8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕಂತೆ-ಕಂತೆ ಹಣ, ವಜ್ರ-ವೈಡೂರ್ಯ ಪತ್ತೆ

|

Updated on: Mar 06, 2025 | 7:47 PM

ಲೋಕಾಯಯಕ್ತ ಬೇಟೆಗೆ ಚೀಫ್​ ಇಂಜಿಯರ್​ಗಳಿಗೆ ಶಾಕ್ ಕೊಟ್ಟಿದೆ. ಇಂದು ಬೆಳ್ಳಂಬೆಳಗ್ಗೆ ಗಡದ್​ ನಿದ್ದೆಯಲ್ಲಿದ್ದವರಿಗೆ ಲೋಕಾಯುಕ್ತ ಅಧಿಕಾರಿಗಳು ಚಳಿಬಿಡಿಸಿದ್ದಾರೆ. ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ದಾಳಿ ಮಾಡಿರೋ ಲೋಕಾ ಟೀಂ, ಇಂಚಿಂಚೂ ಜಾಲಾಡಿದೆ. 8 ಅಧಿಕಾರಿಗಳ ಕಚೇರಿ, ನಿವಾಸದಲ್ಲಿ ಶೋಧದ ವೇಳೆ, ಕಂತೆ ಕಂತೆ ಹಣ, ಚಿನ್ನಾಭರಣದ ಖಜಾನೆಯೇ ಪತ್ತೆಯಾಗಿದೆ. ಅಪಾರ ಪ್ರಮಾಣದ ಆಸ್ತಿ, ನಗದು ಹಣ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕಂತೆ-ಕಂತೆ ಹಣ, ವಜ್ರ-ವೈಡೂರ್ಯ ಪತ್ತೆ
Lokayukta Raid
Follow us on

ಬೆಂಗಳೂರು, (ಮಾರ್ಚ್​ 06): ಭ್ರಷ್ಟ ಸರ್ಕಾರಿ ಅಧಿಕಾರಿಗಳ (Government Officers) ಲೋಕಾಯುಕ್ತ (Lokayukta Raid) ಬೇಟೆಯಾಡಿದೆ. ಇಂದು(ಮಾರ್ಚ್​ 06) ಏಕಕಾಲದಲ್ಲಿ ಕರ್ನಾಟಕದ 8 ವಿವಿಧ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ, ಮನೆಯ ಇಂಚಿಂಚು ಜಾಲಾಡಿದೆ. ಬೆಂಗಳೂರು(Bengaluru), ತುಮಕೂರು, ಕೊಲಾರ(Kolar) ಸೇರಿದಂತೆ 7 ಜಿಲ್ಲೆಗಳಲ್ಲಿ ಒಟ್ಟು 8 ಅಧಿಕಾರಿಗಳಿಗೆ ಶಾಕ್ ನೀಡಿದ್ದು, ಅಧಿಕಾರಿಗಳ ಕಚೇರಿ, ಮನೆಗಳ ಮೇಲೆ ದಾಳಿ ಮಾಡಿದ್ದು, ಅಪಾರ ಸಂಪತ್ತು ಪತ್ತೆ ಮಾಡಿದ್ದಾರೆ.

ಏಕಕಲಾದಲ್ಲಿ 8 ಅಧಿಕಾರಿಗಳಿಗೆ ಶಾಕ್

ಬೆಂಗಳೂರಿನಲ್ಲಿ ವಾಸವಿರುವ ರೂರಲ್ ಡೆವಲಪ್ಮೆಂಟ್ ಪಂಚಾಯತ್ ರಾಜ್ ನ ಚೀಫ್ ಇಂಜಿನಿಯರ್ ನಂಜುಡಪ್ಪಗೆ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು, ಇಂದು ಬೆಳ್ಳಬೆಳಿಗ್ಗೆ ಬಸವೇಶ್ವರನಗರದ ಅವರ ನಿವಾಸದ ಬಾಗಿಲು ತಟ್ಟಿದ್ದರು..14 ಅಧಿಕಾರಿಗಳು ಎಂಟ್ರಿ ಕೊಟ್ಟು ಮನೆಯಿಡಿ ತಪಾಸಣೆ ನಡೆಸಿದರು. ಈ ವೇಳೆ ಮನೆಯಲ್ಲಿ ಬರೊಬ್ಬರಿ 60 ಲಕ್ಷ ಮೌಲ್ಯದ ವಸ್ತಗಳು ಪತ್ತೆಯಾಗಿದ್ದು, ಇದರಲ್ಲಿ 51 ಲಕ್ಷ ಮೌಲ್ಯದ 841 ಗ್ರಾಂ ಚಿನ್ನ, 4.66 ಲಕ್ಷ ಮೌಲ್ಯದ 5936 ಗ್ರಾಂ ಬೆಳ್ಳಿ, 3.91 ಲಕ್ಷ ನಗದು ಹಾಗೂ 60 ಸಾವಿರ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಇದರ ಜೊತೆಗೆ ಭವ್ಯವಾದ ಮನೆ ಹಾಗೂ ಆ ಮನೆಯಲ್ಲಿದ್ದ 39 ಲಕ್ಷ ಮೌಲ್ಯದ ನಾಲ್ಕು ಕಾರುಗಳು ಸಹ ಪತ್ತೆಯಾಗಿವೆ.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮುಖ್ಯ ಅಭಿಯಂತರರು ಟಿ. ಡಿ. ನಂಜುಂಡಪ್ಪ ಸೇರಿದ ಒಟ್ಟು 7 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟು 8,46‌, 22,953 ರೂ. ಚರ ಮತ್ತು ಸ್ಥಿರ ಆಸ್ತಿ ಪತ್ತೆಯಾಗಿದೆ. ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ- 7,46‌, 47, 466 ರೂ‌. ಇನ್ನು ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ- 99,75,487 ರೂ.

