Dr K. Sudhakar: ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಡಾ. ಕೆ.ಸುಧಾಕರ್; ನಾಲ್ಕು ಜನರಿಗೆ ಸ್ಫೂರ್ತಿಯಾಗುವ ನೈಜ ಕಥೆ ಇದು ಎಂದ ಸಚಿವರು
ರಾಜಕೀಯಕ್ಕೆ ಕಾಲಿಟ್ಟ ಮೇಲೆ ಸಿನಿಮಾದಲ್ಲಿ ನಟಿಸುವುದು ತೀರ ವಿರಳ. ಇದೀಗ ಸಚಿವ ಡಾ. ಕೆ.ಸುಧಾಕರ್ (K. Sudhakar) ಅವರು ತನುಜಾ ಎಂಬ Kannada cinema ನಟಿಸುತ್ತಿದ್ದು, ಇದು ನೈಜಕತೆಯನ್ನು ಆಧರಿಸಿದ ಸಿನಿಮಾ ಎಂಬುದು ಇನ್ನೂ ವಿಶೇಷ..
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ( Dr K. Sudhakar) ಸಿನಿಮಾವೊಂದರಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮೂರು ತಾಸುಗಳ ಶೂಟಿಂಗ್ಗೆ ಒಪ್ಪಿಕೊಂಡಿದ್ದಾಗಿ ಸ್ವತಃ ಸಚಿವರೇ ತಿಳಿಸಿದ್ದಾರೆ. ಸಿನಿಮಾದಲ್ಲಿ ನಟನೆ ಮಾಡಿದ ಬಳಿಕ, ರಾಜಕೀಯಕ್ಕೆ ಧುಮುಕಿದವರ ಉದಾಹರಣೆ ಇದೆ. ಆದರೆ ರಾಜಕೀಯಕ್ಕೆ ಕಾಲಿಟ್ಟ ಮೇಲೆ ಸಿನಿಮಾದಲ್ಲಿ ನಟಿಸುವುದು ತೀರ ವಿರಳ. ಇದೀಗ ಸಚಿವರು ತನುಜಾ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇದು ನೈಜಕತೆಯನ್ನು ಆಧರಿಸಿದ ಸಿನಿಮಾ ಎಂಬುದು ಇನ್ನೂ ವಿಶೇಷ.. ಈ ಬಗ್ಗೆ ಟಿವಿ 9 ಕನ್ನಡ ಡಿಜಿಟಲ್, ಡಾ. ಕೆ. ಸುಧಾಕರ್ ಅವರ ಬಳಿ ಪ್ರಶ್ನಿಸಿದಾಗ, ಹೌದು..ನಾನು ಈ ಕನ್ನಡ ಸಿನಿಮಾ (Kannada cinema) ದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಯಾವುದೇ ಕಮರ್ಷಿಯಲ್ ಸಿನಿಮಾ ಅಲ್ಲ, ನಾಲ್ಕು ಜನರಿಗೆ ಸ್ಫೂರ್ತಿಯಾಗುವ ರೀತಿಯಲ್ಲಿ ಇರುವ ಚಲನಚಿತ್ರ ಇದಾಗಿದೆ ಎಂದು ತಿಳಿಸಿದ್ದಾರೆ.
ಏನಿದು ತನುಜಾ ಕತೆ? ನಿಮಗೆ ತನುಜಾ ಎಂಬ ಹುಡುಗಿಯ ಬಗ್ಗೆ ನೆನಪಿರಬಹುದು. ಶಿವಮೊಗ್ಗ ಜಿಲ್ಲೆಯವಳು ಈಕೆ. ಕಳೆದ ಸೆಪ್ಟೆಂಬರ್ನಲ್ಲಿ ಕೊರೊನಾ ಕಾರಣದಿಂದ ನೀಟ್ ಪರೀಕ್ಷೆಗೆ ಹಾಜರಾಗಿರಲಿಲ್ಲ. 2020ರ ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆ ನಡೆದಿತ್ತಾದರೂ ಅದಾಗಲೇ ತನುಜಾರ ಮನೆ ಇರುವ ಪ್ರದೇಶವನ್ನ ಕಂಟೈನ್ಮೆಂಟ್ ವಲಯವನ್ನಾಗಿ ಗುರುತಿಸಲಾಗಿತ್ತು. ಅಷ್ಟೇ ಅಲ್ಲ, ತನುಜಾರಲ್ಲೂ ಕೊರೊನಾ (corona virus) ಲಕ್ಷಣಗಳು ಕಾಣಿಸಿಕೊಂಡಿದ್ದವು.
ಮೊದಲ ಸಲ ಪರೀಕ್ಷೆ ಕೈ ತಪ್ಪಿದ್ದಕ್ಕೆ ಬೇಸರಗೊಂಡಿದ್ದ ತನುಜಾಗೆ, ಎನ್ಟಿಎ ಎರಡನೇ ಬಾರಿಗೆ ನೀಟ್ ಪರೀಕ್ಷೆ ನಡೆಸಲು ಒಪ್ಪಿದಾಗ ತುಂಬ ಖುಷಿಯಾಗಿತ್ತು. ಆದರೆ ಹೀಗೆ ಎರಡನೇ ಬಾರಿ ಪರೀಕ್ಷೆ ಬರೆಯಬೇಕು ಎಂದರೆ ಕೊವಿಡ್-19 ಸಂಬಂಧಿತ ವರದಿ, ದಾಖಲೆಯನ್ನು ಮೇಲ್ ಮಾಡಲು ಎನ್ಟಿಎ ತಿಳಿಸಿತ್ತು. ಆದರೆ ಅಲ್ಲೂ ಸಹ ತನುಜಾರಿಗೆ ಹಿನ್ನಡೆಯಾಗಿತ್ತು. ನೆಟ್ವರ್ಕ್ ಸಮಸ್ಯೆಯಿಂದಾಗಿ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ.
ಈ ವಿಷಯವನ್ನು ತನುಜಾ ನೋವಿನಿಂದ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸುಧಾಕರ್ ಅವರ ಗಮನಕ್ಕೂ ಬಂದು, ಇವರಿಬ್ಬರೂ ಸೇರಿ ಎನ್ಟಿಎ ತಾಂತ್ರಿಕ ನಿರ್ದೇಶಕರ ಜತೆ ಮಾತುಕತೆ ನಡೆಸಿದ್ದರು. ಈ ಮೂಲಕ ತನುಜಾ ನೀಟ್ ಪರೀಕ್ಷೆ ಬರೆದು ಯಶಸ್ವಿಯಾಗಿ ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದರು.
ತನುಜಾ ಅವರು ನೀಟ್ ಪರೀಕ್ಷೆ ಬರೆದಿದ್ದು ಒಂದು ವಿಭಿನ್ನ ಕತೆ. ಇನ್ನು ಈ ಸಿನಿಮಾದಲ್ಲಿ ಡಾ. ಸುಧಾಕರ್ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಕುತೂಹಲ.
ಇದನ್ನೂ ಓದಿ: ಕಠಿಣ ಮನಃಸ್ಥಿತಿಯಲ್ಲಿ ಪರೀಕ್ಷೆ ಬರೆದಿದ್ದ ತನುಜಾಗೆ ಈಗ ಮೆಡಿಕಲ್ ಸೀಟ್ ಕಟ್ಟಿಟ್ಟ ಬುತ್ತಿ
Published On - 3:23 pm, Wed, 10 February 21