ಅಮೆರಿಕ ನೀಡಿದ್ದ ವೈದ್ಯಕೀಯ ಪರಿಕರಗಳು ಕರ್ನಾಟಕಕ್ಕೆ ತಲುಪಿದೆ: ಡಾ.ಕೆ. ಸುಧಾಕರ್ ಮಾಹಿತಿ
2,200 ಕಾನ್ಸಂಟ್ರೇಟರ್, 10,000 ಆಕ್ಸಿಮೀಟರ್ಗಳನ್ನು ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ನೀಡಿತ್ತು. ಆ ಪೈಕಿ 400 ಆಕ್ಸಿಜನ್ ಕಾನ್ಸಂಟ್ರೇಟರ್, 1308 ಪಲ್ಸ್ ಆಕ್ಸಿಮೀಟರ್ನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದವು.
ಬೆಂಗಳೂರು: ಅಮೆರಿಕ ನೀಡಿದ್ದ ವೈದ್ಯಕೀಯ ಪರಿಕರಗಳು ಕರ್ನಾಟಕಕ್ಕೆ ತಲುಪಿವೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 2,200 ಕಾನ್ಸಂಟ್ರೇಟರ್, 10,000 ಆಕ್ಸಿಮೀಟರ್ಗಳನ್ನು ಯುನೈಟೆಡ್ ಸ್ಟೇಟ್ಸ್ ಭಾರತಕ್ಕೆ ನೀಡಿತ್ತು. ಆ ಪೈಕಿ 400 ಆಕ್ಸಿಜನ್ ಕಾನ್ಸಂಟ್ರೇಟರ್, 1308 ಪಲ್ಸ್ ಆಕ್ಸಿಮೀಟರ್ನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದವು. ಅಮೆರಿಕ ನೀಡಿದ್ದ ವೈದ್ಯಕೀಯ ಪರಿಕರಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡಿತ್ತು.
ಇದೀಗ, ವೈದ್ಯಕೀಯ ಪರಿಕರಗಳು ರಾಜ್ಯಕ್ಕೆ ತಲುಪಿರುವ ಬಗ್ಗೆ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
400 Oxygen Concentrators and 1,308 Pulse Oximeters have been allocated to Karnataka out of 2,200 Oxygen Concentrators and 10,000 Oximeters received from @salesforce, USA to India.@MEAIndia @DrSJaishankar#IndiaFightsCOVID19 #Unite2FightCoronahttps://t.co/0nAuqWHzEl
— Dr Sudhakar K (@mla_sudhakar) May 9, 2021
ಕರ್ನಾಟಕದಲ್ಲಿ ಕೊವಿಡ್-19 ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 47,930 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿಂದು ಒಂದೇ ದಿನ ಸೋಂಕಿನಿಂದ 490 ಜನರ ನಿಧನರಾಗಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 20,897 ಜನರಿಗೆ ಸೋಂಕು ಪತ್ತೆಯಾಗಿದ್ದು, 281 ಜನರು ಮೃತಪಟ್ಟಿದ್ದಾರೆ. ಇಂದು ಹೊಸದಾಗಿ ಪತ್ತೆಯಾದ ಕೊರೊನಾ ಪ್ರಕರಣಗಳನ್ನೂ ಸೇರಿಸಿ ರಾಜ್ಯದಲ್ಲಿ ಈವರೆಗಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 19,34,378 ಕ್ಕೆ ಏರಿಕೆಯಾಗಿದೆ. ಇದುವರೆಗೆ ಕರ್ನಾಟಕದಲ್ಲಿ ಕೊರೊನಾದಿಂದ 18,776 ಜನ ಸಾವನ್ನಪ್ಪಿದ್ದಾರೆ. ಇಂದು ಒಂದೇ ದಿನ 31,796 ಜನರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಸೋಂಕಿತರ ಪೈಕಿ 13,51,097 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಸದ್ಯ 5,64,485 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಬೋಳುತಲೆ ಸಮಸ್ಯೆ ಹೊಂದಿರುವ ಪುರುಷರಲ್ಲಿ ಕೊರೊನಾ ವೈರಾಣು ಹೆಚ್ಚು ಪ್ರಭಾವ ಬೀರಬಲ್ಲದು!
ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯಿಂದ ಲಕ್ಷ ಲಕ್ಷ ಲೂಟಿ; ಬಿಲ್ ಫೊಟೊ ವೈರಲ್
Published On - 9:20 pm, Sun, 9 May 21