ಇದನ್ನೂ ಓದಿ
ಬೆಂಗಳೂರು ಸೇರಿ ಕರ್ನಾಟಕದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಕೆಪಿಎಸ್ಸಿ ಅಕ್ರಮಕ್ಕೆ ಬ್ರೇಕ್‌ ಹಾಕಲು ಕಾಯ್ದೆ ತಿದ್ದುಪಡಿಗೆ ನಿರ್ಧಾರ
ಹಾಲು ಉತ್ಪಾದಕರ 656 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ
ನಂದಿನಿ ಹಾಲಿನ ದರ ಏರಿಕೆ ಬಗ್ಗೆ KMF ಅಧ್ಯಕ್ಷ ನೀಡಿದ್ರು ಬಿಗ್​ ಅಪ್ಡೇಟ್​

ಇದನ್ನೂ ಓದಿ: ಭ್ರಷ್ಟರ ಬೇಟೆ: ಬೆಂಗಳೂರು ಸೇರಿ ಕರ್ನಾಟಕದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

BBMP ಕಾರ್ಯಪಾಲಕ ಅಭಿಯಂತರರ ಕೋಟ್ಯಾಂತರ ರೂ ಆಸ್ತಿ ಪತ್ತೆ

ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರು ಹೆಚ್. ಬಿ. ಕಲ್ಲೇಶಪ್ಪಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಒಟ್ಟು 6,50,52, 663 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆಯಾಗಿದೆ. ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ-₹4 ಕೋಟಿ 97 ಲಕ್ಷದ 34 ಸಾವಿರ ರೂ. ಒಟ್ಟು ಚರ ಆಸ್ತಿಯ ಅಂದಾಜು ಮೌಲ್ಯ: 1 ಕೋಟಿ 53 ಲಕ್ಷದ 18 ಸಾವಿರದ 663 ರೂ.

ಕಲಬುರಗಿಯಲ್ಲಿ ಚೀಫ್​ ಇಂಜಿನಿಯರ್​ ಮನೆಯಲ್ಲಿ ಸಿಕ್ಕಿದ್ದೇನು?

ಲೋಕೋಪಯೋಗಿ ಇಲಾಖೆಯ ಚೀಫ್​ ಇಂಜಿನಿಯರ್​ ಜಗನ್ನಾಥನ ಮನೆಯಲ್ಲಿ ಅಪಾರ ಪ್ರಮಾಣದ ವಜ್ರ, ವೈಡೂರ್ಯ ಪತ್ತೆಯಾಗಿದೆ. ಇನ್ನು ಇದು ಮನೆಯೋ, ಅರಮನೆಯೋ ಎಂದು ಎಂಥವರೂ ಒಮ್ಮೆ ಕನ್ಫ್ಯೂಸ್ ಆಗೋದು ಗ್ಯಾರಂಟಿ. ಕಲಬುರಗಿಯ NGO ಕಾಲೋನಿ ನಿವಾಸದಲ್ಲಿ 2 ಕೆಜಿಗೂ ಅಧಿಕ ಬೆಳ್ಳಿ ಪತ್ತೆಯಾಗಿದೆ. ಮನೆಯ ಲಾಕರ್​ನಲ್ಲಿ ಡೈಮಂಡ್​ ರಿಂಗ್ ಸೇರಿದಂತೆ 30ಕ್ಕೂ ಹೆಚ್ಚು ಗೋಲ್ಡ್ ಕಾಯಿನ್ ಪತ್ತೆಯಾಗಿದೆ. ಕೋಟಿ ಕೋಟಿ ಮೌಲ್ಯ ಚಿನ್ನಾಭರಣ ಕಂಡು ಅಧಿಕಾರಿಗಳೇ ಹೌಹಾರಿದ್ದಾರೆ.

