾದ ಕಳ್ಳರು

ಮಂಗಳೂರಿನಲ್ಲಿ ದರೋಡೆ ಕೇಸ್​ಗಳು ಹೆಚ್ಚುತ್ತಿವೆ, ರಾತ್ರಿ ಮನೆಯಲ್ಲಿ ಮಲಗಲೂ ಭಯವಾಗುತ್ತದೆ: ಯು.ಟಿ.ಖಾದರ್

(Mangaluru police arrested highway robbery gang)