ಚೀಫ್ ಇಂಜಿಯರ್​ ಆಗಿರೋ ಜಗನ್ನಾಥ್​, ನಿವೃತ್ತಿಗೆ ಕೇವಲ 25 ದಿನಗಳಷ್ಟೇ ಬಾಕಿ ಇತ್ತು. ಇದೇ ತಿಂಗಳ 31ಕ್ಕೆ ನಿವೃತ್ತಿ ಆಗ್ಬೇಕಿತ್ತು. ಇದೇ ಹೊತ್ತಿನಲ್ಲೇ ಲೋಕಾ ಬಲೆಗೆ ಸಿಲುಕುವಂತೆ ಆಗಿರೋದು ಟೆನ್ಷನ್ ತಂದಿಟ್ಟಿದೆ. ಒಂದೇ ಕಡೆ ದಾಳಿ ಆಗಿಲ್ಲ, ಜಗನ್ನಾಥಗೆ ಸೇರಿದ 5 ಕಡೆಗಳಲ್ಲೂ ರೇಡ್​ ಮಾಡಲಾಗಿದೆ. ಆಳಂದ, ತಾವರಗರೆ, ಬೀದರ್, ಬಸವಕಲ್ಯಾಣ ಸೇರಿದಂತೆ ಹಲವು ಕಡೆ 60ಕ್ಕೂ ಹೆಚ್ಚು ಎಕರೆ ಆಸ್ತಿ ಪತ್ತೆಯಾಗಿದೆ.

ದಾವಣಗೆರೆಯಲ್ಲಿ ಫುಡ್ ಸೇಫ್ಟಿ ಅಧಿಕಾರಿ ಮನೆ ಮೇಲೆ ದಾಳಿ

ಇನ್ನು ದಾವಣಗೆರೆಯಲ್ಲಿ ಫುಡ್​ ಸೇಫ್ಟಿ ಅಧಿಕಾರಿ ಡಾ.ನಾಗರಾಜ್ ಮನೆ ಮೇಲೂ ಲೋಕಾ ರೇಡ್​ ಮಾಡ್ತು. ಮನೆಯಲ್ಲಿ ಲಕ್ಷಾಂತರ ಮೌಲ್ಯದ ವಾಚ್, ಚಿನ್ನ, ಬೆಳ್ಳಿ ವಸ್ತುಗಳು ಪತ್ತೆಯಾಗಿದೆ. ಇನ್ನ ನಾಗರಾಜ್​ಗೆ ಸೇರಿದ ಐದು ಸ್ಥಳಗಳಲ್ಲಿ ಅಕ್ರಮ ಆಸ್ತಿ ಸಂಬಂಧ ತನಿಖೆ ಮಾಡಲಾಯ್ತು.

ಕೋಲಾರದಲ್ಲಿ ಬೆಸ್ಕಾಂ ಎಇಇ ನಾಗರಾಜ್​ಗೆ ಶಾಕ್!

ಕೋಲಾರದಲ್ಲಿ ಬೆಸ್ಕಾಂ ಎಇಇ ನಾಗರಾಜ್​ಗೆ ಸೇರಿದ ಮೂರು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ರು. ಬೆಂಗಳೂರಿನ ರಾಜಾಜಿನಗರ ಬೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ರು. ಕೆಆರ್​.ಪುರಂ ಬಳಿಕ ಪ್ರಿಯದರ್ಶಿನಿ ಬಡಾವಣೆಯ ಮನೆ, ರಾಜಾಜಿನಗರ ಕಚೇರಿ, ಸಂಬಂಧಿಕರ ಮನೆ ಮೇಲೂ ದಾಳಿ ಮಾಡಲಾಗಿದೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಕೊಳ್ಳೇಗಾಲದಲ್ಲಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳು ಪತ್ತೆಯಾಗಿದೆ.

ಇನ್ನುಳಿದಂತೆ ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್, ವಿಜಯಪುರದಲ್ಲಿ ಕೆಹೆಚ್​ಬಿ FDA ಶಿವಾನಂದ ಕೆಂಬಾವಿ, ತುಮಕೂರಿನಲ್ಲಿ ವೈದ್ಯ ಜಗದೀಶ್​ ಮನೆ ಮೇಲೂ ರೇಡ್​ ಮಾಡಲಾಯ್ತು, ಆಸ್ತಿ, ಪಾಸ್ತಿ ಸಂಬಂಧ ಶೋಧ ಮಾಡಲಾಯ್ತು.

ಅದೇನೇ ಹೇಳಿ, ಭ್ರಷ್ಟಾಚಾರ ಆರೋಪದ ಮೇಲೆ ಬೆಳ್ಳಂಬೆಳಗ್ಗೆ, ಬೆಂಗಳೂರು ಸೇರಿದಂತೆ ರಾಜ್ಯದ 7 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ದಾಳಿ ವೇಳೆ ಅಪಾರ ಪ್ರಮಾಣದ ವಜ್ರ, ವೈಡೂರ್ಯ ಪತ್ತೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Thu, 6 March 25